ಅತಿ ವೇಗದ ದ್ವಿಶತಕ ಬಾರಿಸಿದರೂ ಪಂದ್ಯ ಶ್ರೇಷ್ಠ ಕೊಡಲಿಲ್ಲ – ಪೃಥ್ವಿ ಶಾ ಡಬಲ್ ಸೆಂಚುರಿಗೆ ಬೆಲೆ ಇಲ್ವಾ?
ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪೃಥ್ವಿ ಜೊತೆ ಹಂಚಿಕೊಂಡ ಗಾಯಕ್ವಾಡ್

ಅತಿ ವೇಗದ ದ್ವಿಶತಕ ಬಾರಿಸಿದರೂ ಪಂದ್ಯ ಶ್ರೇಷ್ಠ ಕೊಡಲಿಲ್ಲ –  ಪೃಥ್ವಿ ಶಾ ಡಬಲ್ ಸೆಂಚುರಿಗೆ ಬೆಲೆ ಇಲ್ವಾ?ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪೃಥ್ವಿ ಜೊತೆ ಹಂಚಿಕೊಂಡ ಗಾಯಕ್ವಾಡ್

ಅತಿವೇಗದ ದ್ವಿಶತಕ ಸಿಡಿಸಿ ಕ್ರಿಕೆಟ್ ಲೋಕವನ್ನೇ ತನ್ನತ್ತ ನೋಡುವಂತೆ ಮಾಡಿದ್ದರು ಪೃಥ್ವಿ ಶಾ. ತಂಡ ಗೆದ್ದರೂ ಕೂಡಾ ಪಂದ್ಯಶ್ರೇಷ್ಠ ಪ್ರಶಸ್ತಿ ಇವರಿಗೆ ಸಿಗಲಿಲ್ಲ. ಶತಕ ಸಿಡಿಸಿದ ರುತುರಾಜ್ ಗಾಯಕ್ವಾಡ್‌ಗೆ ಪ್ರಶಸ್ತಿ ಕೊಡಲಾಯ್ತು. ಆದರೆ, ಇಲ್ಲಿ ಗಾಯಕ್ವಾಡ್ ನಡೆ ಮೆಚ್ಚಲೇಬೇಕು. ಕ್ರೀಡಾಸ್ಪೂರ್ತಿ ಮೆರೆದ ರುತುರಾಜ್ ಗಾಯಕ್ವಾಡ್ ಪೃಥ್ವಿ ಶಾ ಅವರ ಜೊತೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಂಡರು.

ಇದನ್ನೂ ಓದಿ:ಅತೀ ವೇಗದ ಡಬಲ್ ಸೆಂಚುರಿ ಸಿಡಿಸಿದ ಪೃಥ್ವಿ ಶಾ – ಟೀಕೆ ಮಾಡಿದವರಿಗೆ ಬ್ಯಾಟಿಂಗ್‌ನಲ್ಲಿ ಉತ್ತರ

ಚಂಡೀಗಢ್​​ನ ಸೆಕ್ಟೆರ್-16 ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚಂಡೀಗಢ್​​ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ ಪರ ರುತುರಾಜ್ ಗಾಯಕ್ವಾಡ್ 116 ರನ್ ಬಾರಿಸಿದ್ದರು. ಈ ಶತಕದ ನೆರವಿನೊಂದಿಗೆ ಮಹಾರಾಷ್ಟ್ರ ತಂಡ ಮೊದಲ ಇನಿಂಗ್ಸ್​ನಲ್ಲಿ 313 ರನ್ ಪೇರಿಸಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಚಂಡೀಗಢ್​​ ತಂಡ 209 ರನ್​ಗಳಿಗೆ ಆಲೌಟ್ ಆಗಿತ್ತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಮಹಾರಾಷ್ಟ್ರ ಪರ ಪೃಥ್ವಿ ಶಾ 156 ಎಸೆತಗಳಲ್ಲಿ 29 ಫೋರ್ ಹಾಗೂ 5 ಸಿಕ್ಸರ್​ಗಳೊಂದಿಗೆ ಅಜೇಯ 222 ರನ್ ಬಾರಿಸಿದ್ದರು. ಈ ಮೂಲಕ ಮಹಾರಾಷ್ಟ್ರ ತಂಡ 3 ವಿಕೆಟ್ ನಷ್ಟಕ್ಕೆ 359 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು. ಮೊದಲ ಇನಿಂಗ್ಸ್​ನಲ್ಲಿನ 104 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 464 ರನ್​ಗಳ ಗುರಿ ಪಡೆದ ಚಂಡೀಗಢ್​​ ತಂಡವನ್ನು 359 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಮಹಾರಾಷ್ಟ್ರ ತಂಡ ಯಶಸ್ವಿಯಾಗಿದೆ. ಈ ಮೂಲಕ 144 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ದ್ವಿಶತಕ ಬಾರಿಸಿದ ಪೃಥ್ವಿ ಶಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿರಲಿಲ್ಲ. ಬದಲಾಗಿ ಮೊದಲ ಇನಿಂಗ್ಸ್​ನಲ್ಲಿ ಶತಕ ಸಿಡಿಸಿ ಮಹಾರಾಷ್ಟ್ರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರುತುರಾಜ್ ಗಾಯಕ್ವಾಡ್​ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಗಿತ್ತು. ಆದರೆ ಈ ಪ್ರಶಸ್ತಿಯನ್ನು ರುತುರಾಜ್ ಗಾಯಕ್ವಾಡ್ ತನ್ನ ಸಹ ಆಟಗಾರ ಪೃಥ್ವಿ ಶಾ ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು. ಇದೀಗ ಗಾಯಕ್ವಾಡ್ ಅವರ ನಡೆಗೆ ಬಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಪೃಥ್ವಿ ಶಾ ದ್ವಿಶತಕ ಸಿಡಿಸಿದ್ದರು. ಜೊತೆಗೆ ಅತಿವೇಗದ ಡಬಲ್ ಸೆಂಚುರಿ ಮಾಡಿ ಗಮನ ಸೆಳೆದಿದ್ದರು. ಆದರೆ, ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಟ್ಟಿಲ್ಲ ಯಾಕೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

Sulekha