ಡ್ರೋನ್‌ ಗೆ ಗಗನಾ ತಬ್ಬಿಕೊಳ್ಳೋ ಆಸೆ.. ಆಕ್ಟಿಂಗ್‌ ಓಕೆ.. OVER ACTING ಯಾಕೆ? – TRP ಜೋಡಿ.. ವಿನ್ನರ್‌ ಇವರೇನಾ?

ಡ್ರೋನ್‌ ಗೆ ಗಗನಾ ತಬ್ಬಿಕೊಳ್ಳೋ ಆಸೆ.. ಆಕ್ಟಿಂಗ್‌ ಓಕೆ.. OVER ACTING ಯಾಕೆ? – TRP ಜೋಡಿ.. ವಿನ್ನರ್‌ ಇವರೇನಾ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ವೀಕ್ಷಕರಿಗೆ ಸಖತ್‌ ಮನರಂಜನೆ ನೀಡ್ತಿದೆ. ಈ ಶೋನಲ್ಲಿ ಗಗನಾ ಹಾಗೂ ಡ್ರೋನ್‌ ಪ್ರತಾಪ್‌ ಜೋಡಿ ವೀಕ್ಷಕರನ್ನ ಮೋಡಿ ಮಾಡಿದೆ. ಇದೀಗ ಡ್ರೋನ್‌ ಪ್ರತಾಪ್‌ ಗಗನಾ ಮನೆಗೆ ಬಂದಿದ್ದು.. ಗ್ರ್ಯಾಂಡ್‌ ವೆಲ್‌ಕಮ್‌ ಸಿಕ್ಕಿದೆ. ಆದ್ರೆ ಗಗನಾ ಮನೆಗೆ ಹೋಗ್ತಿದ್ದಂತೆ ಡ್ರೋನ್‌ ಪ್ರತಾಪ್‌ ಹೊಸ ಆಸೆ ಶುರುವಾಗಿದೆ. ಗಗನಾಳನ್ನ ತಬ್ಬಿಕೊಳ್ಳಲಾ ಅಂತಾ ಡ್ರೋನ್‌ ಪ್ರತಾಪ್‌ ಕೇಳಿದ್ದಾರೆ..

ಇದನ್ನೂ ಓದಿ: IND Vs PAK ದಾಖಲೆ ಮುರಿದ RCB – IPL ಫೈನಲ್ ಮ್ಯಾಚ್ ನೋಡಿದವರೆಷ್ಟು?

ಭರ್ಜರಿ ಬ್ಯಾಚುಲರ್ಸ್‌ ನಲ್ಲಿ ಭರ್ಜರಿ ಮನರಂಜನೆ ನೀಡ್ತಿರೋದು ಅಂದ್ರೆ ಅದು ಗಗನಾ ಹಾಗೂ ಡ್ರೋನ್‌ ಪ್ರತಾಪ್. ಪ್ರತಿ ಸಂಚಿಕೆಯಲ್ಲೂ ಹೊಸ ಹೊಸ ಕಾನ್ಸೆಪ್ಟ್‌ ಮೂಲಕ ವೀಕ್ಷಕರನ್ನ ರಂಜಿಸ್ತಾ ಇದ್ದಾರೆ. ಈ ವಾರ ಏಂಜಲ್ಸ್‌ ಹೋಮ್‌ ಟೂರ್‌ ಕಾನ್ಸೆಪ್ಟ್‌ ಇತ್ತು.. ಡ್ರೋನ್‌ ಪ್ರತಾಪ್‌ ಗಗನಾ ಮನೆಗೆ ಹೋಗಿದ್ದಾರೆ.. ಇದ್ರ ಪೋವೋ ವನ್ನ ಜೀಕನ್ನಡ ರಿಲೀಸ್‌ ಮಾಡಿದೆ. ಡ್ರೋನ್‌ ಚಿತ್ರದುರ್ಗಕ್ಕೆ ತಲುಪ್ತಿದ್ದಂತೆ ಊರವರು ಗ್ರ್ಯಾಂಡ್‌ ವೆಲ್‌ಕಮ್‌ ಮಾಡಿದ್ದಾರೆ.. ಡ್ರೋನ್‌ ಪ್ರತಾಪ್‌ ಗೆ ಹೂವಿನ ಹಾರ ಹಾಕಿ ಸ್ವಾಗತ ಮಾಡಿದ್ದಾರೆ. ಬಳಿಕ ಊರು ತುಂಬಾ ಮೆರವಣಿಗೆ ಮಾಡಿ ಗಗನಾ ಮನೆಗೆ ಕರ್ಕೊಂಡು ಬಂದಿದ್ದಾರೆ.. ಮನೆಗೆ ಡ್ರೋನ್‌ ಪ್ರತಾಪ್‌ ಗೆ ಆರತಿ ಮಾಡಿ ಕರ್ಕೊಂಡು ಬಂದಿದ್ದಾರೆ.. ಆದ್ರೆ ಗಗನಾ ಮನೆಗೆ ಬರ್ತಿದ್ದಂತೆ ಡ್ರೋಪ್‌ ಪ್ರತಾಪ್‌ ಗೆ ಹೊಸ ಆಸೆ ಶುರುವಾಗಿದೆ..

ಹೌದು.. ಡ್ರೋನ್‌ ಪ್ರತಾಪ್‌ ಮನೆಗೆ ಬರ್ತಿದ್ದಂತೆ ಗಗನಾ ಮನೆ ತೋರ್ಸಿದ್ದಾರೆ., ಬಳಿಕ ಮ್ಯೂಸಿಕ್‌ ಹಾಕಿ ಮನೆಯವರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಗಗನಾ ತಾಯಿ ಡ್ರೋನ್‌ ಪ್ರತಾಪ್‌ ಗೆ ಊಟ ಮಾಡಿಸಿದ್ರು.. ಬಳಿಕ ಊರ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಂಡಿದ್ರು.. ಡ್ರೋನ್‌ ಪ್ರತಾಪ್‌ ದೇವರ ಪಲ್ಲಕ್ಕಿ ಹೊತ್ತಿದ್ದಾರೆ. ಈ ಸಂಭ್ರಮವನ್ನ ನೋಡಿ ಜಡ್ಜಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ರು.. ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಊರೇ ಸಂಭ್ರಮಿಸಿತ್ತಲ್ಲ.. ಅದು ನಿಮ್ಮಲ್ಲಿ ಕಾಣಿಸ್ತು ಅಂತಾ ಹೇಳಿದ್ದಾರೆ.. ಇನ್ನು ನಿರಂಜನ್‌ ಗಗನಾ ಹಾಗೂ ಡ್ರೋನ್ ಪ್ರತಾಪ್‌ ನ ಕಾಲೆಳೆದಿದ್ದಾರೆ.. ಆಗ ಗಗನಾರನ್ನ ತಬ್ಬಿಕೊಳ್ಳೋ ಆಸೆ ಆಯ್ತು ಅಂತಾ ಡ್ರೋನ್‌ ಹೇಳಿದ್ದಾರೆ.

ನಿರಂಜನ್‌ ಗಗನಾ ಏನ್‌ ಹೇಳ್ಬೇಕು ಅಂತಿದ್ರಿ ಅಂತಾ ಕೇಳಿದ್ದಾರೆ.. ಬಳಿಕ ಇವರಿಬ್ರ ಮಧ್ಯೆ ನಿಂತ ನಿರಂಜನ್..‌ ನಾನು ಮರ.. ಹೂವ ಉದುರ್ತಾ ಇದೆ.. ಅಂದಿದ್ದಾರೆ.. ಅವರಿಗೆ ಒರಗಿಕೊಂಡು ನಿಂತ ಡ್ರೋನ್‌, ಅಡುಗೆ ಮನೆಯಲ್ಲಿ ತುಂಬಾ ಚೆನ್ನಾಗಿ ಕಾಣ್ತಿದ್ರಿ.. ನಿಮ್ಮನ್ನ ತಬ್ಬಿಕೊಳ್ಳೋಣ ಅಂತಾ ಅನ್ನಿಸ್ತು ಅಂತಾ ಹೇಳಿದ್ದಾರೆ.. ಆಗ ಗಗನಾ ನಾಚಿ ನೀರಾಗಿದ್ದಾರೆ..

ಇನ್ನು ಈ ಪ್ರೋಮೋ ನೋಡಿದ ವೀಕ್ಷಕರು ನಾನಾ ಕಾಮೆಂಟ್‌ ಮಾಡಿದ್ದಾರೆ.. ಈ ಸಮಾಜಕ್ಕೆ ಈ ಶೋನಿಂದ ಏನ್‌ ಸಂದೇಶ ಸಿಕ್ತಿದೆ.. ಅವರ ಮನೆಗೆ ಇವ್ರು ಹೋಗೋದು, ಇವರ ಮನೆಗೆ ಅವರು ಬರೋದು.. ಇದನ್ನ ಬಿಟ್ಟು ಏನಾದ್ರು ಹೊಸ ಕಂಟೆಂಟ್ ಕೊಡಿ.. ಅಂತಾ ಕೆಲವರು ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಆಕ್ಟಿಂಗ್‌ ಮಾಡ್ಬೇಕು.. ಆದ್ರೆ ಓವರ್‌ ಆಕ್ಟಿಂಗ್‌ ಮಾಡ್ಬಾರ್ದು.. ಟಿಆರ್‌ಪಿ ಬರುತ್ತೆ.. ಶೋ ನಲ್ಲಿ ವಿನ್‌ ಆಗ್ಬೇಕು ಅಂತಾ ಏನೇನೋ ಮಾಡ್ಬಾರ್ದು ಅಂತಾ ಹೇಳಿದ್ದಾರೆ.. ಇನ್ನೂ ಕೆಲವರು ಗಗನಾ ಡ್ರೋನ್‌ ಜೋಡಿ ಚೆನ್ನಾಗಿದೆ.. ಇವರಿಬ್ರೇ ಈ ಶೋ ವಿನ್ನರ್‌ ಆಗ್ಬೇಕು ಅಂತಾ ಕಾಮೆಂಟ್‌ ಮಾಡಿದ್ದಾರೆ..

Shwetha M