ಡ್ರೋನ್ ಗೆ ಗಗನಾ ಪ್ರಪೋಸ್.. ಮಾತಿನ ಮಲ್ಲಿ ಈಗ ರೋಬೋಟ್ – ಪ್ರತಾಪ್ ಗೆ ನೀತು ಸರ್‌ಪ್ರೈಸ್

ಭರ್ಜರಿ ಬ್ಯಾಚುಲರ್ಸ್ ದಿನದಿಂದ ದಿನಕ್ಕೆ ವೀಕ್ಷಕರಿಗೆ ಸಖತ್ ಮನರಂಜನೆ ನೀಡ್ತಾ ಇದೆ. 10 ಸ್ಪರ್ಧಿಗಳು ತಮ್ಮ ಪಾರ್ಟ್ನರ್ ಗಳನ್ನ ಇಂಪ್ರೆಸ್ ಮಾಡಲು ವಿಭಿನ್ನವಾಗಿ ಪ್ರಯತ್ನಿಸ್ತಿದ್ದಾರೆ. ಈ ಶೋನಲ್ಲಿ ಡ್ರೋನ್ ಪ್ರತಾಪ್ ಹಾಗೂ ಗಗನಾ ಜೋಡಿ ವೀಕ್ಷಕರನ್ನ ಮೋಡಿ ಮಾಡ್ತಿದೆ. ಡ್ರೋನ್ ಪ್ರತಾಪ್ ಪ್ರತಿ ವಾರ ಡಿಫ್ರೆಂಟ್ ಡಿಫ್ರೆಂಟ್ ಥೀಮ್ ಇಟ್ಕೊಂಡು ಗಗನಾಗೆ ಸರ್‌ಪ್ರೈಸ್ ಕೊಡ್ತಾ ಬಂದಿದ್ದಾರೆ. ಆದ್ರೆ ಈ ವಾರ ಗಗನಾ ಡ್ರೋನ್ ಪ್ರತಾಪ್ ಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ಇದ್ರಿಂದ ಪ್ರತಾಪ್ ಫುಲ್ ಎಮೋಷನಲ್ ಆಗಿದ್ದಾರೆ.
ಇದನ್ನೂ ಓದಿ: ಕೂದಲು ಹೋಯ್ತು.. ಈಗ ಉಗುರು ಉದುರುವ ಸಮಸ್ಯೆ! – ಮಹಾರಾಷ್ಟ್ರದಲ್ಲಿ ಭಯಾನಕ ಖಾಯಿಲೆ ಪತ್ತೆ!
ಭರ್ಜರಿ ಬ್ಯಾಚುಲರ್ಸ್ ನಲ್ಲಿ ಪ್ರತಿವಾರ ಬ್ಯಾಚುಲರ್ಸ್‌ಗಳಿಗೆ ಟಾಸ್ಕ್ ನೀಡಲಾಗ್ತಿದೆ. ಕಳೆದ ವಾರ ಬ್ಯಾಚುಲರ್ಸ್‌ಗಳಿಗೆ ಲವ್ ಕೆಮಿಸ್ಟ್ರಿ ರೌಂಡ್ ಇತ್ತು. ಆದ್ರೆ ಈ ವಾರ ಏಂಜಲ್ಸ್ಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಈ ವಾರ Surprise to Bachelors ರೌಂಡ್ ಇತ್ತು. ಇದ್ರಲ್ಲಿ ಮೆಂಟರ್ಸ್ ತಮ್ಮ ಪಾರ್ಟ್ನರ್ ಗೆ ಸರ್‌ಪ್ರೈಸ್ ನೀಡ್ಬೇಕಿತ್ತು. ಏಂಜಲ್‌ಗಳು ಕೊಟ್ಟ ಭಾವನಾತ್ಮಕ ಸರ್ಪ್ರೈಸ್ಗೆ ಬ್ಯಾಚುಲರ್ಸ್ ಮನಸೋತ್ತಿದ್ದಾರೆ. ಈ ಬಾರಿ ಗಗನಾ ಡ್ರೋನ್ ಪ್ರತಾಪ್ ಗೆ ಇಂಪ್ರೆಸ್ ಮಾಡಲು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಇದನ್ನ ನೋಡಿ ಪ್ರತಾಪ್ ಭಾವುಕರಾಗಿದ್ದಾರೆ.
ಪ್ರತಿ ವಾರ ಪ್ರತಾಪ್ ಗಗನಾಗೆ ಸ್ಪೆಷಲ್ ಸರ್‌ಪ್ರೈಸ್ ಕೊಡ್ತಾ ಬಂದಿದ್ರು. ಹೆಲಿಕಾಪ್ಟರ್ ನಲ್ಲಿ ಕರ್ಕೊಂಡು ಹೋಗಿ ಅರಶಿನ ಕುಂಕುಮ ಕೊಟ್ಟಿದ್ರು, ಸ್ಟೇಜ್ ನಲ್ಲಿ ಕಾಲುಂಗುರ ತೊಡಿಸಿದ್ರು.. ಹೀಗೆ ಒಂದಾದ ಮೇಲೊಂದು ಸರ್‌ರ್ಪ್ರೈಸ್ ಕೊಡ್ತಾ ಬಂದಿದ್ರು. ಇದೀಗ ಮೊದಲ ಬಾರಿಗೆ ಗಗನಾ ಡ್ರೋನ್ ಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ಆರಂಭದಲ್ಲಿ ಗಗನಾ ಡ್ರೋನ್ ಗೆ ಫ್ಲವರ್ ಬೊಕ್ಕೆ ಕೊಟ್ಟು ವೆಲ್‌ಕಮ್ ಮಾಡಿದ್ರು. ಅದಾದ್ಮೇಲೆ ಕೇಕ್ ಕಟ್ ಮಾಡಿಸಿದ ಬಳಿಕ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ತೋರಿಸಿದ್ರು. ಇದನ್ನ ನೋಡಿ ಪ್ರತಾಪ್ ಫುಲ್ ಖುಷಿಯಲ್ಲಿ ತೇಲಾಡಿದ್ರು. ಬಳಿಕ ಸ್ಟೇಜ್ ಗೆ ಗಗನಾ ರೋಬೋಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಡ್ರೋನ್ ಗೆ ಆರ್‌ಯೂ ಇಂಪ್ರೆಸ್ಡ್ ಅಂತಾ ಕೇಳಿದ್ದಾರೆ. ಅಷ್ಟೊತ್ತಿಗೆ ಡ್ರೋನ್ ಅಭಿಮಾನಿಗಳನ್ನ ಸ್ಟೇಜ್ ಗೆ ಕರೆಸಿದ್ದಾರೆ.. ಸ್ಟೇಜ್ ಗೆ ಬಂದವರಲ್ಲಿ ಒಬ್ರು ಅಭಿಮಾಮಿ, ಹುಟ್ಟಿದ್ರೆ ಪ್ರತಾಪ್ ನಂತಹ ಮಕ್ಕಳು ಹುಟ್ಬೇಕು ಅಂತ ಹೇಳಿದ್ದಾರೆ.
ಇನ್ನು ಡ್ರೋನ್ ಗೆ ಮತ್ತೊಂದು ಬಿಗ್ ಸರ್‌ಪ್ರೈಸ್ ಕಾದಿತ್ತು. ಗಗನಾ ಡ್ರೋನ್ ಪ್ರತಾಪ್ ಫೇವರೆಟ್ ಪರ್ಸನ್ ಅನ್ನ ಶೋಗೆ ಕರ್ಕೊಂಡು ಬಂದಿದ್ದಾರೆ. ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ನೀತು ವನಜಾಕ್ಷಿ ಅವರನ್ನ ಕರ್ಕೊಂಡು ಬಂದಿದ್ದಾರೆ. ರಕ್ತ ಸಂಬಂಧಕ್ಕಿಂತ ಮೀರಿದ ಬಂಧ ನಮ್ದು ಅಂತಾ ತಮ್ಮ ಹಾಗೂ ಡ್ರೋನ್ ನಡುವಿನ ಒಡನಾಟವನ್ನ ನೀತು ಹೇಳಿದ್ದಾರೆ. ಅಷ್ಟೊತ್ತಿಗೆ ಡ್ರೋನ್ ಫುಲ್ ಭಾವುಕರಾಗಿದ್ದಾರೆ. ಗಗನಾ ಸರ್‌ಪ್ರೈಸ್ ನೋಡಿ ಜಡ್ಜಸ್ ಕೂಡ ಖುಷಿಯಾದ್ರು. ಒಳ್ಳೆ ಟೆಕ್ನಿಕ್ ಯೂಸ್ ಮಾಡಿ ಸರ್‌ಪ್ರೈಸ್ ಕೊಟ್ಟಿದ್ದೀಯಾ ಅಂತಾ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. ಒಟ್ಟಾರೆ ಈ ವಾರದ ಭರ್ಜರಿ ಬ್ಯಾಚುಲರ್ಸ್ ಸಂಚಿಕೆ ವೀಕ್ಷಕರಿಗೆ ಸಖತ್ ಮನರಂಜನೆ ನೀಡಲಿದೆ.