ಗಗನ್‌ಗೆ ಕೈ ಕೊಟ್ಟ ಶೆಟ್ಟಿ ಡಾನ್ – ಯಶಸ್ ಪ್ರೀತಿಯಲ್ಲಿ ಬಿದ್ದ ಸೌಂದರ್ಯ

ಬಿಗ್‌ಬಾಸ್ ಮನೆಯಲ್ಲಿ ನಡೆಯುತ್ತಿದ್ದ ಶೆಟ್ಟಿ ಡಾನ್ ಸ್ವಯಂವರದಲ್ಲಿ ಸೌಂದರ್ಯ ವರನ ಆಯ್ಕೆ ಮಾಡಿದ್ದಾರೆ. ಸದಾ ಹಿಂದೆ ಮುಂದೆ ತಿರುಗುತ್ತಿದ್ದ, ಪದೇ ಪದೇ ಲವ್ ಯೂ ಎಂದು ಹೇಳುತ್ತಾ ಶೆಟ್ಟಿ ಡಾನ್ ಮನವೊಲಿಸಿಕೊಳ್ಳುವಲ್ಲಿ ಯಶಸ್ ಸಕ್ಸಸ್ ಆಗಿದ್ದಾರೆ. ಆದರೆ, ಗಗನ್ ಈ ಟಾಸ್ಕ್‌ನಲ್ಲಿ ಸೋತಿದ್ದಾರೆ.
ಇದನ್ನೂ ಓದಿ:ಶೆಟ್ಟಿ ಡಾನ್ ಮೆಚ್ಚಿನ ವರ ಯಾರು? – ಗಗನ್ ಮೇಲೆ ಸೌಂದರ್ಯಾಗೆ ಮನಸಾಗುತ್ತಾ?
ದೊಡ್ಮನೆಯಲ್ಲಿ ಈಗ ಸ್ವಯಂವರ ಸಂಭ್ರಮಕ್ಕೆ ತೆರೆ ಬಿದ್ದಿದೆ. ಶೆಟ್ಟಿ ಡಾನ್ ಮನಗೆಲ್ಲುವಲ್ಲಿ ಯಶಸ್ ಯಶಸ್ವೀಯಾಗಿದ್ದಾರೆ. ಬಿಗ್‌ಬಾಸ್ ಆಯ್ಕೆಯ ಇಬ್ಬರು ವರರಾದ ಗಗನ್ ಹಾಗೂ ಯಶಸ್ ಜೊತೆಗೆ ಸೌಂದರ್ಯ ಶೆಟ್ಟಿ ಡೇಟ್ ಮಾಡಿದ್ದರು. ರಕ್ಷಿತಾ ಶೆಟ್ಟಿ ಕೂಡ ಇವರೊಂದಿಗೆ ಕುಳಿತು ತನ್ನ ಅಕ್ಕನಿಗೆ ಒಪ್ಪುವ ಹಾಗೂ ಒಳ್ಳೆಯ ಬಾವವನ್ನು ಆಯ್ಕೆ ಮಾಡಲು ಸಹಾಯ ಮಾಡಿದರು. ನಂತರ ಗಗನ್ ಮತ್ತು ಯಶಸ್ ಡ್ಯಾನ್ಸ್ ಮೂಲಕ ಸೌಂದರ್ಯ ಶೆಟ್ಟಿ ಮನವೊಲಿಸಲು ಬಿಗ್‌ಬಾಸ್ ಟಾಸ್ಕ್ ನೀಡಿದರು. ಗಗನ್ ಹಾಗೂ ಯಶಸ್ ಅದ್ಭುತವಾಗಿ ಡ್ಯಾನ್ಸ್ ಮಾಡಿದರು. ಇಲ್ಲಿ ಯಶಸ್ ಸೌಂದರ್ಯ ಜೊತೆ ರೋಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದರು. ಆಗಲೇ ಸೌಂದರ್ಯ ಯಶಸ್ ಗೆ ಮನಸೋತಿದ್ದು ಗೊತ್ತಾಗಿತ್ತು. ನಂತರ ಮನೆಯವರೆಲ್ಲಾ ನೃತ್ಯ ಮಾಡಬೇಕಿತ್ತು. ಸೌಂದರ್ಯ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ, ಎರಡೂ ಮನೆಯವರು, ಕೊನೆಗೆ ಶೆಟ್ಟಿ ಡಾನ್ ತಂದೆ, ತಾಯಿ ಕೂಡ ಕುಣಿದು ಕುಪ್ಪಳಿಸಿದರು. ನಿಜಕ್ಕೂ ಮನೆಯಲ್ಲಿ ಒಂದು ಮದುವೆ ಸಂಭ್ರಮ ಎಂಬಂತೆಯೇ ಡ್ಯಾನ್ಸ್ ಮಾಡಿದರು.
ಕೊನೆಗೂ ಶೆಟ್ಟಿ ಡಾನ್ ಯಶ್ ಅವರಿಗೆ ತಮ್ಮ ಹೃದಯವನ್ನು ನೀಡಿದರು. ಇಲ್ಲಿ ಗಗನ್ ತಂಡಕ್ಕೆ ತೀವ್ರ ನಿರಾಸೆಯಾಯಿತು. ಇದೀಗ ಟಾಸ್ಕ್ ಗೆಲ್ಲುವ ಮೂಲಕ ಯಶಸ್, ತಾಂಡವ್ ರಾಮ್, ಸೋನಿಕಾ, ಗಾನವಿ, ಕುಮಾರಿ, ಜಗದೀಶ್ ಈ ವಾರದ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದಾರೆ. ಅದರಲ್ಲೂ ಜಗದೀಶ್ ಮತ್ತು ತಾಂಡವ್ ರಾಮ್ ಮಧ್ಯೆ ಕ್ಯಾಪ್ಟನ್ ರೇಸ್ ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ.

ನೋಡಿರಿ

