ಏಕವಚನದಲ್ಲಿ ಗಗನ್ ಮಾತಾಡಿದರೆ ಓಕೆ – ಬೇರೆಯವರು ಗೌರವ ಕೊಡದಿದ್ದರೆ ಸಿಟ್ಯಾಕೆ?

ಬಿಗ್ಬಾಸ್ ಮನೆಯಲ್ಲಿ ಎಲ್ಲರಿಗೂ ಗೌರವ ಕೊಡಬೇಕು. ಇದು ಕೂಡಾ ಮೂಲ ನಿಯಮ. ಆದರೆ, ಇಲ್ಲಿ ಗಗನ್ ಚಿನ್ನಪ್ಪ ಸಹ ಸ್ಪರ್ಧಿಗಳಿಗೆ ಏಕವಚನದಲ್ಲಿ ಮಾತಾಡಿಸುತ್ತಾರೆ. ಆದರೆ, ಅವರಿಗೆ ಮಾತ್ರ ಗೌರವ ಕೊಟ್ಟೇ ಮಾತಾಡಬೇಕಂತೆ.
ಇದನ್ನೂ ಓದಿ:ನಾಮಿನೇಷನ್ ಬಗ್ಗೆ ಮಾತಾಡಿ ಗಗನ್ ತಾಂಡವ್ ತಪ್ಪು ಮಾಡಿದ್ರಾ? – ಕಿಚ್ಚನ ಪಂಚಾಯಿತಿಯಲ್ಲಿ ಇಬ್ಬರೂ ಟಾರ್ಗೆಟ್
ಬಿಗ್ ಬಾಸ್ ಮನೆಯಲ್ಲಿ ವಿಐಪಿ ಗಗನ್ ಚಿನ್ನಪ್ಪ ಗೌರವದ ಬಗ್ಗೆ ಮಾತಾನಾಡಿರುವುದು ಸಖತ್ ಟ್ರೋಲ್ ಆಗಿದೆ. ಧನುಷ್ ಬ್ರೋ ಎಂದು ಕರೆದಿರುವುದ್ದಕ್ಕೆ ಕೂಗಾಡಿದ್ದ ಗಗನ್, ತಮಗೆ ಗೌರವ ನೀಡುವಂತೆ ತಾಕೀತು ಮಾಡಿ ಏಕವಚನದಲ್ಲಿ ನಿಂದಿಸಿದ್ದಾರೆ. ಈ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ವೀಕೆಂಡ್ನಲ್ಲಿ ಸುದೀಪ್ ಕ್ಲಾಸ್ ತಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಬಿಗ್ ಬಾಸ್ ಮನೆಯ ವಿಐಪಿ ಸದಸ್ಯನಾಗಿ ಗಗನ್ ಚಿನ್ನಪ್ಪ ಸವಲತ್ತು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಎಲ್ಲಾ ಟಾಸ್ಕ್ಗಳ ಜವಾಬ್ದಾರಿಯನ್ನು ಅವರಿಗೇ ನೀಡಲಾಗುತ್ತಿದೆ. ಈ ವೇಳೆ ಕಾಮನ್ ಮ್ಯಾನ್ ಆಗಿ ತೆರಳಿದ ಧನುಷ್ ಅವರು ಗಗನ್ ಅವರಿಗೆ ‘ಬ್ರೋ’ ಎಂದು ಕರೆದಿದ್ದಾರೆ. ಇದರಿಂದ ಗಗನ್ ಕೋಪ ನೆತ್ತಿಗೇರಿದೆ. ‘ನನಗೆ ಏಕೆ ಬ್ರೋ ಎಂದು ಕರೆದಿರಿ? ನನ್ನ ವಯಸ್ಸೆಷ್ಟು, ನಿಮ್ಮ ವಯಸ್ಸೆಷ್ಟು’ ಎಂದು ಕೇಳಿದರು. ಜೊತೆಗೆ, ‘ವಿಐಪಿ ಗಗನ್’ ಎಂದು ಕರೆಯುವಂತೆ ಧನುಷ್ಗೆ ಆದೇಶ ನೀಡಿದರು. ಇಷ್ಟೆಲ್ಲ ಗೌರವ ನಿರೀಕ್ಷೆ ಮಾಡಿದ ಗಗನ್ ಅವರು ಧನುಷ್ ಬಳಿ, ಹೋಗಲೋ ಎಂದು ಹೇಳಿದ್ದಾರೆ.
ಗಗನ್ ಚಿನ್ನಪ್ಪ ಏಕವಚನದ ಮಾತಿಗೆ ಕಿಚ್ಚನ ಪಂಚಾಯಿತಿಯಲ್ಲಿ ಕ್ಲಾಸ್ ಸರಿಯಾಗಿಯೇ ಸಿಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ.

ನೋಡಿರಿ

