ನಾಮಿನೇಷನ್ ಬಗ್ಗೆ ಮಾತಾಡಿ ಗಗನ್ ತಾಂಡವ್ ತಪ್ಪು ಮಾಡಿದ್ರಾ? – ಕಿಚ್ಚನ ಪಂಚಾಯಿತಿಯಲ್ಲಿ ಇಬ್ಬರೂ ಟಾರ್ಗೆಟ್

ನಾಮಿನೇಷನ್ ಬಗ್ಗೆ ಮಾತಾಡಿ ಗಗನ್ ತಾಂಡವ್ ತಪ್ಪು ಮಾಡಿದ್ರಾ? – ಕಿಚ್ಚನ ಪಂಚಾಯಿತಿಯಲ್ಲಿ ಇಬ್ಬರೂ ಟಾರ್ಗೆಟ್

ಬಿಗ್‌ಬಾಸ್ ನಿಯಮದ ಪ್ರಕಾರ ನಾಮಿನೇಷನ್ ಬಗ್ಗೆ ಓಪನ್ ಆಗಿ ಮಾತನಾಡುವಂತಿಲ್ಲ. ನಾಮಿನೇಷನ್ ವಿಚಾರದ ಬಗ್ಗೆ ಚರ್ಚೆ ಮಾಡುವಂತಿಲ್ಲ. ಇದೀಗ ಮೊದಲ ವಾರದಲ್ಲೇ ನಾಮಿನೇಷನ್ ಬಗ್ಗೆ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಓಪನ್ ಆಗಿಯೇ ಚರ್ಚಿಸಿದ್ದಾರೆ.

ಇದನ್ನೂ ಓದಿ:ಗಗನ್-ಮಂಜು ನಡುವೆ ತಾರಕಕ್ಕೇರಿದ ಜಗಳ – ತಿನ್ನುವ ಟಾಸ್ಕ್‌ನಲ್ಲಿ ಗೆದ್ದ ಮಂಜು ಮನೆಗೆ ಎಂಟ್ರಿ!

ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ನಾಮಿನೇಷನ್ ನಿಯಮವನ್ನು ಮೀರಿದ್ದಾರೆ. ನಾಮಿನೇಟ್ ಯಾರನ್ನು ಮಾಡುವುದು ಎಂಬ ಬಗ್ಗೆ ಇಬ್ಬರು ಕೂತು ಚರ್ಚಿಸಿದ್ದಾರೆ. ಮಾಡರ್ನ್ ಮಹಾಕವಿ ಮಂಜು ಅವರನ್ನು ನಾಮಿನೇಟ್ ಮಾಡುವ ಎಂದು ಇಬ್ಬರೂ ಮಾತನಾಡಿಕೊಂಡಿದ್ದಾರೆ. ನೀನು ಯಾರನ್ನು ನಾಮಿನೇಟ್ ಮಾಡ್ತೀಯಾ ಎಂದು ತಾಂಡವ್ ಬಳಿ ಗಗನ್ ಕೇಳಿದ್ದಾರೆ. ತಾಂಡವ್, ಮಾಡರ್ನ್ ಮಹಾಕವಿ ಮಂಜು ಹೆಸರು ಹೇಳಿದ್ದಾರೆ. ಆಗ ಮಂಜು ಹೆಸರೇ ಎಲ್ಲರೂ ಹೇಳುವಂತೆ ಮಾಡೋಣ ಎಂಬ ತಂತ್ರಗಾರಿಕೆ ರೂಪಿಸಿದ್ದಾರೆ. ಜಗ್ಗಿ, ಸಂಗೀತಾನ ಒಪ್ಪಿಸೋಣ, ಒಪ್ಪದೇ ಇದ್ದವರಿಗೆ ಚಾಕೋಲೇಟ್ ಕೊಟ್ಟು ದಾರಿಗೆ ತರೋಣ ಎಂದು ಮಾತಾಡಿಕೊಳ್ತಾರೆ. ಇಬ್ಬರೂ ಸೇರಿ ಮಂಜುನ ಟಾರ್ಗೆಟ್ ಮಾಡುತ್ತಾರೆ.

ಬಿಗ್ ಬಾಸ್ ಮನೆಯಲ್ಲಿ ಹಲವು ನಿಯಮಗಳಿವೆ. ಅದರಲ್ಲೂ ಮೂಲ ನಿಯಮ ಎಂಬುದು ಬಂದಾಗ ಅದನ್ನು ಕಟ್ಟುನಿಟ್ಟಾಗಿ ಫಾಲೋ ಮಾಡಲೇಬೇಕು. ಆದರೆ, ಅನೇಕ ಬಾರಿ ಅದು ಫಾಲೋ ಆಗೋದಿಲ್ಲ. ಇದೀಗ ಮೊದಲ ವಾರದಲ್ಲೇ ಸ್ಪರ್ಧಿಗಳು ನಾಮಿನೇಷನ್ ವಿಚಾರದಲ್ಲಿ ನಿಯಮ ಮೀರಿದ್ದಾರೆ. ಹೀಗಾಗಿ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್​ಗೆ ಕಿಚ್ಚನ ಪಂಚಾಯಿತಿಯಲ್ಲಿ ಕ್ಲಾಸ್ ಫಿಕ್ಸ್ ಎಂದು ಹೇಳಲಾಗುತ್ತಿದೆ.

Sulekha

Leave a Reply

Your email address will not be published. Required fields are marked *