ತಾಜ್ ಮಹಲ್‌ಗೆ ಭೇಟಿ ನೀಡಿದ ಇಂಡೋನೇಷ್ಯಾ ಅಧ್ಯಕ್ಷರ ಮಗ-ಸೊಸೆ
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಯಲ್ಲಿ ವಿಶ್ವದ ಹಲವು ನಾಯಕರು ಭಾಗಿಯಾಗಿದ್ದಾರೆ. ಈ ಶೃಂಗಸಭೆಗೆ ಬರುವ ವಿವಿಧ ದೇಶದ ನಾಯಕರುಗಳ ಜತೆಗೆ ಅವರ ಕುಟುಂಬದ ಸದಸ್ಯರು ಕೂಡ ಬರುತ್ತಾರೆ. ಭಾರತದ ಅನೇಕ ಐತಿಹಾಸಿಕ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಇದೀಗ ಜಿ20 ಶೃಂಗಸಭೆಗೆ ಭಾಗವಹಿಸಲು ಬಂದಿರುವ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಜತೆಗೆ ಅವರ ಕುಟುಂಬವು ಕೂಡ ಭಾರತಕ್ಕೆ ಭೇಟಿ ನೀಡಿದ್ದಾರೆ. ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದರೆ, ಇತ್ತ ಜೋಕೊ ವಿಡೋಡೊ ಅವರ ಮಗ ಮತ್ತು ಸೊಸೆ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ.
ಇದನ್ನೂ ಓದಿ: ಒಂದು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ G20 ಶೃಂಗಸಭೆಗೆ ಹಾಜರಾದ ಜರ್ಮನ್ ಚಾನ್ಸೆಲರ್!
ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಜೋಕೊ ವಿಡೋಡೊ ಅವರು ತಮ್ಮ ಕುಟುಂಬದ ಜತೆಗೆ ಶುಕ್ರವಾರ ಭಾರತಕ್ಕೆ ಆಗಮಿಸಿದ್ದರು. ಅವರೊಂದಿಗೆ ಅವರ ಮಗ ಕೇಸಾಂಗ್ ಪಂಗರೆಪ್ ಮತ್ತು ಸೊಸೆ ಎರಿನಾ ಗುಡೋನೊ ಅವರು ಕೂಡ ಭಾರತಕ್ಕೆ ಬಂದಿದ್ದಾರೆ. ಜೋಕೊ ವಿಡೋಡೊ ಅವರು ಸಭೆಯಲ್ಲಿ ಭಾಗಿಯಾಗಿದ್ದರೆ, ಇತ್ತ ಅವರ ಮಗ ಮತ್ತು ಸೊಸೆ ವಿಶ್ವ ಪ್ರಸಿದ್ಧ ತಾಜ್ ಮಹಲ್ ಗೆ ಭೇಟಿ ನೀಡಿದ್ದಾರೆ. ತಾಜ್ ಮಹಲ್ ಸ್ಮಾರಕದ ಮುಂದೆ ಒಂದಿಷ್ಟು ಸಮಯವನ್ನು ಕಳೆದಿದ್ದಾರೆ. ಇದರ ಫೋಟೋ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಜೋಕೊ ವಿಡೋಡೊ ಅವರ ಮೂರನೇ ಮಗ ಉದ್ಯಮಿ ಮತ್ತು ಯೂಟ್ಯೂಬರ್ ಕೇಸಾಂಗ್ ಪಂಗರೆಪ್ ಅವರು ಹೆಂಡತಿ ಹಾಗೂ ಮಗುವಿನೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ.