ಚೀತಾ, ಹೈನಾವನ್ನು ಹೀಗೂ ಮಂಗ ಮಾಡಬಹುದು! – ಜಿಂಕೆ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ?

ಚೀತಾ, ಹೈನಾವನ್ನು ಹೀಗೂ ಮಂಗ ಮಾಡಬಹುದು! – ಜಿಂಕೆ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ?

ಒಂದು ಪ್ರಾಣಿಯನ್ನು ತಿಂದು ಇನ್ನೊಂದು ಪ್ರಾಣಿ ಬದುಕುವುದು ಕಾಡಿನ ಆಹಾರ ಕ್ರಮ. ಹೀಗಾಗಿ ದುರ್ಬಲ ಪ್ರಾಣಿಗಳು ಕ್ರೂರ ಪ್ರಾಣಿಗಳನ್ನು ನೋಡಿ ಓಡಿ ಹೋಗುತ್ತೆ. ಆದರೂ ಕೆಲವೊಂದು ಬಾರಿ ಕ್ರೂರ ಪ್ರಾಣಿಗಳ ಬಾಯಿಗೆ ತುತ್ತಾಗುತ್ತವೆ. ಕೆಲವೊಂದು ದುರ್ಬಲ ಪ್ರಾಣಿ ಅವುಗಳಿಗೆ ಚಳ್ಳೆಹಣ್ಣು ತಿನ್ನಿಸಿ  ಪ್ರಾಣ ಉಳಿಸಿಕೊಳ್ಳುತ್ತವೆ. ಪ್ರಾಣಿ, ಪಕ್ಷಿಗಳು ಜೀವ ಉಳಿಸಿಕೊಳ್ಳಲು ಸತ್ತಂತೆ ನಾಟಕ ಮಾಡುವುದು ಕೂಡಾ ಇದೆ. ಇಂತಹ ಜಾಣತನವನ್ನು ಕಂಡಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಇದು ಕೂಡಾ ಅದೇ ಸಾಲಿಗೆ ಸೇರುವಂತಹ ದೃಶ್ಯ. ಇಲ್ಲೊಂದು ಜಿಂಕೆ ಹೈನಾ ಮತ್ತು ಚೀತಾಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಪ್ರಿಯಕರನ ಮೇಲೆ ಸಿಟ್ಟಿದೆಯೇ? – ಜಿರಳೆಗೆ ಆತನ ಹೆಸರಿಟ್ಟು ಕೋಪ ತೀರಿಸಿಕೊಳ್ಳಿ!

Figen ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೈರಲ್ ಆದ ವಿಡಿಯೋದಲ್ಲಿ ಬೇಟೆಗಾರ ಹೈನಾ ಮತ್ತು ಚೀತಾದ ನಡುವೆ ಸ್ಪರ್ಧೆ ಏರ್ಪಡುವ ದೃಶ್ಯ ಎಲ್ಲರನ್ನು ಬೆರಗುಗೊಳಿಸುವಂತಿದೆ.

ಕಾಡಿನ ಮಧ್ಯೆ ಜಿಂಕೆಯೊಂದು ಮಲಗಿತ್ತು. ಈ ವೇಳೆ ಜಿಂಕೆಯನ್ನು ತಿನ್ನಲು  ಹೈನಾ ಮತ್ತು ಚೀತಾ ಹತ್ತಿರ ಬರುತ್ತವೆ. ಈ ವೇಳೆ ಜಿಂಕೆ ಸತ್ತಂತೆ ನಟಿಸಿದೆ. ಆಗ ಅಲ್ಲಿದ್ದ ಚೀತಾವನ್ನು ಓಡಿಸಿ ಹೈನಾ ಜಿಂಕೆಯ ಬಳಿ ಬಂದಿದೆ. ಅಲ್ಲದೇ ಮಲಗಿದ್ದ ಜಿಂಕೆಯನ್ನು ಪರೀಕ್ಷಿಸುತ್ತದೆ. ಈ ವೇಳೆ ಜಿಂಕೆಯ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ. ಹೀಗಾಗಿ, ಜಿಂಕೆ ಸತ್ತಿದೆ ಎಂದು ತಿಳಿದುಕೊಂಡ ಹೈನಾ, ಚೀತಾವನ್ನು ಮತ್ತಷ್ಟು ದೂರ ಓಡಿಸಲು ಮುಂದಾಗಿದೆ. ಈ ವೇಳೆ ಸಿಕ್ಕಿದ್ದೇ ಚಾನ್ಸ್ ಅಂತ, ಜಿಂಕೆ ಅಲ್ಲಿಂದ ಎಸ್ಕೇಪ್ ಆಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈಗಾಗಲೇ ಈ ವಿಡಿಯೋವನ್ನು 3.9 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ದೇಹದಲ್ಲಿ ಸಾಮರ್ಥ್ಯವಿಲ್ಲದಿದ್ದರೆ  ಏನಂತೆ? ಸಮಸ್ಯೆಯನ್ನು ಎದುರಿಸಲು ಸ್ವಲ್ಪ ತಲೆ ಉಪಯೋಗಿಸಿದರೆ ಸಾಕು ಎಂಬ ಸಂದೇಶವನ್ನು ಈ ವಿಡಿಯೋದಲ್ಲಿ ಕಾಣಬಹುದು.

suddiyaana