ವೃಕ್ಷಮಾತೆ ಇನ್ನು ನೆನಪು ಮಾತ್ರ.. ಮಣ್ಣಲ್ಲಿ ಮಣ್ಣಾದ ಸಾಲುಮರದ ತಿಮ್ಮಕ್ಕ  

ವೃಕ್ಷಮಾತೆ ಇನ್ನು ನೆನಪು ಮಾತ್ರ.. ಮಣ್ಣಲ್ಲಿ ಮಣ್ಣಾದ ಸಾಲುಮರದ ತಿಮ್ಮಕ್ಕ  

8,000ಕ್ಕೂ ಹೆಚ್ಚು ಮರಗಳನ್ನ ಪೋಷಿಸಿದ ವೃಕ್ಷಮಾತೆ ಇನ್ನು ನೆನಪು ಮಾತ್ರ. ಅನಾರೋಗ್ಯದಿಂದ ಬಳಲುತ್ತಿದ್ದ ಪರಿಸರವಾದಿ, ಸಾಲುಮರದ ತಿಮ್ಮಕ್ಕ, ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದೆ.

ಇದನ್ನೂ ಓದಿ: ರಕ್ಷಿತಾ ಆಟಕ್ಕೆ ಮನೆಮಂದಿ ಶಾಕ್‌! – ರಕ್ಷು ಆಟದ ಬಗ್ಗೆ ಅಪಸ್ವರ ತೆಗೆದ ಕಾವ್ಯಾ

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಾಲು ಮರದ ತಿಮ್ಮಕ್ಕ ಅವ್ರು ನಿನ್ನೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ರು. ನಿನ್ನೆ ತಿಮ್ಮಕ್ಕ ಅವರ ಅಂತಿಮ ದರ್ಶನಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನಲ್ಲಿರುವ ಹುಲಿಕಲ್ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅದಾದ ಬಳಿಕ ಹಾಸನದ ಬೇಲೂರಿನಲ್ಲಿ 1 ಗಂಟೆ ಕಾಲ ಅಂತಿಮ ದರ್ಶನಕ್ಕೆ ಇಡಲಾಯ್ತು. ಇಂದು ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ನಮನದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ ಬೆಂಗಳೂರಿನ ಜ್ಞಾನ ಭಾರತಿಯ ಕಲಾಗ್ರಾಮದ ಆವರಣದಲ್ಲಿ ನೆರೆವೇರಿದೆ.

ಜ್ಞಾನ ಭಾರತಿಯ ಕಲಾಗ್ರಾಮದ ಆವರಣದಲ್ಲಿ  ಡಾ.ಸಿದ್ದಲಿಂಗಯ್ಯ ಅವರ ಸಮಾಧಿ ಪಕ್ಕದಲ್ಲೇ ತಿಮ್ಮಕ್ಕ ಅವರ ಅಂತ್ಯಕ್ರಿಯೆ ನಡೆದಿದೆ. ಅವರ ದತ್ತು ಪುತ್ರ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನ ನೆರವೇರಿಸಿದ್ದಾರೆ. ಕುಶಾಲ ತೋಪು ಸಿಡಿಸಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Shwetha M