ಬಾಂಗ್ಲಾದೇಶದ ವಿರುದ್ಧ ಭಾರತದ ಮೊದಲ ಪಂದ್ಯ – ಪ್ಲೇಯಿಂಗ್ 11 ಹೇಗಿರಲಿದೆ?

ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯವನ್ನು ಗೆಲ್ಲುವುದರೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಲು ರೋಹಿತ್ ಶರ್ಮಾ ಪ್ಲ್ಯಾನ್ ಮಾಡ್ತಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾಕ್ಕೆ ಅಚ್ಚರಿಯ ರೀತಿಯಲ್ಲಿ ಆಘಾತ ನೀಡೋಕೆ ಬಾಂಗ್ಲಾದೇಶ ಕೂಡ ಬಲಿಷ್ಠ ತಂಡವನ್ನೇ ಕಣಕ್ಕಿಳಿಸೋಕೆ ರೆಡಿಯಾಗಿದೆ. ಭಾರತದ ಪಂದ್ಯಗಳೆಲ್ಲಾ ದುಬೈನಲ್ಲೇ ನಡೆಯಲಿದ್ದು, ಭಾರತೀಯ ಆಟಗಾರರು ಈಗಾಗ್ಲೇ ದುಬೈನಲ್ಲಿದ್ದು ಭರ್ಜರಿ ತಾಲೀಮು ನಡೆಸ್ತಿದ್ದಾರೆ.
ಇದನ್ನೂ ಓದಿ : ಟೀಮ್ ಇಂಡಿಯಾ ನೂತನ ಜೆರ್ಸಿ ರಿವೀಲ್ – ಪಾಕ್ ಹೆಸರು ಹಾಕಿಸಿದ್ಯಾಕೆ ರೋಹಿತ್ ಪಡೆ?
ಭಾರತ ಮತ್ತು ಬಾಂಗ್ಲಾ ಪಂದ್ಯ ಅಂದಾಗ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣಿಸುತ್ತೆ. ಹಾಗಂತ ಬಾಂಗ್ಲಾವನ್ನ ಈಸಿಯಾಗಿ ತೆಗೆದುಕೊಳ್ಳೋಕೂ ಆಗಲ್ಲ. ಒಂದೊಂದು ಪಂದ್ಯವೂ ಇಂಪಾರ್ಟೆಂಟ್ ಆಗಿರೋದ್ರಿಂದ ಮೊದಲನೇ ಪಂದ್ಯವನ್ನ ಭಾರತ ಗೆಲ್ಲಲೇಬೇಕಾಗುತ್ತೆ. ಹೀಗಾಗಿ ಬಲಿಷ್ಠ ತಂಡವನ್ನೇ ಅಖಾಡಕ್ಕಿಳಿಸಲು ತಯಾರಾಗಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸಿದ ನಂತರ ನಾಯಕ ರೋಹಿತ್ ಶರ್ಮಾ ತಮ್ಮ ಲಯ ಕಂಡುಕೊಂಡಿದ್ದಾರೆ. ಮತ್ತೊಂದೆಡೆ, ಉಪನಾಯಕ ಶುಭ್ಮನ್ ಗಿಲ್ ಕೂಡ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಮಾಡೋದನ್ನ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಮೂಲಕ ಶ್ರೇಯಸ್ ಅಯ್ಯರ್ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ವಿಕೆಟ್ ಕೀಪರ್‌ಗಳಾದ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರನ್ನು ಆಡುವ ಹನ್ನೊಂದರ ತಂಡಕ್ಕೆ ಯಾರನ್ನ ಸೇರಿಸಿಕೊಳ್ಬೇಕು ಅನ್ನೋ ಬಗ್ಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನಡುವೆ ವಿವಾದ ನಡೆದಿದೆ. ಅಂತಿಮವಾಗಿ ಗಂಭೀರ್ ಕೆಎಲ್ ರಾಹುಲ್ನ ಫೈನಲ್ ಮಾಡಿದ್ದಾರೆ. ಅಲ್ದೇ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ಮಾಡಬಲ್ಲರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ವೇಗಿ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಅವರೊಂದಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಭಾರತ ಸಂಭಾವ್ಯ ತಂಡ : ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಸ್ಥಾನ ಪಡೆಯಬಹುದು.
ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಟೋಟಲ್ಲಾಗಿ ಘಟಾನುಘಟಿ 8 ತಂಡಗಳು ಭಾಗವಹಿಸುತ್ತಿದ್ರೂ ಒಟ್ಟಾರೆಯಾಗಿ ನಡೆಯೋದೇ 15 ಪಂದ್ಯಗಳು. ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳನ್ನು 2 ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಮೊದಲ ಸುತ್ತಿನಲ್ಲಿ ಗ್ರೂಪ್ಗಳಲ್ಲಿ ಪಂದ್ಯ ನಡೆಯಲಿದೆ. ಅಂದರೆ ಆಯಾ ಗ್ರೂಪ್ನಲ್ಲಿನ ತಂಡಗಳು ಪರಸ್ಪರ ಸೆಣಸಲಿದೆ. ಗ್ರೂಪ್-Aನಲ್ಲಿ ಭಾರತ, ಪಾಕಿಸ್ತಾನ್, ನ್ಯೂಝಿಲೆಂಡ್ ಮತ್ತು ಬಾಂಗ್ಲಾದೇಶ್ ತಂಡಗಳಿದ್ರೆ ಗ್ರೂಪ್- Bನಲ್ಲಿ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಇಂಗ್ಲೆಂಡ್ ಟೀಮ್ಗಳಿವೆ. ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್ನಲ್ಲಿರುವ ತಂಡಗಳು ಮುಖಾಮುಖಿಯಾಗಲಿದೆ. ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 3 ಪಂದ್ಯಗಳನ್ನಾಡಲಿದ್ದಾರೆ. ಇಲ್ಲಿ ಎರಡು ಗುಂಪುಗಳು ಇರೋದ್ರಿಂದ ಬೇರೆ ಬೇರೆ ಅಂಕಪಟ್ಟಿ ಇರಲಿದೆ. ಗ್ರೂಪ್-ಎ ಮತ್ತು ಗ್ರೂಪ್-ಬಿ ಪಾಯಿಂಟ್ಸ್ ಟೇಬಲ್ಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತದೆ. ಅಂದರೆ ಲೀಗ್ ಹಂತದಿಂದ ನಾಲ್ಕು ತಂಡಗಳು ಹೊರಬೀಳಲಿದ್ದು, 4 ಟೀಮ್ಗಳು ಮುಂದಿನ ಹಂತಕ್ಕೇರಲಿದೆ. ಇನ್ನು ಸೆಮಿಫೈನಲ್ನಲ್ಲಿ ಆಯಾ ಗ್ರೂಪ್ನಿಂದ ಅರ್ಹತೆ ಪಡೆದ ತಂಡಗಳು ಪರಸ್ಪರ ವಿರುದ್ಧವಾಗಿ ಸೆಣಸಲಿದೆ. ಅಂದರೆ ಲೀಗ್ ಹಂತದಲ್ಲಿ ಮುಖಾಮುಖಿಯಾದ ತಂಡಗಳು ಸೆಮಿಫೈನಲ್ನಲ್ಲಿ ಮತ್ತೆ ಎದುರು ಬದುರಾಗುವುದಿಲ್ಲ. ಮೊದಲ ಮತ್ತು ಎರಡನೇ ಸೆಮಿಫೈನಲ್ಗಳಲ್ಲಿ ಗೆದ್ದ ತಂಡಗಳು ಫೈನಲ್ಗೆ ಪ್ರವೇಶಿಸಲಿದೆ. ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲಿ 12 ಪಂದ್ಯಗಳು ಮತ್ತು ನಾಕೌಟ್ ಹಂತದಲ್ಲಿ ಮೂರು ಪಂದ್ಯಗಳು ನಡೆಯಲಿದೆ. ಮಾರ್ಚ್ 9ರಂದು ಫೈನಲ್ ಪಂದ್ಯ ನಡೆಯಲಿದೆ.