ಭಾರತದ “ತೇಜಸ್”ಗೆ ವಿದೇಶಗಳಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್…  

ಭಾರತದ “ತೇಜಸ್”ಗೆ ವಿದೇಶಗಳಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್…  

ಬೆಂಗಳೂರು: ವಿಶ್ವದ ಗಮನ ಸೆಳೆಯುತ್ತಿರುವ ಏರೋ ಇಂಡಿಯಾ-2023 ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದೆ. ಇದೀಗ ಭಾರತ ನಿರ್ಮಿತ ಯುದ್ಧ ವಿಮಾನಗಳಿಗೆ ವಿದೇಶಗಳಿಂದ ಫುಲ್ ಡಿಮ್ಯಾಂಡ್ ಶುರುವಾಗಿದೆ.

ಹೌದು. ಭಾರತ ನಿರ್ಮಿತ ಯುದ್ಧ ವಿಮಾನ ತೇಜಸ್ ಅನ್ನು ಖರೀದಿಸಲು ವಿದೇಶಗಳಿಂದ ಫುಲ್ ಡಿಮ್ಯಾಂಡ್ ಶುರು ಆಗಿದೆ. ಈಗಾಗಲೇ ಅರ್ಜೆಂಟೀನಾ, ಮಲೇಷ್ಯಾ, ಈಜಿಪ್ಟ್ ಮುಂತಾದ ದೇಶಗಳು ಬೇಡಿಕೆ ಇಟ್ಟಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಚಾಲಕರು – ಪೊಲೀಸ್ ಠಾಣೆಯಲ್ಲಿ 1,000 ಬಾರಿ ಬರೆಯುವ ಶಿಕ್ಷೆ!

ಎಲ್‌ಸಿಎ ತೇಜಸ್ ಹಗುರ ಯುದ್ಧ ವಿಮಾನವಾಗಿದೆ. ಇದನ್ನು ಬಳಸಿಕೊಂಡು ಅತೀ ವೇಗವಾಗಿ ಶತ್ರು ದೇಶದ ಒಳಕ್ಕೆ ನುಗ್ಗಿ ದಾಳಿ ಮಾಡಿ ಅಷ್ಟೇ ವೇಗದಲ್ಲಿ ಹಿಂತಿರುಗಿಬರಬಹುದು. ಅಂತಹ ಯುದ್ಧ ವಿಮಾನವನ್ನೇ ಹುಡುಕಾಡುತ್ತಿರುವ ಮಲೇಷ್ಯಾ, ಈಜಿಪ್ಟ್ ಮುಂತಾದ ದೇಶಗಳು ಭಾರತದ ಬಳಿಗೆ ಆಗಮಿಸಿವೆ. ಈಗ ಮಲೇಷ್ಯಾದಿಂದ ತೇಜಸ್ ಯುದ್ಧ ವಿಮಾನಕ್ಕೆ ಬೇಡಿಕೆ ಬಂದಿದ್ದು ಕಾಂಟ್ರಾಕ್ಟ್ ಸಿಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಹೆಚ್ಎಎಲ್ ಎಂಡಿ ಸಿಎಂಡಿ ಅನಂತಕೃಷ್ಣನ್, ಅರ್ಜೆಂಟೀನಾ, ಈಜಿಪ್ಟ್ ಜೊತೆಗೂ ಮಾತುಕತೆ ನಡೆಯುತ್ತಿದೆ. ಅಲ್ಲಿನ ಇಂಜಿನಿಯರ್ ನಮ್ಮಲ್ಲಿಗೆ ಬಂದು ಚರ್ಚಿಸಿದ್ದಾರೆ. ಸಾಕಷ್ಟು ಆರ್ಡರ್ ಸಿಗುವ ನಿರೀಕ್ಷೆ ಇದೆ. ಹೆಚ್ ಎಎಲ್ ಉಪಕರಣಗಳಿಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಅರ್ಜೆಂಟೀನಾದಿಂದ 15 LCA ಏರ್ ಕ್ರಾಫ್ಟ್ ಗೆ ಬೇಡಿಕೆ ಬಂದಿದೆ’ ಎಂದು ಹೇಳಿದ್ದಾರೆ.

suddiyaana