ಮೊಟ್ಟೆಗೆ 5 ರೂಪಾಯಿ.. ಬಾತುಕೋಳಿಗೆ 1,500 ರೂಪಾಯಿ – ವಲಸೆ ಬಾತುಕೋಳಿಗಳ ಸಾಕಾಣಿಕೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್
ಈಗಂತೂ ಮೊಟ್ಟೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಮಕ್ಕಳಿಂದ ಹಿಡಿದು ಅನಾರೋಗ್ಯ ಪೀಡಿತರವರೆಗೆ ಮೊಟ್ಟೆಗಳು ಬೇಕೇಬೇಕು. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಮೊಟ್ಟೆ ದಿನನಿತ್ಯದ ಬಳಕೆಯಾಗಿದೆ. ಇದೀಗ ಕೋಳಿ ಮೊಟ್ಟೆಗಳಂತೆ ಬಾತುಕೋಳಿ ಮೊಟ್ಟೆಗಳಿಗೆ ಬೇಡಿಕೆ ಇದೆ. ಕೋಳಿ ಮೊಟ್ಟೆಗಳಿಗಿಂತ ಗಾತ್ರದಲ್ಲಿ ಸ್ವಲ್ಪ ದಪ್ಪವಾಗಿದ್ದು ಹೆಚ್ಚಿನ ಪೌಷ್ಟಿಕ ಸತ್ವಗಳನ್ನು ಹೊಂದಿರುತ್ತವೆ. ಹೀಗಾಗಿ ಜನರು ಸ್ವಲ್ಪ ದುಬಾರಿ ಎನಿಸಿದರೂ ಸಹ ಬಾತುಕೋಳಿಗಳ ಮೊಟ್ಟೆಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ. ಇಷ್ಟೇ ಅಲ್ಲದೆ ಇನ್ನೂ ಹಲವಾರು ವಿಚಾರಗಳು ಕೋಳಿ ಮೊಟ್ಟೆಗಳಿಗೆ ಬದಲಾಗಿ ಬಾತುಕೋಳಿ ಮೊಟ್ಟೆಗಳನ್ನು ಏಕೆ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತವೆ.
ಇದನ್ನೂ ಓದಿ : ರಸ್ತೆಯಲ್ಲಿ ಹೋಗುವವರೇ ಇವನ ಟಾರ್ಗೆಟ್..! – ಮೈಯೆಲ್ಲಾ ಪರಚಿ, ಕಚ್ಚುತ್ತಿದ್ದವನು ಕೊನೆಗೂ ಅಂದರ್!
ಹೀಗಾಗೇ ಇತ್ತೀಚೆಗೆ ಬಾತುಕೋಳಿಗಳ ಸಾಕಾಣಿಕೆ ಉದ್ಯಮ ಹೆಚ್ಚಾಗುತ್ತಿದೆ. ಅದರಲ್ಲೂ ಕೆಲವೆಡೆ ವಲಸೆ ಬಾತುಕೋಳಿ ಸಾಕಾಣಿಕೆದಾರರ ಪ್ರಮಾಣವೂ ಹೆಚ್ಚಾಗುತ್ತಿದೆ. ರಸ್ತೆಯ ಮೇಲೆ ಜೀವನ ನಡೆಸುವ ಇವರು ಬಾತುಕೋಳಿಗಳು ಎಲ್ಲೆಲ್ಲಿ ಹೋಗುತ್ತವೆಯೋ ಅಲ್ಲಿಗೆ ಹೋಗಿ ಜೀವನ ನಡೆಸುತ್ತಾರೆ. ರಾಜ್ಯದ ಯಾವುದಾದರೊಂದು ಜಿಲ್ಲೆಯಲ್ಲಿ ನಿತ್ಯ ಸಂಚರಿಸುತ್ತಾರೆ. ವರ್ಷವಿಡೀ, ಬಾತುಕೋಳಿಗಳು ಮೇಯುಸುತ್ತಾ ಮನೆಯಿಂದ ದೂರ ತಮ್ಮ ವಲಸೆ ಜೀವನ ನಡೆಸುತ್ತಾರೆ.
ಯಾವುದೇ ಗ್ರಾಮಕ್ಕೆ ಹೋದರೆ ಗ್ರಾಮದ ರಸ್ತೆ ಬದಿಯಲ್ಲಿ ಟೆಂಟ್ಗಳನ್ನ ನಿರ್ಮಿಸಿಕೊಂಡು ನೆಲದ ಮೇಲೆ ವಾಸ ಮಾಡುತ್ತಾರೆ. ಬಾತುಕೋಳಿಗಳು ಅವರ ಆಸ್ತಿ. ವಿಶಾಖಪಟ್ಟಣ ಜಿಲ್ಲೆಯಲ್ಲಿ ಈ ವಲಸೆ ಬಾತುಕೋಳಿ ಸಾಗಣೆಕಾರರು ಕಾಣಿಸಿಕೊಂಡಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ನೂಕರಾಜು ವಲಸೆ ಬಾತುಕೋಳಿ ಸಾಗಣೆಯ ಬಗ್ಗೆ ಮಾತನಾಡಿ, ಪ್ರತಿ ವರ್ಷ ಸುಮಾರು 2500 ಬಾತುಕೋಳಿಗಳನ್ನು ತೆಗೆದುಕೊಂಡು ವಿವಿಧ ಸ್ಥಳಗಳಿಗೆ ವಲಸೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಪ್ರತಿ ಬಾತುಕೋಳಿಯನ್ನು ಫೆಬ್ರವರಿ ತಿಂಗಳಲ್ಲಿ 300 ರೂಪಾಯಿಗೆ ಖರೀದಿಸಿ ಸ್ಥಳೀಯ ಕೆರೆಗಳಲ್ಲಿ ಸಾಕಲಾಗುತ್ತದೆ. ಬೇಸಿಗೆ ಪ್ರಾರಂಭವಾಗುವ ಹೊತ್ತಿಗೆ, ಅವರ ವಲಸೆಯ ಜೀವನವು ಪ್ರಾರಂಭವಾಗುತ್ತದೆ. ಬೇಸಿಗೆಯಲ್ಲಿ ಖಾಲಿಯಾದ ಬೆಳೆ ಗದ್ದೆಗಳಿಗೆ ಹೋಗಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಾರೆ. ಅವರು ಬಾತುಕೋಳಿಗಳನ್ನು ವಾಹನದಲ್ಲಿ ತೆಗೆದುಕೊಂಡು ಅವುಗಳಿಗೆ ಸೂಕ್ತವಾದ ಪ್ರದೇಶಗಳಿಗೆ ಹೋಗುತ್ತಾರೆ. ಅಲ್ಲಿ ಬಾತುಕೋಳಿಗಳನ್ನು ಮೇಯಿಸಲಾಗುತ್ತದೆ. ಖಾಲಿ ಜಾಗ, ಕಾಲುವೆ, ಹಳ್ಳಗಳಲ್ಲಿ ಸಾಕಷ್ಟು ಆಹಾರ ಸಿಗುತ್ತದೆ. ಬಾತುಕೋಳಿಗಳು ಹುಳಗಳು, ಧಾನ್ಯವನ್ನು ತಿನ್ನುವುದರಿಂದ ಕೊಬ್ಬು ಬೆಳೆಯುತ್ತವೆ.
ಈ ವೇಳೆ ಬಾತುಕೋಳಿಗಳು ಮೊಟ್ಟೆಗಳನ್ನೂ ಇಡುತ್ತವೆ, ಆ ಮೊಟ್ಟೆಗಳನ್ನು ತಲಾ 4ರಿಂದ 5 ರೂ.ಗೆ ಮಾರಾಟ ಮಾಡಿ ಆದಾಯ ಪಡೆಯುತ್ತಾರೆ. ಸಂಕ್ರಾಂತಿ ಸಮಯದಲ್ಲಿ, ಪ್ರತಿ ಬಾತುಕೋಳಿಯು ಉತ್ತಮ ಬೆಲೆಯನ್ನು ಪಡೆಯುತ್ತವೆ. ತೂಕದ ಆಧಾರದ ಮೇಲೆ ಪ್ರತಿ ಬಾತುಕೋಳಿ 1,500 ರೂಪಾಯಿವರೆಗೆ ಮಾರಾಟವಾಗುತ್ತದೆ. ಸೀಸನ್‌ಗಳು ಮುಗಿದ ಕೂಡಲೇ ಮರಳಿ ತಮ್ಮ ಊರುಗಳಿಗೆ ಹೋಗುತ್ತಾರೆ. ಸಂಕ್ರಾಂತಿ ವೇಳೆಗೆ ಈಗಿರುವ ಬಾತುಕೋಳಿಗಳನ್ನು ಮಾರಾಟ ಮಾಡಿ ಮತ್ತೆ ಹೊಸ ಬ್ಯಾಚ್ ಆರಂಭಿಸುತ್ತಾರೆ.