ಚಂದ್ರನಲ್ಲಿ ಭೂಮಿ ಖರೀದಿಗೆ ಫುಲ್‌ ಡಿಮ್ಯಾಂಡ್‌! – 2 ಎಕರೆ ಜಮೀನು ಖರೀದಿಸಿ ಇಬ್ಬರು ಹೆಣ್ಣುಮಕ್ಕಳ ಹೆಸರಿಗೆ ನೋಂದಾಯಿಸಿದ ಎನ್‌ಆರ್‌ಐ

ಚಂದ್ರನಲ್ಲಿ ಭೂಮಿ ಖರೀದಿಗೆ ಫುಲ್‌ ಡಿಮ್ಯಾಂಡ್‌! – 2 ಎಕರೆ ಜಮೀನು ಖರೀದಿಸಿ ಇಬ್ಬರು ಹೆಣ್ಣುಮಕ್ಕಳ ಹೆಸರಿಗೆ ನೋಂದಾಯಿಸಿದ ಎನ್‌ಆರ್‌ಐ

ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟು ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ಸದ್ಯ ಪ್ರಪಂಚದಾದ್ಯಂತ ಚಂದ್ರಯಾನದ್ದೇ ವಿಚಾರ. ಅಚ್ಚರಿಯ ವಿಚಾರ ಅಂದ್ರೆ ಒಂದು ಕಡೆ ವಿಜ್ಞಾನಿಗಳು ಮಾನವನ ವಾಸಕ್ಕೆ ಅನುಕೂಲವಾಗುವ ಅಂಶಗಳು ಇದ್ಯಾ ಅಂತಾ ಪತ್ತೆ ಹಚ್ಚುತ್ತಿದ್ರೆ, ಇತ್ತ ರಿಯಲ್‌ ಎಸ್ಟೇಟ್‌ ಫೀಲ್ಡ್‌ನಲ್ಲಿ ಚಂದ್ರನಲ್ಲಿ ಭೂಮಿ ಖರೀದಿಸಲು ಆಸಕ್ತಿ ಹೆಚ್ಚಾಗಿದೆ.

ಚಂದ್ರಯಾನ -3 ನೌಕೆ ಚಂದ್ರನ ಮೇಲೆ ಕಾಲಿಡುತ್ತಿದ್ದಂತೆ ಚಂದ್ರನ ಬಗ್ಗೆ ಕುತೂಹಲಗಳೂ ಸಹ ಹೆಚ್ತಿದೆ. ಚಂದ್ರನ ಮೇಲೆ ಭೂಮಿಯ ಮಾಲೀಕತ್ವದ ಪಡೆಯುವುದು ಹೇಗೆ ಅಂತಾ ಅನ್ವೇಷಿಸುತ್ತಿದ್ದಾರೆ. ಈ ಪೈಕಿ ಒಬ್ಬರು ತೆಲುಗು ಅನಿವಾಸಿ ಭಾರತೀಯ (ಎನ್‌ಆರ್‌ಐ) ಚಂದ್ರನ ಮೇಲೆ ಎರಡು ಎಕರೆ ಭೂಮಿಯನ್ನು ಖರೀದಿಸಿ, ಅದನ್ನು ತನ್ನ ಇಬ್ಬರು ಹೆಣ್ಣುಮಕ್ಕಳ ಹೆಸರಿಗೆ ನೋಂದಾಯಿಸುವ ಮೂಲಕ ವಿಶಿಷ್ಟ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: ಚಂದ್ರಯಾನಗಿಂತ, ಸೂರ್ಯಯಾನ ಕಂಪ್ಲೀಟ್ ಭಿನ್ನ! -ಲಾಗ್ರೇಂಜ್ ಪಾಯಿಂಟ್ ತಲುಪಲು ನೌಕೆ ಎಷ್ಟು ದಿನ ತೆಗೆದುಕೊಳ್ಳುತ್ತೆ?

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಬಾಪುಲಪಾಡು ಮಂಡಲದ ವೀರವಲ್ಲಿ ಮೂಲದ ಬೊಡ್ಡು ಜಗನ್ನಾಥ ರಾವ್ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಇವರು ಚಂದ್ರನ ಮೇಲೆ ಜಮೀನು ಮಾರಾಟವಾಗುತ್ತಿರುವ ವಿಚಾರ ತಿಳಿದಿದೆ. ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸವು ಸಾಧ್ಯ ಎಂದು ನಂಬಿರುವ ಅವರು ಭೂಮಿ ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ 2005 ರಲ್ಲಿ, ಅವರು ಚಂದ್ರನ ಮೇಲೆ ಭೂಮಿಯನ್ನು ಮಾರಾಟ ಮಾಡುತ್ತಿದ್ದ ಲೂನಾರ್ ಲ್ಯಾಂಡ್ ರಿಜಿಸ್ಟ್ರಿಯನ್ನು ಸಂಪರ್ಕಿಸಿದರು.

ಎನ್ ಆರ್ ಐ ಜಗನ್ನಾಥ ರಾವ್ ನ್ಯೂಯಾರ್ಕ್ ನಲ್ಲಿರುವ ಲೂನಾರ್ ರಿಪಬ್ಲಿಕ್ ಸೊಸೈಟಿಯ ಕೇಂದ್ರ ಕಚೇರಿಗೆ ತೆರಳಿ ಚಂದ್ರನ ಮೇಲಿನ ಭೂಮಿ ಮಾರಾಟದ ಸಂಪೂರ್ಣ ವಿವರಗಳನ್ನು ಕಲೆಹಾಕಿದ್ದರು. ಬಳಿಕ ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೆಸರಿಗೆ ಚಂದ್ರನ ಮೇಲೆ ಎರಡು ಎಕರೆ ಜಮೀನು ಖರೀದಿಸಿದ್ದಾರೆ. ಜಮೀನಿನ ಜಮೀನು ಸಂಖ್ಯೆ ಮತ್ತು ವಿವಿಧ ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಗುರುತಿಸಿದ ಪ್ರದೇಶಗಳ ಹೆಸರುಗಳನ್ನು ನಮೂದಿಸುವ ನೋಂದಣಿ ಹಕ್ಕು ಪತ್ರವನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ, ಎರಡು ಎಕರೆ ಭೂಮಿಯ ಅಕ್ಷಾಂಶ ಮತ್ತು ರೇಖಾಂಶವನ್ನು ಸ್ಪಷ್ಟವಾಗಿ ಹೇಳುವ ನೋಂದಣಿ ಪ್ರಮಾಣಪತ್ರವನ್ನು ಲೂನಾರ್ ರಿಪಬ್ಲಿಕ್ ಸೊಸೈಟಿ ನೀಡಿದೆ.

ಇಸ್ರೋ ಜೊತೆಗೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಸಹ ಚಂದ್ರನತ್ತ ಮನುಷ್ಯರನ್ನು ಕಳುಹಿಸುವ ಸಂಶೋಧನೆಗೆ ಸಿದ್ಧವಾಗಿವೆ. ಚಂದ್ರ ಮಾತ್ರವಲ್ಲದೆ ಇತರೆ ಗ್ರಹಗಳ ಮೇಲೆ ಮನುಷ್ಯರನ್ನು ಕಳಿಸಲು ಸಿದ್ಧತೆ ನಡೆಸಿವೆ.

ಇದೇ ರೀತಿ, ತಾನೂ ಸಹ ಚಂದ್ರನ ಮೇಲೆ ಕಾಲಿಡುತ್ತೇನೆ ಎಂಬ ಭರವಸೆಯನ್ನು ಜಗನ್ನಾಥ ರಾವ್ ವ್ಯಕ್ತಪಡಿಸುತ್ತಾರೆ. ಆ ಆಸೆಯಿಂದ ಹಲವು ವರ್ಷಗಳ ಹಿಂದೆ ಚಂದ್ರನ ಮೇಲೆ ಭೂಮಿ ಖರೀದಿಸಿದ್ದೆ ಎಂದರು. ಹಾಗೂ, ಚಂದ್ರಯಾನ 3 ಯಶಸ್ಸಿನ ನಂತರ ಜಗನ್ನಾಥ್ ರಾವ್ ತಮ್ಮ ಆಸೆ ಶೀಘ್ರದಲ್ಲೇ ಈಡೇರುವ ಭರವಸೆಯನ್ನು ಸಹ ವ್ಯಕ್ತಪಡಿಸಿದ್ದಾರೆ.

suddiyaana