ಕಾಂಗ್ರೆಸ್‌ ನ ಐದು ಗ್ಯಾರಂಟಿ ಪಡೆಯಲು ಜನರ ಸರ್ಕಸ್‌ – ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್‍ಗೆ ಫುಲ್‌ ಡಿಮ್ಯಾಂಡ್‌!

ಕಾಂಗ್ರೆಸ್‌ ನ ಐದು ಗ್ಯಾರಂಟಿ ಪಡೆಯಲು ಜನರ ಸರ್ಕಸ್‌ – ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್‍ಗೆ ಫುಲ್‌ ಡಿಮ್ಯಾಂಡ್‌!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತದಿಂದ ಗೆಲ್ಲಲು ಐದು ಗ್ಯಾರಂಟಿಗಳೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈಗ ಜನರು ಕೂಡ ಈ ಐದು ಗ್ಯಾರಂಟಿಗಳನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಒಂದೆಡೆ ಗ್ರಾಮೀಣ ಪ್ರದೇಶಗಳಲ್ಲಿ ಜನರು ಕರೆಂಟ್‌ ಬಿಲ್‌ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ಮಹಿಳೆಯರು ಬಸ್‌ ಗಳಲ್ಲಿ ಟಿಕೆಟ್‌ ಗೆ ಹಣ ನೀಡುವುದಿಲ್ಲ ಎನ್ನುತ್ತಿದ್ದಾರೆ.  ಇದರ ಮಧ್ಯೆ ಸರ್ಕಾರಿ ಅಧಿಕಾರಿಗಳಿಗೆ ಮತ್ತೊಂದು ತಲೆನೋವು ಶುರುವಾದಂತಿದೆ.

ಇದನ್ನೂ ಓದಿ: ಒಂದು ರಸ್ತೆ ಗುಂಡಿಗೆ 1 ಲಕ್ಷ ರೂಪಾಯಿ ದಂಡ! – ಏನಿದು ಸರ್ಕಾರದ ಹೊಸ ರೂಲ್ಸ್‌?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ್ದ ಐದು ಗ್ಯಾರಂಟಿಗಳ ಲಾಭವನ್ನು ಪಡೆಯಲು ಜನರು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್‌ ನ ಐದು ಗ್ಯಾರಂಟಿಗಳ ಪ್ರಯೋಜನ ಪಡೆಯಲು ಬಿಪಿಎಲ್ ಕಾರ್ಡ್ ಮಾಡಿಸಲು ಸೈಬರ್ ಸೆಂಟರ್‌ಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಹೊಸ ಕಾರ್ಡ್ ಮಾಡಿಸಲು ಜನ ಸೈಬರ್ ಸೆಂಟರ್‌ಗೆ ಧಾವಿಸುತ್ತಿದ್ದಾರೆ. ನಿತ್ಯ 20 ರಿಂದ 30 ಜನ ಒಂದೊಂದು ಸೈಬರ್ ಸೆಂಟರ್‌ಗೆ ಅರ್ಜಿ ಹಾಕಲು ಬರುತ್ತಿದ್ದಾರೆ.

ಜನರು ಬಿಪಿಎಲ್‌ ಕಾರ್ಡ್‌ ಮಾಡಿಸಲು ಸೈಬರ್ ಗಳಿಗೆ ಧಾವಿಸುತ್ತಿದ್ದಂತೆ ಸೈಬರ್ ಸೆಂಟರ್ ಮಾಲೀಕರು ಕೂಡ ಹೊಸ ಅರ್ಜಿಗಳಿಗೆ ಅವಕಾಶ ನೀಡಿದ್ಯಾ ಎಂದು ಇಲಾಖಾ ವೆಬ್ ಸೈಟ್ ಓಪನ್ ಮಾಡಿ ಪರಿಶೀಲಿಸುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನ   ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರುವ ಕಾರಣ ಸರ್ವರ್ ಸಮಸ್ಯೆ ಆರಂಭವಾಗಿದೆ.  ಆದರೆ ಸರ್ಕಾರದಿಂದ ಹೊಸ ರೇಷನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಇನ್ನು ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಲು ಬಂದವರು ವಾಪಸ್‌ ಮನೆಗೆ ಮರಳುತ್ತಿದ್ದಾರೆ.

ಸಾಧಾರಣವಾಗಿ ಬಿಪಿಎಲ್ ಕಾರ್ಡ್ ಮಾಡಿಸಲು ಇಲ್ಲಿಯವರೆಗೆ ಗ್ರಾಮೀಣ ಭಾಗಗಳಲ್ಲಿ ಜನ ಮುಗಿಬೀಳುತ್ತಿದ್ದರು. ಆದರೆ ಈಗ ಬೆಂಗಳೂರಿನಲ್ಲೂ ಕೂಡ ಕಾಂಗ್ರೆಸ್‌ ನ ಐದು ಗ್ಯಾರಂಟಿಯ ಪ್ರಯೋಜನ ಪಡೆಯಲು ಉತ್ಸುಕರಾಗಿರುವುದು ವಿಶೇಷ.

suddiyaana