ಡಯಟ್‌ ಅಂತ ಮಿಕ್ಸ್ಡ್‌ ಫ್ರೂಟ್ಸ್‌ ತಿಂತೀರಾ? – ಎಚ್ಚರ.. ಇದ್ರಿಂದಲೇ ನಿಮ್ಮ ಆರೋಗ್ಯ ಹಾಳಾಗುತ್ತೆ!

ಡಯಟ್‌ ಅಂತ ಮಿಕ್ಸ್ಡ್‌ ಫ್ರೂಟ್ಸ್‌ ತಿಂತೀರಾ? – ಎಚ್ಚರ.. ಇದ್ರಿಂದಲೇ ನಿಮ್ಮ ಆರೋಗ್ಯ ಹಾಳಾಗುತ್ತೆ!

ಹಣ್ಣುಗಳನ್ನು ತಿನ್ನೋದು ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂಬುದು ನಿಮಗೆ ಗೊತ್ತಿದೆ. ಹಣ್ಣುಗಳು ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ರೀತಿಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿವೆ. ಹಣ್ಣುಗಳು ಫೈಬರ್‌ನಿಂದ ಫ್ಲೇವನಾಯ್ಡ್‌ಗಳವರೆಗೆ ಎಲ್ಲಾ ರೀತಿಯ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿವೆ. ಹೀಗಾಗೇ ಅನೇಕರು ಹಲವು ರೀತಿಯ ಹಣ್ಣುಗಳನ್ನು ಮಿಕ್ಸ್ ಮಾಡಿ, ಸಲಾಡ್ ರೂಪದಲ್ಲಿ ತಿನ್ನುತ್ತಾರೆ. ಆದ್ರೆ ಫ್ರೂಟ್ಸ್‌ ಸಲಾಡ್‌ ತಿನ್ನುವುದು ಎಲ್ಲರಿಗೂ ಒಳ್ಳೆಯದಲ್ಲ. ಇದು ಅನಾರೋಗ್ಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ರೋಗಗಳಿಂದ ದೂರವಿರಲು ಅಡುಗೆ ಮನೆಯಲ್ಲಿರುವ ಈ ವಸ್ತು ಬೆಸ್ಟ್!‌

ವಿವಿಧ ಹಣ್ಣುಗಳನ್ನು ಕತ್ತರಿಸಿ ಒಂದೇ ಬೌಲ್‌ನಲ್ಲಿ ಹಾಕಿಕೊಂಡು ತಿನ್ನುವ ಅಭ್ಯಾಸ ಹಲವರಿಗಿದೆ. ಆದರೆ ಯಾವ ಹಣ್ಣುಗಳನ್ನು ಯಾವುದರೊಂದಿಗೆ ಬೆರೆಸಬೇಕು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಮಾಹಿತಿಗಳು ಹರಿದಾಡುತ್ತಿವೆ. ಕೆಲವು ಹಣ್ಣುಗಳನ್ನು ಒಟ್ಟಿಗೆ ತಿಂದರೆ ವಿಷವಾಗುತ್ತದೆ ಅಥವಾ ಜೀರ್ಣಕ್ರಿಯೆಗೆ ಹಾನಿಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯವಿಲ್ಲ. ಬದಲಿಗೆ, ಎಷ್ಟು ಪ್ರಮಾಣದಲ್ಲಿ ತಿನ್ನುತ್ತೇವೆ ಮತ್ತು ನಮ್ಮ ದೇಹಕ್ಕೆ ಅದು ಹೇಗೆ ಹೊಂದಿಕೊಳ್ಳುತ್ತದೆ ಎಂಬುದು ಹೆಚ್ಚು ಮುಖ್ಯ.

ಮಾವು ಮತ್ತು ದ್ರಾಕ್ಷಿ

ಮಾವು ಮತ್ತು ದ್ರಾಕ್ಷಿ ಎರಡೂ ನೈಸರ್ಗಿಕವಾಗಿ ಸಿಹಿಯಾಗಿರುವ ಹಣ್ಣುಗಳು. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಟ್ಟಿಗೆ ಸೇವಿಸಿದರೆ ಕಾರ್ಬೊಹೈಡ್ರೇಟ್‌ ಸೇವನೆ ಹೆಚ್ಚಾಗಬಹುದು. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೇವಿಸಿ, ಬೇರೆ ಬೇರೆ ಹಣ್ಣುಗಳನ್ನೂ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ವಿಧಾನವಾಗಿದೆ.

ಅನಾನಸ್ ಮತ್ತು ಸಿಟ್ರಸ್ ಹಣ್ಣುಗಳು

ಕಿತ್ತಳೆ, ನಿಂಬೆ ಮುಂತಾದ ಸಿಟ್ರಸ್ ಹಣ್ಣುಗಳು ಹಾಗೂ ಅನಾನಸ್ ಆಮ್ಲೀಯವಾಗಿರುತ್ತವೆ. ಇವುಗಳನ್ನು ಒಟ್ಟಿಗೆ ತಿಂದರೆ ವಿಷಕಾರಿ ವಸ್ತು ಸೃಷ್ಟಿಯಾಗುತ್ತದೆ ಎಂಬುದು ತಪ್ಪು. ಆದರೆ ಆ್ಯಸಿಡಿಟಿ ಅಥವಾ ಎದೆಯುರಿಗೆ ಸೂಕ್ಷ್ಮವಾಗಿರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅಸ್ವಸ್ಥತೆ ಉಂಟಾಗಬಹುದು.

ತಾಜಾ ಹಣ್ಣು ಮತ್ತು ಒಣಹಣ್ಣು

ಒಣಹಣ್ಣುಗಳಲ್ಲಿ ನೀರಿನಂಶ ಕಡಿಮೆಯಿರುವುದರಿಂದ ಸಕ್ಕರೆ ಮತ್ತು ಕ್ಯಾಲೊರಿ ಹೆಚ್ಚು ಸಾಂದ್ರವಾಗಿರುತ್ತವೆ. ಹೀಗಾಗಿ ತಾಜಾ ಹಣ್ಣಿನ ಜತೆಗೆ ಒಣಹಣ್ಣು ತಿನ್ನುವಾಗಲೂ ಪ್ರಮಾಣದ ಬಗ್ಗೆ ಗಮನ ಇರಬೇಕು.

ಬಾಳೆಹಣ್ಣು ಮತ್ತು ಮಾವು

ಬಾಳೆಹಣ್ಣು ಹಾಗೂ ಮಾವು ಎರಡೂ ನೈಸರ್ಗಿಕ ಸಕ್ಕರೆ ಮತ್ತು ಕಾರ್ಬೊಹೈಡ್ರೇಟ್‌ಗಳನ್ನು ಹೊಂದಿರುವ ಹಣ್ಣುಗಳು. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಟ್ಟಿಗೆ ತಿಂದರೆ ಒಟ್ಟಾರೆ ಕ್ಯಾಲೊರಿ ಮತ್ತು ಸಕ್ಕರೆ ಸೇವನೆ ಹೆಚ್ಚಾಗಬಹುದು. ಹಾಗಾಗಿ ಪ್ರಮಾಣ ನಿಯಂತ್ರಿಸುವುದು ಮುಖ್ಯ.

ಬಾಳೆಹಣ್ಣು ಮತ್ತು ದ್ರಾಕ್ಷಿ

ಬಾಳೆಹಣ್ಣು ಹಾಗೂ ದ್ರಾಕ್ಷಿ ಎರಡೂ ಸಿಹಿಯಾದ ಹಣ್ಣುಗಳು. ಇವುಗಳನ್ನು ಮಿಕ್ಸ್ ಮಾಡಿ ದೊಡ್ಡ ಪ್ರಮಾಣದಲ್ಲಿ ಸೇವಿಸುವ ಬದಲು, ಮಿತವಾಗಿ ತಿನ್ನುವುದು ಉತ್ತಮ. ವಿಶೇಷವಾಗಿ ಸಕ್ಕರೆ ಸೇವನೆಯನ್ನು ನಿಯಂತ್ರಿಸಬೇಕಾದವರು ಪ್ರಮಾಣದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

Shwetha M

Leave a Reply

Your email address will not be published. Required fields are marked *