ಸೆಲೆಬ್ರಿಟಿಗಳ ಸೀಕ್ರೆಟ್ ಖಾಯಿಲೆ! – ಫಾಫಾ ಮಾತ್ರವಲ್ಲ..‌ಸಲ್ಮಾನ್ ಗೂ ಖಾಯಿಲೆ!
ಅನುಷ್ಕಾಗೂ ಎದುರಾದ ಸಮಸ್ಯೆಯೇನು?

ಸೆಲೆಬ್ರಿಟಿಗಳ ಸೀಕ್ರೆಟ್ ಖಾಯಿಲೆ! – ಫಾಫಾ ಮಾತ್ರವಲ್ಲ..‌ಸಲ್ಮಾನ್ ಗೂ ಖಾಯಿಲೆ!ಅನುಷ್ಕಾಗೂ ಎದುರಾದ ಸಮಸ್ಯೆಯೇನು?

ಆರೋಗ್ಯ ಸಮಸ್ಯೆ ಅನ್ನೋದು ಯಾರನ್ನೂ ಕೂಡ ಬಿಟ್ಟಿಲ್ಲ. ಯಾವುದೇ ಬೇದ- ಭಾವ ಮಾಡದೇ ವಕ್ಕರಿಸಿಕೊಳ್ಳುತ್ತೆ.. ಎಷ್ಟೇ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡರೂ ನಾನಾ ಕಾರಣಗಳಿಂದ ಅನಾರೋಗ್ಯ ಬಾಧಿಸುತ್ತೆ. ಇನ್ನು ಫಿಲ್ಮ್ ಸ್ಟಾರ್ಸ್ ತಮ್ಮ ಆರೋಗ್ಯದ ಹೆಚ್ಚು ಜಾಗರೂಕತೆ ವಹಿಸ್ತಾರೆ.. ಫಿಟ್ನೆಸ್ ಗಾಗಿ ನಾನಾ ಸರ್ಕಸ್ ಮಾಡ್ತಾರೆ.. ತಿನ್ನೋ ಆಹಾರದಿಂದ ಹಿಡಿದು.. ಕುಡಿಯೋ ನೀರು, ನಿದ್ದೆ ಎಲ್ಲದ್ರ ಬಗ್ಗೆ ಕಾಳಜಿ ವಹಿಸ್ತಾರೆ.. ಆದ್ರೂ ಅನೇಕ ಸೆಲೆಬ್ರಿಟಿಗಳು ನಾನಾ ಕಾಯಿಲೆಯಿಂದ ಬಳಲುತ್ತಿದ್ದಾರೆ.. ಇತ್ತೀಚೆಗೆ ಫಾಹದ್ ಫಾಸೀಲ್ ಅವರಿಗೆ ವಿಚಿತ್ರ ರೋಗ ಇದೆ ಅನ್ನೋ ವಿಚಾರ ಗೊತ್ತಾಯ್ತು.. ಕೇವಲ ಫಾಹದ್ ಫಾಸಿಲ್ ಮಾತ್ರವಲ್ಲದೆ ಇನ್ನೂ ಹಲವರಿಗೆ ನಾನಾ ವಿಚಿತ್ರ ಕಾಯಿಲೆಗಳಿವೆ.. ಸಲ್ಮಾನ್ ಖಾನ್,  ರಣ್ಬೀರ್ ಕಪೂರ್ ವರೆಗೂ ಹಲವು ಸೆಲೆಬ್ರಿಟಿಗಳು ವಿಚಿತ್ರ ರೋಗಗಳಿಂದ ಬಳಲ್ತಾ ಇದ್ದಾರೆ..

ಸಿನಿಮಾ ತಾರೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಸ್ವಲ್ಪ ಹೆಚ್ಚುಕಮ್ಮಿ ಆದ್ರೂ ತಜ್ಞರ ಬಳಿ ಸಲಹೆ ಪಡೆದುಕೊಳ್ತಾರೆ.  ನೂರು ಗ್ರಾಂ ತೂಕ ಹೆಚ್ಚಾದ್ರು, ಒಂದು ಕಪ್ಪು ಕಲೆಯಾದರೂ ತೀವ್ರ ಚಿಂತೆಗೆ ಒಳಗಾಗುತ್ತಾರೆ. ಇಷ್ಟೆಲ್ಲಾ ಆರೋಗ್ಯದ ಬಗ್ಗೆ ಮುತುವರ್ಜಿ ತೆಗೆದುಕೊಳ್ಳುತ್ತಿದ್ದರೂ ಕೆಲ ತಾರೆಯರು ಅಕಾಲಿಕ ಮರಣಕ್ಕೆ ತುತ್ತಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಬಾಲಿವುಡ್ ಭಾಯಿಜಾನ್ನಿಂದ ಹಿಡಿದು ರಣ್ಬೀರ್ ಕಪೂರ್ವರೆಗೂ ಕೆಲ ಕಲಾವಿದರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತಿಚೇಗೆ ಮಲಯಾಳಂ ನಟ ಫಾಹದ್ ಫಾಸಿಲ್ ತನಗೆ ವಿಚಿತ್ರ ಕಾಯಿಲೆ ಇದೆ ಅಂತಾ ಅವರೇ ಹೇಳ್ಕೊಂಡ್ರು.. ತಾನು ಎಡಿಎಚ್‍ಡಿ ಎಂಬ  ವಿಚಿತ್ರ ಕಾಯಿಲೆ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಎಡಿಎಚ್ ಡಿ ಎಂದರೆ ಅಟೆನ್ಶನ್ ಡಿಫಿಸಿಟ್ ಹೈಪರ್ರ್ಆಕ್ಟಿವ್ ಡಿಸಾರ್ಡರ್ ಆಗಿದೆ‌.. ಇದು ಅಪರೂಪದ ಕಾಯಿಲೆ ಆಗಿದೆ. ಫಹಾದ್ ಫಾಸಿಲ್ ಅವರಿಗೆ ಈ ಕಾಯಿಲೆ 41 ನೇ ವಯಸ್ಸಿನಲ್ಲಿ ಕಾಣಿಸಿಕೊಂಡಿದೆ. ವೈದ್ಯಕೀಯ ತಜ್ಞರ ಪ್ರಕಾರ, ಎಡಿಎಚ್ ಡಿಯಿಂದ ಬಳಲುತ್ತಿರುವ ಜನರು ಯಾವುದೇ ವಿಷಯದ ಬಗ್ಗೆ ಏಕಾಗ್ರತೆ ಹೊಂದಿರುವುದಿಲ್ಲ. ಅವ್ರಿಗೆ ಗಮನವನ್ನು ನೀಡಲು ಸಾಧ್ಯವಾಗುವುದಿಲ್ಲ. ಹೈಪರ್ ಆಕ್ಟಿವ್, ಹೈಪರ್ ಫೋಕಸ್, ಇಂಪಲ್ಸಿವಿಟಿ ಮುಂತಾದ ಲಕ್ಷಣಗಳನ್ನು ಅವರಲ್ಲಿ ಕಾಣಬಹುದಾಗಿದೆ. ಸದಾ ಕ್ರಿಯೇಟಿವ್ ಆಗಿರಲು ಬಯಸುತ್ತಾರೆ. ಮಾನಸಿಕವಾಗಿ ಸಾಕಷ್ಟು ಒತ್ತಡದಲ್ಲಿರುತ್ತಾರೆ.

ಅನೇಕ ಚಲನಚಿತ್ರ ಸೆಲೆಬ್ರಿಟಿಗಳು ಎಡಿಎಚ್ ಡಿ ಕಾಯಿಲೆಗೆ ಒಳಗಾಗಿದ್ದಾರೆ ಎನ್ನುವ ವರದಿ ಕೂಡ ಇದೆ. ವಿಲ್ ಸ್ಮಿತ್, ರಿಯಾನ್ ಗೋಸ್ಲಿನ್, ಜಸ್ಟಿನ್ ಟಿಂಬರ್ಲೇಕ್, ಜಿಮ್ ಕ್ಯಾರಿ, ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಎಮ್ಮಾ ವ್ಯಾಟ್ಸನ್ ಮತ್ತು ಇತರರು ವಿವಿಧ ಸಂದರ್ಭಗಳಲ್ಲಿ ತಮಗೆ ಈ ಸಮಸ್ಯೆ ಇದೆ ಅಂತಾ ಹೇಳ್ಕೊಂಡಿದ್ದರು..

ಇನ್ನು ವಯಸ್ಸು 58 ಆದ್ರೂ ಮದುವೆಯಾಗದ ಚಿರಯುವಕ, ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಹ ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಸಲ್ಮಾನ್ ಖಾನ್ Trigeminal Neuralgia ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಮುಖದಲ್ಲಿನ ಟ್ರೈಜಿಮಿನಲ್ ನರಗಳ ಮೇಲೆ ಪರಿಣಾಮ ಬೀರುತ್ತದೆ. ಇದೊಂದು ದೀರ್ಘಕಾಲದ ಕಾಯಿಲೆಯಾಗಿದ್ದು, ರೋಗಿಗೆ ನೋವು ಉಂಟು ಮಾಡುತ್ತದೆ.

ಏಷ್ಯಾದ ಸೆಕ್ಸಿ ಮ್ಯಾನ್ ಎಂದೇ ಗುರುತಿಸಿಕೊಂಡಿರುವ ರಬ್ಬರ್ನಂತೆ ದೇಹ ಮಣಿಸುವ ನಟ ಅಂದ್ರೆ ಅದು ಹೃತಿಕ್ ರೋಷನ್..  ಇವರು Subdural Hematoma ಸಮಸ್ಯೆಗೆ ತುತ್ತಾಗಿದ್ದರು. ಬ್ರೈನ್ ಸರ್ಜರಿಗೆ ಒಳಗಾಗಿ ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಮಡದಿ,ನಟಿ ಅನುಷ್ಕಾ ಶರ್ಮಾ Bulging Disc ಸಮಸ್ಯೆಗೆ ತುತ್ತಾಗಿದ್ದರು. ಇದು ಬೆನ್ನುಮೂಳೆಗೆ ಸಂಬಂಧಿಸಿದ ರೋಗವಾಗಿದೆ. ಅನುಷ್ಕಾ ಶರ್ಮಾ ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದು, ಮಕ್ಕಳಿಗೆ ಮೊದಲ ಅದ್ಯತೆ ನೀಡಿದ್ದಾರೆ.

ನಟಿ ಯಾಮಿ ಗೌತಮಿ Keratosis Pilaris ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೊಂದು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ಈ ಕಾಯಿಲೆಗೆ ತುತ್ತಾದವರ ಚರ್ಮ ಪದೇ ಪದೇ ಡ್ರೈ ಆಗುತ್ತಿರುತ್ತದೆ. ಚರ್ಮದ ಮೇಲೆ ಕೆಂಪು ಉಬ್ಬುಗಳು ಕಾಣಿಸಿಕೊಳ್ಳುತ್ತಿರುತ್ತವೆ.

ಅನಿಮಲ್ ಸಿನಿಮಾದ ಸಕ್ಸಸ್ನಲ್ಲಿರೋ ಬಾಲಿವುಡ್ನ ಚಾಕ್ಲೆಟ್ ಹೀರೋ ಎಂದೇ ಕರೆಸಿಕೊಳ್ಳುವ ರಣ್ಬೀರ್ ಕಪೂರ್, Nasal septumನಿಂದ ಬಳಲಿದ್ದಾರೆ. ಇದನ್ನು ಮೂಗಿನ ಭಾಗದಲ್ಲಿ ಮೂಳೆಗಳ ಉಳುಕು ಎಂದು ಕರೆಯಲಾಗುತ್ತದೆ.
ನಟಿ ಇಲಿಯಾನಾ ಡಿಕ್ರೂಜ್ ಸಹ Body Dysmorphiaಗೆ ತುತ್ತಾಗಿದ್ದರು. ಇದೊಂದು ಮಾನಸಿಕ ಕಾಯಿಲೆಯಾಗಿದ್ದು, ಕಣ್ಮುಂದೆ ಕಾಲ್ಪನಿಕ ದೃಶ್ಯಗಳು ಕಂಡಂತೆ ಕಾಣುತ್ತವೆ. ಇಲಿಯಾನಾ ಡಿ ಕ್ರೂಜ್ ತೆಲಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸ್ಟುಡೆಂಟ್ ಆಫ್ ದಿ ಇಯರ್ ಖ್ಯಾತಿಯ ನಟ ವರುಣ್ ಧವನ್, Vestibular Hypofunction ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಕಿವಿಗೆ ಸಂಬಂಧಿಸಿ ರೋಗವಾಗಿದೆ. ಕಿವಿಯೊಳಗಿನ ಒಂದು ಭಾಗ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದಾಗ ಈ ಸಮಸ್ಯೆ ಬರುತ್ತದೆ.

ಬಾಲಿವುಡ್ ಬಿಗ್ಬಿ, ಸಿನಿ ಲೋಕದ ದಿಗ್ಗಜ ಅಮಿತಾಬ್ ಬಚ್ಚನ್, Myasthenia Gravis ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೊಂದು ಆಟೋಇಮ್ಯೂನ್ ಕಾಯಿಲೆಯಾಗಿದ್ದು, ಈ ಸಮಸ್ಯೆ ಅಸ್ಥಿಪಂಜರದ ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಕೂಲಿ ಸಿನಿಮಾ ಚಿತ್ರೀಕರಣದಲ್ಲಾದ ಗಾಯದಿಂದ ಅಮಿತಾಬ್ ಇಂದೂ ಸಹ ಸಮಸ್ಯೆ ಎದುರಿಸುತ್ತಿದ್ದಾರೆ.
ಇದು ಸೆಲೆಬ್ರಿಟಿಗಳ ಅನಾರೋಗ್ಯದ ಬಗೆಗಿನ ಅಪ್ಡೇಟ್ಸ್..

Shwetha M