ಇನ್ಮುಂದೆ ಬ್ಲೂ ಕಲರ್‌ ಜೀನ್ಸ್‌ ಪ್ಯಾಂಟ್‌ ಧರಿಸುವಂತಿಲ್ಲ – ರೂಲ್ಸ್‌ ಬ್ರೇಕ್‌ ಮಾಡಿದ್ರೆ ಜೈಲೂಟ ಫಿಕ್ಸ್!‌  

ಇನ್ಮುಂದೆ ಬ್ಲೂ ಕಲರ್‌ ಜೀನ್ಸ್‌ ಪ್ಯಾಂಟ್‌ ಧರಿಸುವಂತಿಲ್ಲ – ರೂಲ್ಸ್‌ ಬ್ರೇಕ್‌ ಮಾಡಿದ್ರೆ ಜೈಲೂಟ ಫಿಕ್ಸ್!‌  

ನಾರ್ಥ್​ ಕೊರಿಯಾ ಎಂದಾಕ್ಷಣ ಮೊದಲಿಗೆ ನಮಗೆ ನೆನಪಾಗುವುದು ಅಲ್ಲಿನ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌. ಚಿತ್ರ-ವಿಚಿತ್ರ ಕಾನೂನು, ಕಟ್ಟುನಿಟ್ಟಾದ ನಿಯಮಕ್ಕೆ ಹೆಸರುವಾಸಿಯಾಗಿರುವ ಈ ದೇಶವು ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ಇದೀಗ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಜೀನ್ಸ್‌ ಪ್ಯಾಂಟ್‌ ಬ್ಯಾನ್‌ ಮಾಡಿದ್ದಾರೆ. ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿದ್ರೆ ಶಿಕ್ಷೆಯಾಗೋದು ಫಿಕ್ಸ್‌.

ಇದನ್ನೂ ಓದಿ: ಅಭಿನವ ಸರಸ್ವತಿಯ ಬದುಕಿನಲ್ಲಿ ನೋವುಗಳ ಸರಮಾಲೆ – ಅಮ್ಮನಿಗೆ ಕೊಟ್ಟ ಮಾತನ್ನು ಕೊನೆತನಕ ಉಳಿಸಿಕೊಂಡಿದ್ದರು ಸರೋಜಾದೇವಿ

ಈಗಿನ ಯುವಕ ಯುವತಿಯರು ಹೆಚ್ಚು ಜೀನ್ಸ್‌ ಪ್ಯಾಂಟ್‌ನ್ನೇ ಧರಿಸುತ್ತಾರೆ. ಇದು ಸ್ಟೈಲಿಶ್​​​ ಆಗಿ ಕಾಣಲು ಕೂಡ ಸಹಾಯ ಮಾಡುತ್ತದೆ. ಹಾಗಾಗಿ ಯುವಕ -ಯುವತಿಯರಿಗೆ‌ ಇದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಉತ್ತರ ಕೊರಿಯಾದಲ್ಲಿ ಜೀನ್ಸ್ ಪ್ಯಾಂಟ್ ಹಾಕಿಕೊಂಡರೆ ಜೈಲಿಗೆ ಹಾಕುವುದು ಗ್ಯಾರಂಟಿ. ಇಲ್ಲಿ ಜೀನ್ಸ್ ಪ್ಯಾಂಟ್ ನಿಷೇಧ ಮಾಡಲಾಗಿದೆ. ವಿಶ್ವದಲ್ಲಿ ಬೇರೆ ಬೇರೆ ವಿಚಾರಕ್ಕೆ ಯುದ್ಧ ನಡೆಯುತ್ತಿದ್ದರೆ, ಉತ್ತರ ಕೊರಿಯಾ ಜೀನ್ಸ್ ಪ್ಯಾಂಟ್ ವಿರುದ್ಧ ಯುದ್ಧ ಮಾಡುತ್ತಿದೆ. ನೀಲಿ ಜೀನ್ಸ್ ಧರಿಸಿ ರಸ್ತೆಯಲ್ಲಿ ಹೋದ್ರೆ ಪೊಲೀಸರು ಹಿಡಿದು ಜೈಲಿಗೆ ಹಾಕುತ್ತಾರೆ. ಅಲ್ಲಿ ನೀಲಿ ಜೀನ್ಸ್ ಪ್ಯಾಂಟ್ ಧರಿಸುವುದೇ ದೊಡ್ಡ ಅಪರಾಧವಾಗಿದೆ.

ಇನ್ನು ನೀಲಿ ಕಲರ್‌ ಜೀನ್ಸ್‌ ಬ್ಯಾನ್‌ ಮಾಡಲು ಕೂಡ ಕಾರಣವಿದೆ.  ನೀಲಿ ಜೀನ್ಸ್ ಅಮೆರಿಕನ್ ಸಂಸ್ಕೃತಿ ಮತ್ತು ಸಾಮ್ರಾಜ್ಯಶಾಹಿಯ ಸಂಕೇತ. ಈ ಕಾರಣಕ್ಕೆ ದೇಶದಲ್ಲಿ ನೀಲಿ ಜೀನ್ಸ್ ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  ಡ್ರೆಸ್ ಕೋಡ್   ಕೇವಲ ಕಾನೂನು ಅಲ್ಲ, ಇದು ಒಂದು ಸಿದ್ಧಾಂತದ ಭಾಗವಾಗಿದೆ. ಯಾರಾದರೂ ತಪ್ಪಾಗಿ ನೀಲಿ ಜೀನ್ಸ್ ಧರಿಸಿದರೆ, ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಇಲ್ಲಿನ ಸರ್ಕಾರವು ಬಟ್ಟೆಗಳನ್ನು ಮಾತ್ರವಲ್ಲದೆ ಜನರ ಆಲೋಚನೆಯನ್ನೂ ನಿಯಂತ್ರಿಸುತ್ತದೆ. ಯಾವ ಬಟ್ಟೆಗಳನ್ನು ಧರಿಸಬೇಕು, ಕೂದಲಿನ ಸ್ಟೈಲ್​​ ಹೇಗಿರಬೇಕು. ಯಾವ ಬಣ್ಣ ಸೂಕ್ತ, ಇದೆಲ್ಲವನ್ನೂ ಸರ್ಕಾರ ನಿರ್ಧರಿಸುತ್ತದೆ. ಯಾರೂ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ. ಇಲ್ಲಿನ ಜನರ ಫ್ಯಾಷನ್​​ ಬಗ್ಗೆ ಪೊಲೀಸರು ತುಂಬಾ ಎಚ್ಚರಿಕೆಯಿಂದ ಗಮನಿಸುತ್ತಾರೆ.

ಇನ್ನು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಅಂಗಡಿಗಳಲ್ಲಿ ಮಾರಾಟ ಮಾಡಿದ್ರು ಕೂಡ ಅಂಗಡಿ ಮಾಲೀಕನಿಗೆ ದಂಡವನ್ನು ವಿಧಿಸಲಾಗುವುದು ಎಂದು ಹೇಳಲಾಗಿದೆ. ಅಮೆರಿಕಕ್ಕೆ ಸಂಬಂಧಿಸಿದ ಯಾವುದೇ ವಸ್ತು ಅಥವಾ ಆಚರಣೆಗಳು ಇಲ್ಲಿ ಇರಬಾದರು, ಒಂದು ವೇಳೆ ಇದ್ದರೆ ಅದನ್ನು ಈ ತಕ್ಷಣವೇ ನಿಲ್ಲಿಸಿ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಅಮೇರಿಕನ್ ಬ್ರಾಂಡ್ ಶರ್ಟ್‌ಗಳು, ಕೂದಲಿನ ಬಣ್ಣಗಳು ಮತ್ತು ಚರ್ಮದ ಜಾಕೆಟ್‌ಗಳನ್ನು ಸಹ ನಿಷೇಧಿಸಲಾಗಿದೆ. ಇಡೀ ಜಗತ್ತು ಫ್ಯಾಷನ್​​ನಲ್ಲಿ ಸ್ವಾತಂತ್ರ್ಯವಾಗಿದ್ದರೆ, ಉತ್ತರ ಕೋರಿಯಾದಲ್ಲಿ ಮಾತ್ರ ಸಮಾಜವನ್ನು ನಿಯಂತ್ರಿಸುವ ಒಂದು ಮಾರ್ಗವೆಂದು ಹೇಳಿದೆ.  ಅಲ್ಲಿನ ಯುವಕರಿಗೆ ಬಟ್ಟೆಗಳು ಕೇವಲ ಉಡುಗೆಯಲ್ಲ, ಬದಲಾಗಿ ಸರ್ಕಾರಿ ಆದೇಶಗಳಾಗಿವೆ ಎಂದು ಹೇಳಿದ್ದಾರೆ. ಇದೀಗ ಈ ವಿಷಯ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Shwetha M