ಒಂದು ಜಾಹೀರಾತಿನಿಂದ ಬದಲಾಯ್ತು ಬದುಕು! – ರೋಹಿತ್ ಶರ್ಮಾ ಕೆಣಕಿದ್ಯಾರು? | ಹೊಟ್ಟೆಯಿಂದಲೇ ಹುಟ್ಟಿದ ಕಿಚ್ಚು!!

ಒಂದು ಜಾಹೀರಾತಿನಿಂದ ಬದಲಾಯ್ತು ಬದುಕು! – ರೋಹಿತ್ ಶರ್ಮಾ ಕೆಣಕಿದ್ಯಾರು? | ಹೊಟ್ಟೆಯಿಂದಲೇ ಹುಟ್ಟಿದ ಕಿಚ್ಚು!!

ಜಾಹೀರಾತುಗಳಿಂದ ಯಾರದಾದ್ರೂ ಜೀವನ ಬದಲಾಗೋದಿಕ್ಕೆ ಸಾಧ್ಯ ಇದ್ಯಾ ಅಂತ ಕೇಳಿದ್ರೆ ಸಾಧ್ಯವೇ ಇಲ್ಲ ಎನ್ನುವ ಉತ್ತರ ಹೆಚ್ಚಿನ ಜನರಿಂದ ಬರುತ್ತದೆ.. ಆದ್ರೆ ಏನಾದ್ರೂ ಸಾಧಿಸಬೇಕು ಎಂದು ಹೊರಟವರಿಗೆ ಒಂದೇ ಒಂದು ಮಾತು.. ಒಂದೇ ಒಂದು ಟ್ರಿಗರ್  ಪಾಯಿಂಟ್ ಸಾಕು. ಇಡೀ ಬದುಕನ್ನೇ ಬದಲಿಸೋದಿಕ್ಕೆ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದರೆ ಹಿಟ್ ಮ್ಯಾನ್ ರೋಹಿತ್ ಶರ್ಮಾ.. ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಕರಿಯರ್ ಚೇಂಜ್ ಆಗಿದ್ದು ಒಂದೇ ಜಾಹೀರಾತಿನಿಂದ. ಆ ಒಂದು ಆ್ಯಡ್ ನೋಡುತ್ತಿದ್ದಾಗ, ಟೀಂ ಇಂಡಿಯಾದಲ್ಲಿ ಆಗಿನ್ನೂ ಸ್ಥಾನ ಪಡೆಯಲು ಪರದಾಡ್ತಿದ್ದ ರೋಹಿತ್ ಗೆ ಹೊಸ ದಾರಿ ತೋರಿಸಿತ್ತು.. ಹಾಗಿದ್ದರೆ ಆ ಜಾಹೀರಾತಿನಲ್ಲಿ ಏನಿತ್ತು? ರೋಹಿತ್ ಶರ್ಮಾನನ್ನು ಕೆಣಕಿದ್ದ ಮಾತುಗಳು ಯಾವುವು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಭಾರತದ ವನಿತೆಯರು – 147 ವರ್ಷಗಳಲ್ಲಿ ಇದೇ ಮೊದಲು!

ಟೀಂ ಇಂಡಿಯಾದ  ನಾಯಕ ರೋಹಿತ್ ಶರ್ಮಾ ಈಗ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಪ್ರೀತಿಯ ಹಿಟ್ಮ್ಯಾನ್.. ಮೈದಾನದಲ್ಲಿ ಇರುವಾಗೆಲ್ಲಾ ನಗುತ್ತಾ, ಸಹ ಆಟಗಾರರ ಜೊತೆ ಗೇಲಿ ಮಾಡುತ್ತಾ, ಜೋಕ್ ಮಾಡುತ್ತಾ ಇರುವ ಈ ರೋಹಿತ್ ಶರ್ಮಾ ಬ್ಯಾಟಿಂಗ್ ನಲ್ಲಿ ಮಾತ್ರ ಎದುರಾಳಿ ಬೌಲರ್ಗಳನ್ನು ನಿದ್ದೆಯಲ್ಲೂ ಕಾಡುವಂತೆ ಬೌಂಡರಿ ಸಿಕ್ಸರ್ ಹೊಡೆಯುವ ದಾಂಡಿಗ.. ಲೀಲಾಜಾಲವಾಗಿ ಒನ್ಡೇ ಮ್ಯಾಚ್ಗಳಲ್ಲೂ ಡಬಲ್ ಸೆಂಚುರಿಗಳ ಮೇಲೆ ಡಬಲ್ ಸೆಂಚುರಿ ಭಾರಿಸಿದ ದಾಖಲೆ ಹೊಂದಿರುವ ರೋಹಿತ್ ಶರ್ಮಾ, ಇದೇ ಕಾರಣಕ್ಕಾಗಿ ರೋ–HIT ಎಂದು ಖ್ಯಾತಿ ಗಳಿಸಿದ್ದಾರೆ.  ಆದರೆ ಈ ಸೂಪರ್ ಸ್ಟಾರ್ ಆಟಗಾರನ ಕೆರಿಯರ್ನಲ್ಲಿ ಎರಡು ಭಾಗಗಳಿವೆ. ಒಂದು ಹಂತ ಬರೀ ಒದ್ದಾಟಗಳಿಂದ ತುಂಬಿಕೊಂಡಿದ್ರೆ ಇನ್ನೊಂದು ಹಂತ ಯಶಸ್ಸಿನ ಯಶೋಗಾಥೆಯಿಂದ ತುಂಬಿಕೊಂಡಿದೆ.

  2007 ರಿಂದ 2011.. ತಂಡದಲ್ಲಿ ಸ್ಥಾನ ಪಡೆಯಲು ಪರದಾಟ!

ರೋಹಿತ್ ಇಂದು ವಿಶ್ವಕ್ರಿಕೆಟ್ನ ಸ್ಟಾರ್ ಕ್ರಿಕೆಟರ್ ಅನ್ನಿಸಿಕೊಂಡಿರಬಹುದು. ಆದರೆ ಶರ್ಮಾ ಆರಂಭಿಕ ಜರ್ನಿ ಬರೀ ಕಲ್ಲು ಮುಳ್ಳುಗಳಿಂದಲೇ ಕೂಡಿತ್ತು. 2007 ರಲ್ಲಿ ಅಂತರಾಷ್ಟ್ರೀಯ ಪಂದ್ಯದಲ್ಲಿ ಡೆಬ್ಯು ಮಾಡಿದ್ರೂ ತಂಡದಲ್ಲಿ ಖಾಯಂ ಸ್ಥಾನ ಗಳಿಸಿರಲಿಲ್ಲ.. ಆಗೆಲ್ಲಾ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ ಸ್ಥಾನವಷ್ಟೇ ರೋಹಿತ್ಗೆ ಸಿಗುತ್ತಿತ್ತು.. ಓಪನಿಂಗ್ನಲ್ಲಿ ಸಚಿನ್, ಸೆಹ್ವಾಗ್ ಮತ್ತು ಗಂಭೀರ್ ಮಿಂಚುತ್ತಿದ್ದರು.. ಟೂ ಡೌನ್ ಅಥವಾ ನಂಬರ್ 4 ಸ್ಲಾಟ್ನಲ್ಲಿ ಮಾತ್ರ ಅವಕಾಶ ಸಿಗುತ್ತಿದ್ದರೂ ಅಲ್ಲೂ ಸಿಕ್ಕಾಪಟ್ಟೆ ಕಾಂಪಿಟೀಷನ್ ಇತ್ತು..  ಆಗೊಂದು ಈಗೊಂದು ಅವಕಾಶ ಸಿಕ್ಕರೂ ಪರ್ಮನೆಂಟ್ ಸ್ಥಾನ ತಂಡದಲ್ಲಿರಲಿಲ್ಲ.. ಅಲ್ಲದೆ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಆಗಿನ ಕ್ಯಾಫ್ಟನ್ ಧೋನಿಗೂ ಪೂರ್ತಿ ಭರವಸೆ ಇರಲಿಲ್ಲ. ಇದ್ರಿಂದಾಗಿಯೇ 2011ರ ಏಕದಿನ ವಿಶ್ವಕಪ್ನಲ್ಲಿ ಅವಕಾಶ ವಂಚಿತರಾದ್ರು. ಇದರಿಂದ ಹಿಟ್ಮ್ಯಾನ್ ಕರಿಯರ್ ಡೋಲಾಮಾನವಾಗಿತ್ತು. ಆಗಲೇ ಒಂದು ಜಾಹೀರಾತು ರೋಹಿತ್ ಶರ್ಮಾ ಅವರನ್ನು ಕೆಣಕಿತ್ತು.. ಅಲ್ಲಿಂದ ನಂತರ ಶರ್ಮಾ ಸಂಪೂರ್ಣ ಬದಲಾದ್ರು..

2012 ರ ವೇಳೇಗೆ ತಂಡದಲ್ಲಿ ಸ್ಥಾನಕ್ಕಾಗಿ ಪರದಾಡಿದ್ದ ರೋಹಿತ್ ಲೆಕ್ಕವಿಲ್ಲದಷ್ಟು ಟೀಕೆ, ಅವಮಾನ ಎದುರಿಸಿದ್ದರು ಎನ್ನುವುದನ್ನು ರೋಹಿತ್ ಶ್ರಮಾ ಅವರ ಬಹುಕಾಲದ ಸ್ನೇಹಿತ, ಮಾಜಿ ಕ್ರಿಕೆಟರ್ ಅಭಿಷೇಕ್ ನಾಯರ್ ಹೇಳಿದ್ದಾರೆ.. 2011 ರ ವಿಶ್ವಕಪ್ಗೆ ರೋಹಿತ್ ಅವರನ್ನು ಆಯ್ಕೆ ಮಾಡದಿದ್ದಾಗ, ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡೋಣ ಎಂದು ರೋಹಿತ್ಗೆ ನಾನು ಹೇಳುತ್ತಿದ್ದೆ. ಏಕೆಂದರೆ ಅವರು ಆ ಸಮಯದಲ್ಲಿ ರೋಹಿತ್ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದರು. ಆಗಲೇ ಟಿವಿಯಲ್ಲಿ ಒಂದು ಜಾಹೀರಾತು ದೃಶ್ಯ ಪ್ರಸಾರವಾಗಿತ್ತು… ಅದರಲ್ಲಿ ರೋಹಿತ್ ಮತ್ತು ಯುವರಾಜ್ ನಿಂತುಕೊಂಡಿದ್ರು. ರೋಹಿತ್ ನ ಹೊಟ್ಟೆಯ ಸುತ್ತಲು ಬಾಣದ ಗುರುತು ಹಾಕಿ, ಫಿಟ್ನೆಸ್ ವಿಚಾರದಲ್ಲಿ ವ್ಯಂಗ್ಯ ಮಾಡಿದಂತಿತ್ತು.. ಅದನ್ನು ನಾನು ಎಂದಿಗೂ ಮರೆಯುವುದಿಲ್ಲು ಎಂದು ಅಭಿಷೇಕ್ ನಾಯರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ..

ಆ ಜಾಹೀರಾತು ನೋಡಿದ ರೋಹಿತ್ ಶರ್ಮಾ, ತನ್ನ ಮೇಲಿರುವ ಹೊಟ್ಟೆಯ ಕಾರಣಕ್ಕಾಗಿಯೇ ಆಟವಾಗಲು ಸಾಧ್ಯವಾಗೋದಿಲ್ಲ ಎಂಬ  ಗ್ರಹಿಕೆಯನ್ನು ಬದಲಿಸಬೇಕೆಂದು ಹೇಳಿದ್ದರಂತೆ.. ಅಲ್ಲೀವರೆಗೂ ರೋಹಿತ್ ಶರ್ಮಾರನ್ನು ಎರಡು ನಿಮಿಷಗಳ ಮ್ಯಾಗಿಮ್ಯಾನ್ ಅಂತೆಲ್ಲಾ ಟೀಕಿಸ್ತಿದ್ರು. ಇದನ್ನ ಗಂಭೀರವಾಗಿ ತೆಗೆದುಕೊಂಡ ಹಿಟ್ಮ್ಯಾನ್, ಅಭಿಷೇಕ್ ನಾಯರ್ ಬಳಿ, ತನ್ನನ್ನು ಟೀಕಿಸುತ್ತಿರುವವರ ಬಾಯಿ ಮುಚ್ಚಿಸುತ್ತೇನೆ ಎಂದು ಮಾತುಕೊಟ್ಟಿದ್ರಂತೆ.  ಅದಕ್ಕಾಗಿಯೇ ಅಭಿಷೇಕ್ ನಾಯರ್ ನೆರವನ್ನೂ ಕೇಳಿದ್ದರಂತೆ ರೋಹಿತ್..  ತನ್ನ ಮೇಲಿನ ಟೀಕೆಗಳಿಂದ ಹೊರಬರಲು ನೀನು ಏನು ಹೇಳ್ತಿಯೋ ಅದೆಲ್ಲವನ್ನೂ ನಾನು ಮಾಡಲು ರೆಡಿ ಎಂದು ಅಭಿಷೇಕ್ ಬಳಿ ರೋಹಿತ್ ಹೇಳಿದ್ದರಂತೆ.. ಮುಂಬೈ ರಣಜಿ ಟೀಂನಲ್ಲಿ ಜೊತೆಗಾರನಾಗಿದ್ದ ಅಭಿಷೇಕ್ ನಾಯರ್, ಅದಾಗಲೇ ಕಷ್ಟದಲ್ಲಿದ್ದ ದಿನೇಶ್ ಕಾರ್ತಿಕ್ಗೂ ಆಟದಲ್ಲಿ ಸುಧಾರಣೆ ಕಾಣಲು ನೆರವಾಗಿದ್ದರು.. ಇದೇ ಕಾರಣದಿಂದ ರೋಹಿತ್ ಕೂಡ ಅಭಿಷೇಕ್ ನಾಯರ್ ನೆರವು ಕೇಳಿದ್ದರು.. ಅಲ್ಲಿಂದ ನಂತರ ಅಭಿಷೇಕ್ ನಾಯರ್ ಸಲಹೆಯಂತೆ, ಸಖತ್ ಹಾರ್ಡ್ವರ್ಕ್ ಮಾಡಿದ ರೋಹಿತ್ ಶರ್ಮಾ ಫಿಟ್ನೆಸ್ಗೆ ಹೆಚ್ಚಿನ ಮಹತ್ವ ನೀಡಿದ್ರು. ಬ್ಯಾಟಿಂಗ್ ಟೆಕ್ನಿಕ್ ಮೇಲೆ ವರ್ಕೌಟ್ ಮಾಡಿದ್ರು. ನೆಟ್ನಲ್ಲಿ ಲೀಟರ್ಗಟ್ಟಲೆ ಬೆವರು ಹರಿಸಿದ ಪರಿಣಾಮ ಯಶಸ್ಸಿನ ರುಚಿ ನೋಡಿದ್ರು. ಆ ಬಳಿಕ ಹಿಟ್ಮ್ಯಾನ್ ರೋಹಿತ್ ಹಿಂತಿರುಗಿ ನೋಡಿದ್ದೇ ಇಲ್ಲ. ನಂತರ ರೋಹಿತ್ ಶರ್ಮಾ ಮಾಡಿರುವ ಸಾಧನೆಗಳು, ಹೊಡೆದಿರುವ ಸೆಂಚುರಿ, ಡಬಲ್ ಸೆಂಚುರಿಗಳು ನಮ್ಮ ಕಣ್ಣ ಮುಂದಿವೆ.. ಒಟ್ನಲ್ಲಿ ರೋಹಿತ್ ಶರ್ಮಾ ಏಳುಬೀಳಿನ ಹಾದಿ ನಿಜಕ್ಕೂ ರೋಚಕ..

Shwetha M

Leave a Reply

Your email address will not be published. Required fields are marked *