ಮದುವೆಯಾದ್ರೂ ಇನ್‌ಸ್ಟಾಗ್ರಾಂನಲ್ಲಿ ಬೇರೆಯವರ ಜೊತೆ ಲವ್ – ಗಂಡನನ್ನ ಬಿಟ್ಟು ಹೆಂಡತಿಗೆ ಬಿಗ್ ಶಾಕ್

ಮದುವೆಯಾದ್ರೂ ಇನ್‌ಸ್ಟಾಗ್ರಾಂನಲ್ಲಿ ಬೇರೆಯವರ ಜೊತೆ ಲವ್ – ಗಂಡನನ್ನ ಬಿಟ್ಟು ಹೆಂಡತಿಗೆ ಬಿಗ್ ಶಾಕ್

ಮದುವೆಯಾಗಿ ಮಕ್ಕಳಿರುವ ಮಹಿಳೆಯೊಬ್ಬಳು ಸೋಶಿಯಲ್ ಮೀಡಿಯಾ ಮಾಯೆಗೆ ಬಿದ್ದು ಮೋಸ ಹೋದ ಘಟನೆ ಆಂಧ್ರದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ 30 ವರ್ಷದ ವಿವಾಹಿತ ಮಹಿಳೆಗೆ ಇನ್‌ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಇಬ್ಬರೂ ಗಂಟೆಗಟ್ಟಲೆ ಚಾಟಿಂಗ್‌ನಲ್ಲಿ ಮುಳುಗಿದ್ದರು. ನಂತರ ಆಡಿಯೋ ಮತ್ತು ವಿಡಿಯೋ ಕಾಲ್‌ಗಳೂ ನಡೆದವು. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು. ಆ ವ್ಯಕ್ತಿ ತನ್ನನ್ನು ತಾನು ಶ್ರೀಮಂತ ಮತ್ತು ಅನುಭವವಿರುವ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದನ್ನು ಮಹಿಳೆ ಸಂಪೂರ್ಣವಾಗಿ ನಂಬಿದ್ದಳು. ಗಂಡ ಮತ್ತು ಮೂವರು ಮಕ್ಕಳನ್ನು ಬಿಟ್ಟು, ಇನ್‌ಸ್ಟಾಗ್ರಾಂ ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸಬೇಕೆಂದು ಮಹಿಳೆ ಮನೆಯಿಂದ ಓಡಿ ಹೋಗಿ ಆಂಧ್ರಪ್ರದೇಶ ತಲುಪಿದ್ದಾಳೆ.

ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಗಿಲ್ಲಿ! – ಇನ್ಮುಂದೆ ಸಿನಿಮಾ ನಿರ್ದೇಶನ ಮಾಡ್ತಾರೆ ಕಾಮಿಡಿ ಕಿಂಗ್!‌

ಕೃಷ್ಣಾ ಜಿಲ್ಲೆಯ ಮಚಿಲಿಪಟ್ಟಣಂನಲ್ಲಿ ಆನ್‌ಲೈನ್‌ನಲ್ಲಿ ಪರಿಚಯವಾದ ಪ್ರಿಯಕರನನ್ನು ಭೇಟಿಯಾಗಿದ್ದಾಳೆ. ಆದರೆ ಅಲ್ಲಿಯೇ ಅಸಲಿ ನಿಜಾಂಶ ಹೊರಬಿದ್ದಿದೆ. ತನ್ನನ್ನು ಶ್ರೀಮಂತ ಎಂದು ಹೇಳಿಕೊಂಡಿದ್ದ ವ್ಯಕ್ತಿ ವಾಸ್ತವದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಆಕೆ ಬೆಚ್ಚಿಬಿದ್ದಿದ್ದಾಳೆ. ತಾನು ಮೋಸ ಹೋಗಿರುವುದನ್ನು ಅರಿತು ತೀವ್ರ ನಿರಾಶೆಗೊಂಡಿದ್ದಾಳೆ. ಅಷ್ಟರಲ್ಲೇ ಆಕೆಯ ಕುಟುಂಬ ಸದಸ್ಯರು ಆಕೆಯ ಹುಡುಕಾಟ ಆರಂಭಿಸಿದ್ದರು. ಫೋನ್ ಸಿಗ್ನಲ್ ಮತ್ತು ಸೋಶಿಯಲ್ ಮೀಡಿಯಾ ವಿವರಗಳ ಆಧಾರದ ಮೇಲೆ ಆಕೆ ಇರುವ ಸ್ಥಳವನ್ನು ಪತ್ತೆಹಚ್ಚಿದರು. ಪೊಲೀಸರ ಮಧ್ಯಸ್ಥಿಕೆಯಿಂದ ಮಹಿಳೆಯನ್ನು ಸುರಕ್ಷಿತವಾಗಿ ಕರೆತರಲಾಯಿತು. ಪೋಷಕರು ಮತ್ತು ಸಂಬಂಧಿಕರು ಸೇರಿ ಆಕೆಗೆ ಬುದ್ಧಿಮಾತು ಹೇಳಿದ್ದರಿಂದ ಕೊನೆಗೆ ಆಕೆ ತನ್ನ ಕುಟುಂಬದ ಬಳಿಗೆ ಮರಳಿದ್ದಾಳೆ.

Kishor KV

Leave a Reply

Your email address will not be published. Required fields are marked *