ಅನ್ ಸೋಲ್ಡ್.. ಬದಲಿ ಆಟಗಾರ.. ಇಂಜುರಿ.. ಕ್ಯಾಪ್ಟನ್ – RCBಗೆ ಲಕ್ಕಿ ಕ್ಯಾಪ್ಟನ್ ಆಗಿದ್ದೇಗೆ ರಜತ್ ಪಾಟಿದಾರ್?

ಅನ್ ಸೋಲ್ಡ್.. ಬದಲಿ ಆಟಗಾರ.. ಇಂಜುರಿ.. ಕ್ಯಾಪ್ಟನ್ – RCBಗೆ ಲಕ್ಕಿ ಕ್ಯಾಪ್ಟನ್ ಆಗಿದ್ದೇಗೆ ರಜತ್ ಪಾಟಿದಾರ್?

18ನೇ ಸೀಸನ್​ನಲ್ಲಿ ಚಾಂಪಿಯನ್ಸ್.. 19ನೇ ಸೀಸನ್​ನಲ್ಲಿ ಡೇಂಜರಸ್ ಪ್ಲೇಯರ್ಸ್.. ಲಾಸ್ಟ್ ಸೀಸನ್​ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಐಪಿಎಲ್​ನಲ್ಲಿ ನಡೆದಿದ್ದೇ ದಾರಿಯಾಗಿದೆ. ಹೋಂ ಪಿಚ್, ಅವೇ ಪಿಚ್​ನಲ್ಲೂ ಡಾಮಿನೇಟ್ ಮಾಡ್ತಿದ್ದಾರೆ. ಮಿಡ್ಲಲ್ಲಿ ಜಾರಿದ್ರೂ ನೆಕ್ಸ್​ಟ್ ಮ್ಯಾಚಲ್ಲೇ ಕಂ ಬ್ಯಾಕ್ ಮಾಡ್ತಿದ್ದಾರೆ. ಈ ಸಲ ಕೂಡ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್​ನಲ್ಲೇ ಇದ್ದಾರೆ. ಆರ್​ಸಿಬಿಯ ಈ ಜರ್ನಿಯಲ್ಲಿ ಎಲ್ಲರೂ ಗ್ರೇಟ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಅದ್ರಲ್ಲೂ ರಜತ್ ಪಾಟಿದಾರ್ ಕ್ಯಾಪ್ಟನ್ಸಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಬ್ಯಾಟರ್ ಆಗಿ ಕ್ಯಾಪ್ಟನ್ ಆಗಿ ಸೆನ್ಸಿಬಲ್ ಆಗಿ ಟೀಂ ಲೀಡ್ ಮಾಡ್ತಾ ಅಟೆನ್ಷನ್ ಸೀಕರ್ ಆಗಿದ್ದಾರೆ.

ಇದನ್ನೂ ಓದಿ : 14-6=1.. ಗುಡ್ ಬೈ KKR – ಗ್ರೀನ್ ಸಿಗ್ನಲ್ ಸಿಕ್ರೂ ಗೆಲ್ಲೋಕಾಗ್ತಿಲ್ವಾ?         

2025ರ ಐಪಿಎಲ್​ಗೂ ಮುನ್ನ ಬೆಂಗಳೂರು ತಂಡದ ಕ್ಯಾಪ್ಟನ್ ಯಾರು ಅನ್ನೋ ಪ್ರಶ್ನೆ ಇತ್ತು. ಈ ವೇಳೆ ಫ್ರಾಂಚೈಸಿ ರಜತ್ ಪಾಟಿದಾರ್​ರನ್ನ ನಾಯಕ ಅಂತಾ ಘೋಷಣೆ ಮಾಡುತ್ತೆ. ಆಗ ಪಾಟಿದಾರ್ ಬಗ್ಗೆ ಮೂಗು ಮುರಿದವ್ರೇ ಜಾಸ್ತಿ. ಲೆಜೆಂಡರಿ ಪ್ಲೇಯರ್ಸ್ ಇದ್ದ ಟೀಂ, ಮೋಸ್ಟ್ ಫ್ಯಾನ್ ಬೇಸ್ ಇರೋ ಟೀಂ, ಕಿಂಗ್ ಕೊಹ್ಲಿ ಆಡೋ ಟೀಂ.. ಅಂಥಾದ್ರಲ್ಲಿ ಇನ್​ಎಕ್ಸ್​ಪೀರಿಯನ್ಸ್ ಇರೋ ರಜತ್ ಪಾಟಿದಾರ್​ಗೆ ಪಟ್ಟ ಕಟ್ಟಿದ್ರಾ ಅಂತೆಲ್ಲಾ ಅಣಕಿಸಿದ್ರು. ಆದ್ರೆ ಅದೇ ಪಾಟಿದಾರ್ ನಮ್ಮ ಕ್ಯಾಪ್ಟನ್ಸಿಯ ಮೊದಲ ಆವೃತ್ತಿಯಲ್ಲೇ ಕಪ್ ಗೆದ್ದು ತೋರಿಸಿದ್ರು. ಈ ಸೀಸನ್​ನಲ್ಲಿ ಬ್ಯಾಟಿಂಗ್​ನಲ್ಲೂ ಚೆಂಡಾಡ್ತಿದ್ದಾರೆ.

2026ರ ಸೀಸನ್ ನಲ್ಲಿ ಸಾಲಿಡ್ ಫಾರ್ಮ್​ ನಲ್ಲಿದ್ದಾರೆ ಪಾಟಿದಾರ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಈ ಸೀಸನ್​ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡ್ತಿರೋರ ಪೈಕಿ ರಜತ್ ಪಾಟಿದಾರ್ ಮುಂಚೂಣಿಯಲ್ಲಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅವ್ರ ಪ್ರದರ್ಶನ ಇಂಪ್ರೂವ್ ಆಗ್ತಾನೇ ಇದೆ. ಒಬ್ಬ ಬ್ಯಾಟರ್ ಆಗಿ ಎಷ್ಟು ರೆಸ್ಪಾನ್ಸಿಬಿಲಿಟಿ ತಗೊಳ್ತಿದ್ದಾರೆ ಕ್ಯಾಪ್ಟನ್ ಆಗಿಯೂ ಅಷ್ಟೇ ಮೆಚೂರ್ ಆಗಿ ಡಿಸಿಷನ್ಸ್ ತಗೊಳ್ತಿದ್ದಾರೆ. ಯಾವ ಓವರ್​ನ ಯಾವ ಬೌಲರ್​ಗೆ ಬಾಲ್ ಕೊಡ್ಬೇಕು.. ಫೀಲ್ಡ್ ಸೆಟ್ಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲದ್ರಲ್ಲೂ ಅದ್ಭುತವಾಗಿ ಲೀಡ್ ಮಾಡ್ತಿದ್ದಾರೆ.

ಪಾಟಿದಾರ್ ಪವರ್ ಶೋ!

ಮೊದಲ ಐದು ಪಂದ್ಯಗಳಲ್ಲಿ 213.46 ರ ಅದ್ಭುತ ಸ್ಟ್ರೈಕ್ ರೇಟ್‌ ನಲ್ಲಿ 222 ರನ್

ಐದು ಇನ್ನಿಂಗ್ಸ್‌ ಗಳಲ್ಲೇ 12 ಬೌಂಡರಿ ಮತ್ತು 21 ಸಿಕ್ಸರ್‌ ಗಳನ್ನು ಬಾರಿಸಿದ್ರು

ಪೇಸ್ ವಿರುದ್ಧ 37 ಎಸೆತಗಳಲ್ಲಿ 86 ರನ್, ಮೀಡಿಯಂ ಪೇಸ್ ವಿರುದ್ಧ 67 ರನ್

ಸ್ಪಿನ್ ವಿರುದ್ಧ 35 ಎಸೆತಗಳಲ್ಲಿ 69 ರನ್, ಕಂಫರ್ಟ್ ಝೋನ್‌ ಗೆ ಸೀಮಿತವಾಗಿಲ್ಲ

ಹೈದ್ರಾಬಾದ್ ವಿರುದ್ಧ 12 ಎಸೆತಗಳಲ್ಲಿ 31, ಚೆನ್ನೈ ವಿರುದ್ಧ 19 ಎಸೆತಗಳಲ್ಲಿ 48 ರನ್

ರಾಜಸ್ಥಾನ ವಿರುದ್ಧ 40 ಎಸೆತಗಳಲ್ಲಿ 63, ಮುಂಬೈ ವಿರುದ್ಧ 20 ಎಸೆತಗಳಲ್ಲಿ 53

ಲಕ್ನೋ ವಿರುದ್ಧ 13 ಎಸೆತಗಳಲ್ಲಿ 27 ರನ್, ಪ್ರತೀ ಇನ್ನಿಂಗ್ಸ್ ನಲ್ಲೂ ಇಂಪ್ಯಾಕ್ಟ್

ಇಲ್ಲಿ ರಜತ್ ಪಾಟಿದಾರ್ ಮೋಸ್ಟ್ ಎಫೆಕ್ಟೀವ್ ಆಗಿ ಕಾಣ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅವ್ರ ಎಬಿಲಿಟಿ ಜಾಸ್ತಿ ಆಗ್ತಾನೇ ಇದೆ. ಌಂಡ್ ಎಲ್ರೂ ಸ್ಪಿನ್ನರ್ಸ್ ವಿರುದ್ಧ ಸ್ಟ್ರಗಲ್ ಮಾಡ್ತಿದ್ರೆ ಪಾಟಿದಾರ್ ಯಾರಿಗೂ ಕೇರ್ ಮಾಡ್ದೇ ಬ್ಯಾಟ್ ಬಿಸ್ತಿದ್ದಾರೆ. ಸೋ ಇದು ಆರ್​ಸಿಬಿಗೆ ಪ್ಲಸ್ ಪಾಯಿಂಟ್. ಆದ್ರೆ ಕಳೆದ ಮೂರು ವರ್ಷಗಳ ಹಿಂದೆ ಇದೇ ಪಾಟಿದಾರ್ ಐಪಿಎಲ್​ನಲ್ಲಿ ಅನ್​ಸೋಲ್ಡ್ ಆಗಿದ್ರು. ಆ ನಂತ್ರ ಬದಲಿ ಆಟಗಾರ..

4 ವರ್ಷದಲ್ಲೇ ಬದಲಾವಣೆ!

2021ರಲ್ಲಿ 20 ಲಕ್ಷ ರೂಪಾಯಿಗೆ ಆರ್ ​ಸಿಬಿ ಸೇರಿದ್ದ ಪಾಟಿದಾರ್ 71 ರನ್ಸ್

2022ಕ್ಕೂ ಮುನ್ನ ರಿಲೀಸ್, 2022ರಲ್ಲಿ ಯಾವುದೇ ಫ್ರಾಂಚೈಸಿ ಬಿಡ್ ಮಾಡಲ್ಲ

ಪಾಟಿದಾರ್ ​ಗೆ ಮನೆಯಲ್ಲಿ ಮದುವೆ ಫಿಕ್ಸ್, ಲುವ್ನಿತ್ ಸಿಸೋಡಿಯಾ ಇಂಜುರಿ

ಬದಲಿ ಆಟಗಾರನಿಗೆ ಚಾನ್ಸ್ ನಿಡೋದಾಗಿ ರಜತ್ ಪಾಟಿದಾರ್ ಗೆ ಕರೆ

ಮದುವೆಯನ್ನೇ ಮುಂದೂಡಿಕೆ ಮಾಡಿ ಜಬೆಂಗಳೂರು ಕ್ಯಾಂಪ್ ಸೇರಿಕೊಳ್ತಾರೆ

25 ಮೇ 2022 ರಂದು ಲಕ್ನೋ ವಿರುದ್ಧ 54 ಬಾಲಲ್ಲಿ 112 ರನ್ ಗಳಿಸಿ ಅಜೇಯ

ಅದೇ ವರ್ಷ ಮಧ್ಯಪ್ರದೇಶ ರಣಜಿ ಟ್ರೋಫಿ ಗೆಲ್ಲಲು ಸಹಾಯ ಮಾಡ್ತಾರೆ

2023ರ ಐಪಿಎಲ್ ​ಗೂ ಮುನ್ನ ಹಿಮ್ಮಡಿ ಗಾಯದಿಂದಾಗಿ ಟೂರ್ನಿ ಮಿಸ್

2024ರಲ್ಲಿ 395 ರನ್ಸ್ ಕಲೆ, 2025ರ ಐಪಿಎಲ್​ ಗೂ ಮುನ್ನ 11 ಕೋಟಿಗೆ ರಿಟೇನ್

ನಾಯಕನ ಪಟ್ಟ, ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದ ಬೆಂಗಳೂರು

Shantha Kumari