ಗಿಲ್ ಕೈಯಲ್ಲಿ ಸಿರಾಜ್ ಟೆಸ್ಟ್ ಭವಿಷ್ಯ ಸೆಹ್ವಾಗ್ 2.0 ಆಗಲ್ವಂತೆ ಆರ್ಯವೀರ್!
PAK ಎದುರು ಸೋತ ಟೀಂ IND

ಗಿಲ್ ಕೈಯಲ್ಲಿ ಸಿರಾಜ್ ಟೆಸ್ಟ್ ಭವಿಷ್ಯ   ಸೆಹ್ವಾಗ್ 2.0 ಆಗಲ್ವಂತೆ ಆರ್ಯವೀರ್!PAK ಎದುರು ಸೋತ ಟೀಂ IND

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು 

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ನವೆಂಬರ್ 19ರಿಂದ ವೆಲ್ಲಿಂಗ್ಟನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಉಳಿಯಬೇಕಾದರೆ ಭಾರತಕ್ಕೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ನ್ಯೂಜಿಲೆಂಡ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್ ಆಡುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಇತ್ತೀಚಿನ ಪಂದ್ಯಗಳಲ್ಲಿ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದರೆ ಸಿರಾಜ್ ಅವರನ್ನು ತಂಡದಿಂದ ಕೈಬಿಡುವ ಬಗ್ಗೆ ಕೋಚ್ ಮೊರ್ನೆ ಮೊರ್ಕೆಲ್ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಅಂತಿಮ ತಂಡದ ಆಯ್ಕೆಯನ್ನು ನಾಯಕ ಶುಭಮನ್ ಗಿಲ್ ಅವರ ನಿರ್ಧಾರಕ್ಕೆ ಬಿಡಲಾಗಿದೆ.

ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಭಾರತದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಹೊರಬಿದ್ದಿದ್ದಾರೆ. ಐದನೇ ಏಕದಿನ ಪಂದ್ಯದ ವೇಳೆ ಅರ್ಷದೀಪ್ ಸಿಂಗ್ ಎಸೆದ ಬೌನ್ಸರ್ ಅವರ ಬಲಗೈಗೆ ಬಡಿದಿತ್ತು. ಸ್ಕ್ಯಾನ್‌ನಲ್ಲಿ ಮೂಳೆ ಮುರಿತ ಪತ್ತೆಯಾಗಿದೆ. ಅವರ ಬದಲಿಗೆ ಡೀನ್ ಫಾಕ್ಸ್‌ಕ್ರಾಫ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

U19 ಏಷ್ಯಕಪ್‌ನಲ್ಲಿ ಗೆದ್ದ ಖುಷಿಯಲ್ಲಿ ಭಾರತೀಯ ಯುವ ಆಟಗಾರರು ತೋರಿದ ಅತಿರೇಕದ ಆವೇಶಕ್ಕೆ ಪಾಕ್ ದಿಗ್ಗಜ ಶೋಯೆಬ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ಅದ್ಭುತ ಕ್ರಿಕೆಟ್ ಆಡಿತು. 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಅವರು ತೋರಿದ ಆತ್ಮವಿಶ್ವಾಸ ಮೆಚ್ಚುವಂತಹದ್ದು, ಆದ್ರೆ  ಆಕ್ರಮಣಶೀಲತೆ ಎದುರಾಳಿ ಆಟಗಾರರನ್ನು ಅವಮಾನಿಸುವ ಅಥವಾ ಕೆಣಕುವ ಮಟ್ಟಕ್ಕೆ ಹೋಗಬಾರದು ಎಂದಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟಚ್ ಮಾಡದ RCB – HAT-TRICK ಕಪ್ ಗೆ ಬಲಿಷ್ಠ ಟೀಂ

ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದ ಟೀಂ ಇಂಡಿಯಾ ವೇಗಿ ಗುರ್ನೂರ್ ಬ್ರಾರ್‌ಗೆ ಐಸಿಸಿ ಕ್ರಮ ಕೈಗೊಂಡಿದೆ. ನ್ಯೂಜಿಲೆಂಡ್ ಬ್ಯಾಟರ್ ಟಿಮ್ ಸೀಫರ್ಟ್ ಅವರನ್ನು ಔಟ್ ಮಾಡಿದ ಬಳಿಕ ಗುರ್ನೂರ್ ಅನುಚಿತವಾಗಿ ಸಂಭ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಅವರನ್ನು ಎಚ್ಚರಿಸಿದೆ.

ಆರ್ಯವೀರ್ ಸೆಹ್ವಾಗ್‌ ತಾನು ತಂದೆಯ ನೆರಳಿನಿಂದ ಹೊರಬರಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ನನ್ನ ವೃತ್ತಿಜೀವನದುದ್ದಕ್ಕೂ ತಂದೆಯೊಂದಿಗೆ ಹೋಲಿಕೆ ಮಾಡಲಾಗುತ್ತದೆ ಎಂಬುದನ್ನು ನಾನು ಬಹಳ ಹಿಂದೆಯೇ ಒಪ್ಪಿಕೊಂಡಿದ್ದೇನೆ, ಅದು ಅನಿವಾರ್ಯ. ಆದರೆ, ನಾನು ‘ಸೆಹ್ವಾಗ್ 2.0’ ಆಗಲು ಇಲ್ಲಿಗೆ ಬಂದಿಲ್ಲ, ಬದಲಿಗೆ ಆರ್ಯವೀರ್ ಸೆಹ್ವಾಗ್ ಆಗಲು ಬಯಸುತ್ತೇನೆ”  ಎಂದು ಆರ್ಯವೀರ್ ಹೇಳಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಐಪಿಎಲ್ 2027ರ ಉಳಿಸಿಕೊಳ್ಳುವ ಪಟ್ಟಿಯಿಂದ ಕೈಬಿಡಲಾಗಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದ ಹೆಡ್‌ರನ್ನ ಕೈ ಬಿಟ್ಟಿದ್ದು SRH ಫ್ಯಾನ್ಸ್‌ ಗೆ ಬೇಸರವಾಗಿದೆ.

ಭಾರತ ತಂಡ ಅಂಧರ ಟಿ20 ಕ್ರಿಕೆಟ್​ ಏಷ್ಯಾಕಪ್​ ಟೂರ್ನಿಯ ತನ್ನ 2ನೇ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೊನೇ ಎಸೆತದಲ್ಲಿ 1 ವಿಕೆಟ್​ನಿಂದ ವೀರೋಚಿತ ಸೋಲು ಅನುಭವಿಸಿದೆ. ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ 6 ವಿಕೆಟ್​ಗೆ 179 ರನ್​ ಕಲೆಹಾಕಿತು. ರನ್ ಚೇಸ್ ಮಾಡಿದ ಪಾಕಿಸ್ತಾನ ಕೊನೇ ಎಸೆತದಲ್ಲಿ 9 ವಿಕೆಟ್​ಗೆ 180 ರನ್​ ಕಲೆಹಾಕಿ ರೋಚಕ ಗೆಲುವು ಸಾಧಿಸಿತು.

ಐಪಿಎಲ್ ವೃತ್ತಿಜೀವನಕ್ಕೆ ವಿದಾಯ ಹೇಳಿರುವ ದಿಗ್ಗಜ ಎಂ.ಎಸ್. ಧೋನಿ ಅವರಿಗೆ ಅದ್ಧೂರಿ ಡ್ರೋನ್ ಪ್ರದರ್ಶನದ ಮೂಲಕ ಗೌರವ ಸಲ್ಲಿಸಿದೆ. ಸಿಎಸ್‌ಕೆಯ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ನಡೆದ ಲೈಟ್ ಶೋ   ವೇಳೆ, ಆಕಾಶದಲ್ಲಿ ಧೋನಿಯ ಮುಖದ ಚಿತ್ರಗಳು, ಅವರ ವಿಶಿಷ್ಟ ‘ಹೆಲಿಕಾಪ್ಟರ್ ಶಾಟ್’, ಅವರು ಸ್ಟಂಪಿಂಗ್ ಮಾಡುತ್ತಿರುವ ದೃಶ್ಯಗಳು ಹಾಗೂ ಅವರ ಜೆರ್ಸಿ ಸಂಖ್ಯೆ ‘ಏಳು’, ʼಥಲಾ ಫಾರೆವರ್ʼ ಎಂಬ ಬರಹದಿಂದ ಬೆಳಗಿತು.

ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯುತ್ತಿದೆ. ಮೊದಲ ದಿನದಾಟದಲ್ಲಿ ಪಾಕಿಸ್ತಾನ ತಂಡ 121 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಇದಕ್ಕೂ ಮೊದಲು ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 98 ರನ್‌ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದು, ಶ್ರೀಲಂಕಾ ತಂಡದ ಮೇಲೆ ಒತ್ತಡ ಹೆಚ್ಚಾಗಿದೆ.

 

Kishor KV

Leave a Reply

Your email address will not be published. Required fields are marked *