ಅಯ್ಯಯ್ಯೋ.. – ಜೀವಂತ ಹಾವನ್ನೇ ನುಂಗಿದ ಕಪ್ಪೆರಾಯ!

ಅಯ್ಯಯ್ಯೋ.. – ಜೀವಂತ ಹಾವನ್ನೇ ನುಂಗಿದ ಕಪ್ಪೆರಾಯ!

ಭೂಮಿ ಜೀವ ವೈವಿಧ್ಯದ ತವರು. ಪ್ರತಿಯೊಂದು ಜೀವಿಯೂ ಬದುಕಲು ಆಹಾರ ಅತ್ಯಗತ್ಯ. ಹುಲ್ಲುಗಳನ್ನು ಕೀಟಗಳು ತಿಂದ್ರೆ, ಈ ಕೀಟಗಳು ಕಪ್ಪೆಗಳ ಆಹಾರವಾಗಿರುತ್ತವೆ.  ಇನ್ನೂ  ಈ ಕಪ್ಪೆಗಳು ಹಾವುಗಳಿಗೆ ಆಹಾರವಾಗಿದೆ.  ಹೀಗಿದ್ರೂ  ನಮ್ಮ  ಪ್ರಕೃತಿಯಲ್ಲಿ ಆಗಾಗ ಆಹಾರ ಸರಪಳಿಗಳಿಗೆ ವಿರುದ್ಧವಾಗಿರುವ ಆಶ್ಚರ್ಯಕರ ಸಂಗತಿಗಳು ನಡೆಯುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಕಪ್ಪೆಯೊಂದು ಜೀವಂತ ಹಾವನ್ನು ನುಂಗಿದೆ.

ಇದನ್ನೂ ಓದಿ: ಪೆನ್‌ ಹಿಡಿದು ಶಾಲೆಗೆ ಬರುವ ಬದಲು ಗನ್‌ ಹಿಡಿದುಕೊಂಡು ಬಂದ ವಿದ್ಯಾರ್ಥಿ! – ಸಣ್ಣ ವಯಸ್ಸಿಗೆ ಇಷ್ಟೊಂದು ದ್ವೇಷನಾ?

ಹೌದು, ಅಚ್ಚರಿಯಾದ್ರೂ ಸತ್ಯ. ಸಾಮಾನ್ಯವಾಗಿ ಕಪ್ಪೆಯ ಗಾತ್ರ ತುಂಬಾ ಸಣ್ಣದು. ಅವುಗಳು ಹಾವುಗಳಿಗಿಂತ ತುಂಬಾ ಚಿಕ್ಕದಾಗಿರುತ್ತವೆ. ಹೀಗಾಗಿ ಹಾವುಗಳು ಕಪ್ಪೆಗಳನ್ನು ಭೇಟೆಯಾಗಿ ತಿನ್ನುತ್ತವೆ. ಆದ್ರೆ ಇಲ್ಲೊಂದು ಕಡೆ ಕಪ್ಪೆಯೇ ಹಾವನ್ನು ನುಂಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

@rizal.rayan_ ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಕಪ್ಪೆ ಹಾವನ್ನು ನುಂಗುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಈ ವೈರಲ್ ವಿಡಿಯೋದಲ್ಲಿ ಗಾತ್ರದಲ್ಲಿ ದೊಡ್ಡದಾಗಿರುವಂತಹ  ಕಪ್ಪೆಯೊಂದು ಜೀವಂತ ಹಾವನ್ನು ನಿಧಾನಕ್ಕೆ ನುಂಗುತ್ತಿರುತ್ತೆ, ಆ ಸಂದರ್ಭದಲ್ಲಿ ಆ ಹಾವು ಕಪ್ಪೆಯ ಬಾಯಿಯಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಎಂದು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯವನ್ನು ಕಾಣಬಹುದು.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸೋಶಿಯಲ್‌ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ʼರಿವರ್ಸ್ ಫುಡ್ ಚೈನ್ʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೊನೆಗೂ ಒಂದು ಕಪ್ಪೆಯಾದ್ರೂ ಹಾವಿನ ಮೇಲೆ ರಿವೇಂಜ್ ತೆಗೆದುಕೊಂಡಿತಲ್ವಾʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಕಪ್ಪೆ ಆಹಾರ ಸರಪಳಿಯ ನಿಯಮವನ್ನೇ ಮುರಿದಿದೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಹಲವರು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

Shwetha M