ರಕ್ತ ಸಂಬಂಧಗಳನ್ನ ಮೀರಿದ ಬಂಧ.. ನೋವು, ನಲಿವುಗಳ ಅನುಬಂಧ – ವಿಶ್ವ ಸ್ನೇಹಿತರ ದಿನದ ಬಗ್ಗೆ ನಿಮಗೆಷ್ಟು ಗೊತ್ತು..?

ರಕ್ತ ಸಂಬಂಧಗಳನ್ನ ಮೀರಿದ ಬಂಧ.. ನೋವು, ನಲಿವುಗಳ ಅನುಬಂಧ – ವಿಶ್ವ ಸ್ನೇಹಿತರ ದಿನದ ಬಗ್ಗೆ ನಿಮಗೆಷ್ಟು ಗೊತ್ತು..?

ರಕ್ತ ಸಂಬಂಧಗಳ ಮೀರಿದ ಬಂಧ. ನೋವಿರಲಿ, ನಲಿವಿರಲಿ ಜೊತೆಯಾಗುವ ಅನುಬಂಧ. ಗೆಳೆತನ ಅನ್ನುವುದು ಹಾಲಿನಷ್ಟೇ ಪರಿಶುದ್ಧವಾದದ್ದು. ಇದೇ ಕಾರಣಕ್ಕೆ ಸ್ನೇಹ ಎಂದರೆ ವಿಶೇಷ ಸ್ಥಾನಮಾನವಿದೆ. ಪ್ರತೀವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನ ವಿಶ್ವ ಸ್ನೇಹಿತರ ದಿನವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇವತ್ತು ಆಗಸ್ಟ್ ತಿಂಗಳ ಮೊದಲ ಭಾನುವಾರವಾಗಿದ್ದು ಇವತ್ತಿನ ದಿನದ ವಿಶೇಷವನ್ನ ಎಲ್ಲರೂ ತಿಳಿಯಲೇ ಬೇಕಿದೆ.

ಸ್ನೇಹ ಎಂದ ಮೇಲೆ ನಿತ್ಯವೂ ಇರುವಂತಹ ಸಂಬಂಧ. ಅದಕ್ಕಾಗಿ ಒಂದು ದಿನ ಆಚರಣೆ ಮಾಡುವ ಅಗತ್ಯ ಏನಿದೆ ಎಂದು ಎಲ್ಲರೂ ಕೇಳಬಹುದು. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಸ್ನೇಹಿತರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2011ರ ಎಪ್ರಿಲ್ 27ರಂದು ತನ್ನ ಅಧಿವೇಶನದಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ ಭಾರತದಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಈ ವರ್ಷ ಆಗಸ್ಟ್ 6ರಂದು ಈ ದಿನ ಬಂದಿದೆ. ಬಾಂಗ್ಲಾದೇಶ, ಮಲೇಶಿಯಾ ಮತ್ತು ಯುಎಇಯಲ್ಲೂ ಮುಂದಿನ ಭಾನುವಾರ ಸ್ನೇಹಿತರ ದಿನವನ್ನು ಆಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ : ದೇವರೇ.. ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು..! – ದೇವಿ ಮುಂದೆ ಭಕ್ತನ ಹೀಗೊಂದು ಬೇಡಿಕೆ

1930ರ ಬಳಿಕ ಸ್ನೇಹಿತರ ದಿನವೆನ್ನುವುದು ಆಚರಣೆಗೆ ಬಂದಿದೆ. ಮೊದಲ ವಿಶ್ವಯುದ್ಧದ ಬಳಿಕ ಶಾಂತಿ ಅಭಿಯಾನ ಮತ್ತು ಜನರು ಪರಸ್ಪರ ಬೆರೆಯುವುದು ಬೇಕಾಗಿತ್ತು. ಹಾಲ್ ಮಾರ್ಕ್ ಕಾರ್ಡ್ ತಯಾರಕರಾಗಿದ್ದ ಜೊಯ್ಸ್ ಹಾಲ್ ಎಂಬವರು ಸ್ನೇಹಿತರ ದಿನ ಆರಂಭಿಸಿದರು. ಆಗಸ್ಟ್ ತಿಂಗಳಲ್ಲಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. 1935ರಲ್ಲಿ ಅಮೆರಿಕಾದಲ್ಲಿ ಸ್ನೇಹಿತರ ದಿನ ಆಚರಣೆಯು ಆರಂಭವಾಯಿತು. ಅಗಸ್ಟ್ ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಬೇಕೆಂದು ಅಮೆರಿಕಾ ಕಾಂಗ್ರೆಸ್ ನಿರ್ಧರಿಸಿತು. ಸ್ನೇಹಿತರಿಗೆ ಗೌರವ ಸೂಚಿಸಲು ಮತ್ತು ಸ್ನೇಹಕ್ಕೆ ಗೌರವ ನೀಡಲು ಇದನ್ನು ಆಚರಿಸಲಾಯಿತು. ಯುವ ಜನಾಂಗವು ತಮ್ಮ ಸ್ನೇಹವನ್ನು ತುಂಬಾ ಸಂಭ್ರಮದಿಂದ ಆಚರಿಸಲು ಆರಂಭಿಸಿದಾಗ ಇದು ಒಂದು ರಾಷ್ಟ್ರೀಯ ಹಬ್ಬವಾಯಿತು. ಸ್ನೇಹಿತರು ಮತ್ತು ಸ್ನೇಹವನ್ನು ಈ ದಿನ ಗೌರವಿಸಲಾಗುತ್ತದೆ. ಇದರಿಂದ ಅಮೆರಿಕಾದಲ್ಲಿ ಸ್ನೇಹಿತರ ದಿನವು ಒಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಮೆರಿಕಾದಲ್ಲಿ ಯುವಜನಾಂಗದ ಸಂಭ್ರಮಾಚರಣೆಯನ್ನು ನೋಡಿದ ದಕ್ಷಿಣ ಅಮೆರಿಕಾದ ಮತ್ತು ಇತರ ಕೆಲವು ರಾಷ್ಟ್ರಗಳು ಕೂಡ ಇದನ್ನು ಆಚರಿಸಲು ಆರಂಭಿಸಿದವು. 1958ರಲ್ಲಿ ಪರಾಗ್ವೆಯು ತನ್ನದೇ ಆಗಿರುವ ರಾಷ್ಟ್ರೀಯ ಸ್ನೇಹಿತರ ದಿನವನ್ನು ಜುಲೈ 30ರಂದು ಆಚರಿಸಲು ಆರಂಭಿಸಿತು. ದಕ್ಷಿಣ ಏಶ್ಯಾದ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ನ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ ನಲ್ಲಿ ಇದನ್ನು ಜುಲೈ 20ರಂದು ಆಚರಿಸಲ್ಪಡುವುದು. ಫಿನ್ ಲ್ಯಾಂಡ್ ಮತ್ತು ಇಸ್ಟೊನಿಯಾದಲ್ಲಿ ಸ್ನೇಹಿತರ ದಿನದಂದೇ ಪ್ರೇಮಿಗಳ ದಿನ ಕೂಡ ಆಚರಿಸಲಾಗುತ್ತದೆ.

suddiyaana