ಕ್ಯಾಪ್ಸಿಕಂ ಬೋಂಡಾ ತಿನ್ನೋ ಆಸೆ ಆಗ್ತಿದ್ಯಾ? – ಈ ಸಿಂಪಲ್ ರೆಸಿಪಿ ಬಳಸಿ ಈಗಲೇ ಮಾಡಿ

ಕ್ಯಾಪ್ಸಿಕಂ ಬೋಂಡಾ ತಿನ್ನೋ ಆಸೆ ಆಗ್ತಿದ್ಯಾ? – ಈ ಸಿಂಪಲ್ ರೆಸಿಪಿ ಬಳಸಿ ಈಗಲೇ ಮಾಡಿ

ಸಂಜೆ ಹೊತ್ತು  ಮನೆಯಲ್ಲಿ ಇರುವಾಗ ಏನಾದ್ರೂ ತಿನ್ಬೇಕು ಅನ್ಸುತ್ತೆ.. ಹೊರಗಡೆ ಫುಡ್ ಬೇಡ ಅಂತ ಸಾಕಷ್ಟು ಜನ ಬೋಂಡಾ ಬಜ್ಜಿಯನ್ನ ತಿನ್ನೋಕೆ ಹೋಗಲ್ಲ. ಆದ್ರೆ ನೀವೇ ಮನೆಯಲ್ಲಿ  ಸಿಂಪಲ್ ಆಗಿರೋ ದೊಣ್ಣೆ ಮೆಣಸಿನ ಬೋಂಡಾ ಮಾಡಿಕೊಳ್ಳಬಹುದು. ಸಿಂಪಲ್ ರೆಸಿಪಿಯನ್ನ ನೋಡೋಣ ಬನ್ನಿ..

ದೊಣ್ಣೆ ಮೆಣಸಿನಕಾಯಿ ಬೋಂಡಾಕ್ಕೆ ಬೇಕಾಗುವ ಸಾಮಾಗ್ರಿಗಳು

6ರಿಂದ  8 ದೊಣ್ಣೆ ಮೆಣಸಿನ ಕಾಯಿ

ಎಣ್ಣೆ

ಸ್ಟಫ್ ಮಾಡಲು ಬೇಕಾಗುವ ಸಾಮಾಗ್ರಿ

4 ಮಧ್ಯಮಗಾತ್ರದ ಆಲೂಗಡ್ಡೆ – ಬೇಯಿಸಿ ಸ್ಮ್ಯಾಶ್ ಮಾಡಿಕೊಂಡಿದ್ದು

1 ಹಸಿರು ಮೆಣಸಿನ ಕಾಯಿ – ಹೆಚ್ಚಿಕೊಳ್ಳಬೇಕು

10 ಗ್ರಾಂ ಕೊತ್ತಂಬರಿ ಸೊಪ್ಪನ್ನು ಹೆಚ್ಚಿಕೊಂಡಿದ್ದು

5 ಗ್ರಾಂ ಸೋಂಪು ಕಾಳು

10 ಗ್ರಾಂ ಕೊತ್ತಂಬರಿ ಕಾಳಿನ ಪುಡಿ

10 ಗ್ರಾಂ ಒಣ ಮಾವಿನ ಪುಡಿ

5 ಗ್ರಾಂ ಜೀರಿಗೆ ಪುಡಿ

2 ಗ್ರಾಂ ಕೆಂಪು ಮೆಣಸಿನ ಪುಡಿ

2 ಗ್ರಾಂ ಇಂಗು

ರುಚಿಗೆ ತಕ್ಕಷ್ಟು ಉಪ್ಪು

30 ಗ್ರಾಂ ಚೀಸ್

ಒಂದು ಬೌಲ್  ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ  ನೀರನ್ನು ಹಾಕಿ 1 ಟೇಬಲ್ ಚಮಚ ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ  ಉಪ್ಪು ಹಾಕಿ ಕಲಸಿಕೊಳ್ಳಿ.

 ಮಾಡುವ ವಿಧಾನ

ಮೆಣಸನ್ನು ಚನ್ನಾಗಿ ತೊಳೆದು ಒರೆಸಿಕೊಳ್ಳಿ ಮೆಣಸಿನ ಒಂದು ಭಾಗವನ್ನು ಕತ್ತರಿಸಿಕೊಂಡು ಬೀಜವನ್ನು ತೆಗೆಯಿರಿ. ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸ್ ಮಾಡಿ. ಮಿಕ್ಸ್ ಮಾಡಿದ ಮಿಶ್ರಣವನ್ನು  ಅದರಲ್ಲಿ ತುಂಬಿ . ನಂತರ ಅದನ್ನು ಕಲಸಿದ ಕಡಲೆಹಿಟ್ಟಿನಲ್ಲಿ ಅದ್ದಿ ಸುತ್ತಲೂ ಕೋಟ್ ಆಗುವಂತೆ ನೋಡಿಕೊಳ್ಳಿ. ನಂತರ ಮಧ್ಯಮ ಬಿಸಿ ಆದ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ.

Kishor KV

Leave a Reply

Your email address will not be published. Required fields are marked *