ಶುಭ ಶುಕ್ರವಾರ ಲಕ್ಷ್ಮಿಗೆ ಯಾವೆಲ್ಲಾ ಹೂವುಗಳನ್ನು ಅರ್ಪಿಸಬೇಕು ಗೊತ್ತಾ?

ಶುಕ್ರವಾರವು ಲಕ್ಷ್ಮಿ ದೇವಿಯ ದಿನ. ಈ ದಿನ ಮಹಿಳೆಯರಿಗೆ ತುಂಬಾನೇ ವಿಶೇಷ. ಯಾಕೆಂದರೆ ಅವರಿಗೆ ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದೇ ಒಂದು ಸಂತೋಷ. ಲಕ್ಷ್ಮಿ ದೇವಿಯು ಕೆಲವೊಂದು ಹೂವುಗಳನ್ನು ತುಂಬಾನೇ ಇಷ್ಟಪಡುತ್ತಾಳೆ. ಅಂತಹ ಹೂವುಗಳನ್ನು ನಾವು ಆಕೆಯ ಪೂಜೆಯಲ್ಲಿ ಅರ್ಪಿಸಿ ಪೂಜೆಯನ್ನು ಮಾಡುವುದರಿಂದ ಶೀಘ್ರದಲ್ಲೇ ಅಕೆಯ ಆಶೀರ್ವಾದವನ್ನು ಪಡೆಯಬಹುದು. ಸಂಪತ್ತು, ಸಮೃದ್ಧಿಯನ್ನು ಹೊಂದುವುದಕ್ಕಾಗಿ ನಾವು ಶುಕ್ರವಾರದ ದಿನ ಲಕ್ಷ್ಮಿಗೆ ಈ ಹೂವುಗಳನ್ನು ಅರ್ಪಿಸಬೇಕು.
ಮಲ್ಲಿಗೆ ಹೂವುಗಳು ವಿಶೇಷವಾದ ಸುವಾಸನೆಯನ್ನು ಹೊಂದಿರುವುದರಿಂದ ಮತ್ತು ಅದು ಲಕ್ಷ್ಮಿ ದೇವಿಗೆ ಪ್ರಿಯವಾದ ಬಿಳಿ ಬಣ್ಣವನ್ನು ಹೊಂದಿರುವುದರಿಂದ ಆಕೆಯ ಪೂಜೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಶಾಸ್ತ್ರಗಳಲ್ಲಿ ಮಲ್ಲಿಗೆಯನ್ನು ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಒಂದೆಂದು ಹೇಳಲಾಗಿದೆ. ಈ ಮಲ್ಲಿಗೆ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸುವುದರಿಂದ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ. ಶುಕ್ರವಾರದ ದಿನದಂದು 7 ಮಲ್ಲಿಗೆ ಹೂವುಗಳನ್ನು ಅರ್ಪಿಸಿ, ಓಂ ಶ್ರೀ ಹ್ರೀಂ ಶ್ರೀ ಮಹಾಲಕ್ಷ್ಮ್ಯೈ ನಮಃ ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ನೀವು ಉದ್ಯೋಗ, ವ್ಯಾಪಾರ, ವ್ಯವಹಾರದಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ.
ಗುಲಾಬಿ ಹೂವು
ಗುಲಾಬಿ ಹೂವುಗಳು ಸೌಂದರ್ಯ, ಪ್ರೀತಿ ಮತ್ತು ಶಕ್ತಿಯ ಸಂಕೇತವಾಗಿರುತ್ತದೆ. ಲಕ್ಷ್ಮಿ ದೇವಿಗೆ ಪ್ರಿಯವಾದ ಈ ಹೂವನ್ನು ಆಕೆಗೆ ಅರ್ಪಿಸುವ ಮೂಲಕ ಭಕ್ತರು ಆಕೆಯ ವಿಶೇಷ ಆಶೀರ್ವಾದವನ್ನು ಪಡೆಯಬಹುದು. ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ಗುಲಾಬಿ ಹೂವುಗಳನ್ನು ಅರ್ಪಿಸುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಹಣಕಾಸಿನ ಲಾಭವಾಗುವುದು. ಶುಕ್ರವಾರದಂದು ಲಕ್ಷ್ಮಿ ದೇವಿಗೆ ಏಳು ಕೆಂಪು ಗುಲಾಬಿಗಳನ್ನು ಅರ್ಪಿಸಿ. ಹಾಗೆಯೇ ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಯೇ ಪ್ರಸಿದ್ಧ್ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮ್ಯೈ ನಮಃ ಈ ಮಂತ್ರವನ್ನು 108 ಬಾರಿ ಜಪಿಸಬೇಕು.
ಚೆಂಡು ಹೂವು
ಚೆಂಡು ಹೂವುಗಳಲ್ಲಿನ ಆಧ್ಯಾತ್ಮಿಕ ಶಕ್ತಿಯು ಲಕ್ಷ್ಮಿ ದೇವಿಯನ್ನು ಆಕರ್ಷಿಸುವಲ್ಲಿ ಸಹಕಾರಿಯಾಗಿರುತ್ತದೆ. ಚೆಂಡು ಹೂವಿನಿಂದ ಲಕ್ಷ್ಮಿ ಪೂಜೆ ಮಾಡುವುದರಿಂದ ಶಾಶ್ವತವಾದ ಸಂಪತ್ತು ಮತ್ತು ಸಮೃದ್ಧಿ ದೊರೆಯುತ್ತದೆ. ವ್ಯವಹಾರದಲ್ಲಿ ಲಾಭ ಮತ್ತು ಉದ್ಯೋಗದಲ್ಲಿ ಬಡ್ತಿ ಕೂಡ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿನ ಬಡತನವನ್ನು ದೂರ ಮಾಡುತ್ತಾಳೆ. ಮಾನಸಿಕ ಶಾಂತಿ ಮತ್ತು ಕೌಟುಂಬಿಕ ಸಾಮರಸ್ಯದೊಂದಿಗೆ ಸಂತೋಷದ ವರವನ್ನು ಕರುಣಿಸುತ್ತಾಳೆ ಎನ್ನುವ ನಂಬಿಕೆಯಿದೆ.

ನೋಡಿರಿ

