ಹರಿದ, ಕೊಳಕು ಶೂ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಹರಿದ, ಕೊಳಕು ಶೂ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಇತ್ತೀಚಿನ ದಿನಗಳಲ್ಲಿ ಹರಿದ ಶೂ, ಹರಿದ ಬಟ್ಟೆಗಳು ಫ್ಯಾಷನ್ ಆಗಿದೆ. ಬಹುತೇಕರು ಇಂತಹ ಫ್ಯಾಷನ್ ಅನ್ನು ಇಷ್ಟಪಟ್ಟಿದ್ದಾರೆ. ಇನ್ನು ಕೆಲವರು ಇಂತಹ ಸ್ಟೈಲಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಅದರಂತೆಯೇ ಐಷಾರಾಮಿ ಫ್ಯಾಷನ್ ಬ್ರಾಂಡ್ ಆಗಿರುವ ಬಾಲೆನ್ಸಿಯಾಗ ವಿಚಿತ್ರ ಶೂ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.

ಬಾಲೆನ್ಸಿಯಾಗ ಶೂ ವೊಂದನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಇದು ನೋಡಲು ಹರಿದ ಹಾಗೂ ತುಂಬಾ ಹಳೆಯದಾಗಿರುವಂತೆ ಕಾಣುತ್ತಿದೆ. ಅಚ್ಚರಿಯ ವಿಚಾರವೆಂದರೆ, ಈ ಶೂವಿನ ಬೆಲೆಯನ್ನು ಜನರು ಕಂಡು, ಇದನ್ನು ಖರೀದಿ ಮಾಡುವ ಹಣದಲ್ಲಿ ದ್ವಿಚಕ್ರ ವಾಹನ ಖರೀದಿಸಬಹುದು ಎಂದಿದ್ದಾರೆ. ಅಲ್ಲದೇ ಈ ಹೊಸ ಸೂಪರ್-ಡಿಸ್ಟ್ರೆಸ್ಡ್ ಶೂಗಳನ್ನು ಜನರು ನೋಡಿದ ನಂತರ, ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಹಗಲು ರಾತ್ರಿ ಎನ್ನದೇ ನೂರಾರು ಕುರಿಗಳು ಪ್ರದಕ್ಷಿಣೆ ಹಾಕುತ್ತಿವೆ ಕುರಿಗಳು- ವಿಡಿಯೋ ವೈರಲ್

ಬಾಲೆನ್ಸಿಯಾಗ ಶೂಗಳನ್ನು ‘ಪ್ಯಾರಿಸ್ ಸ್ನೀಕರ್’ ಸಂಗ್ರಹ ಎಂದು ಕರೆಯಲಾಗುತ್ತದೆ. ಸಂಪೂರ್ಣ ಹರಿದಿರುವ ನೂರು ಜೋಡಿ ಶೂಗಳನ್ನು ಮಾತ್ರ ಕಂಪನಿ ಮಾರುಕಟ್ಟೆಗೆ ತಂದಿದೆ ಎಂದು ಹೇಳಲಾಗುತ್ತಿದ್ದು, ಈ ಹರಿದ ಬಾಲೆನ್ಸಿಯಾಗ ಶೂಗಳ ಬೆಲೆ 1,43,000 ಆಗಿದೆ. ಹರಿದ ಬೂಟುಗಳನ್ನು ಖರೀದಿಸಲು ಪ್ರಪಂಚದಾದ್ಯಂತ ಮುಂಗಡ-ಬುಕ್ ಮಾಡುವ ಅವಕಾಶ ನೀಡಲಾಗಿದೆ.

ಈ ಹರಿದಿರುವ ಶೂಗಳು ಶತಮಾನದ ಮಧ್ಯಭಾಗದ ಅಥ್ಲೆಟಿಸಮ್ ಅನ್ನು ಹೋಲುವ ಶ್ರೇಷ್ಠ ವಿನ್ಯಾಸವನ್ನು ಹೊಂದಿದೆ. ಈ ಬೂಟುಗಳು ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳಲ್ಲಿದ್ದು, ಬಿಳಿ ರಬ್ಬರ್ ಬ್ಯಾಂಡ್​ಗಳೊಂದಿಗೆ ಮತ್ತು ಟೋ ಭಾಗಗಳು ಗೋಚರಿಸುತ್ತವೆ.
ಬಾಲೆನ್ಸಿಯಾಗ ಅಧಿಕೃತ ಸೈಟ್​ನಲ್ಲಿನ ವಿವರಣೆಯ ಪ್ರಕಾರ, ಸ್ನೀಕರ್ಗಳನ್ನು ಸಂಪೂರ್ಣವಾಗಿ ಕೊಳೆತ ಹತ್ತಿ ಮತ್ತು ರಬ್ಬರ್​ನಿಂದ ತಯಾರಿಸಲಾಗುತ್ತದೆ. ಬಾಲೆನ್ಸಿಯಾಗದ ಈ ಸ್ನೀಕರ್​ಗಳು ತಮ್ಮ ವೆಬ್​ಸೈಟ್ ಮೂಲಕ ವಿಶ್ವಾದ್ಯಂತ ಲಭ್ಯವಿರುತ್ತವೆ. ಇದು ಈಗಾಗಲೇ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಲಭ್ಯವಿದೆ.

suddiyaana