ಕೇಂದ್ರ ಸರ್ಕಾರದಿಂದ ಸಿಗುತ್ತೆ ಉಚಿತ ಹೊಲಿಗೆ ಯಂತ್ರ! – ಮಹಿಳೆಯರು, ಪುರುಷರಿಗೂ ಅವಕಾಶ.. ಅರ್ಜಿ ಸಲ್ಲಿಕೆ ಹೇಗೆ?

ಕೇಂದ್ರ ಸರ್ಕಾರದಿಂದ ಸಿಗುತ್ತೆ ಉಚಿತ ಹೊಲಿಗೆ ಯಂತ್ರ! – ಮಹಿಳೆಯರು, ಪುರುಷರಿಗೂ ಅವಕಾಶ.. ಅರ್ಜಿ ಸಲ್ಲಿಕೆ ಹೇಗೆ?

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಪೋಸ್ಟ್ ಗಳು ಕೆಲವೊಮ್ಮೆ ಅನುಮಾನ ಮೂಡಿಸುತ್ತವೆ. ನಿಜನೋ, ಸುಳ್ಳೋ ಎಂಬ ಗೊಂದಲ ಉಂಟು ಮಾಡುತ್ತವೆ. ಇದೀಗ ಅಂಥದ್ದೇ ಒಂದು ಪೋಸ್ಟ್ ವೈರಲ್ ಆಗ್ತಿದೆ. ಅದುವೇ ಕೇಂದ್ರ ಸರ್ಕಾರ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ನೀಡುತ್ತಿದೆ ಅನ್ನೋದು. ಆದ್ರೆ ಈ ಪೋಸ್ಟ್ ಸುಳ್ಳಲ್ಲ ಸತ್ಯ.

ಇದನ್ನೂ ಓದಿ: ಸಖತ್‌ ಸೌಂಡ್‌ ಮಾಡುತ್ತಿದೆ ʼArticle 370ʼ ಟ್ರೇಲರ್‌! – ಸಿನಿಮಾದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಪಾತ್ರ?

ಕೇಂದ್ರ ಸರ್ಕಾರ ಉಚಿತ ಹೊಲಿಗೆ ಯಂತ್ರ ಯೋಜನೆಯಡಿ ಫ್ರೀಯಾಗಿ ಟೈಲರಿಂಗ್ ಮಷಿನ್ ನೀಡ್ತಿದೆ. ಈ ಸ್ಕೀಮ್​ನ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಾರಿಗೊಳಿಸುತ್ತಿದೆ. ಇದರ ಅಡಿಯಲ್ಲಿ ಹೊಲಿಗೆ ಯಂತ್ರ ಖರೀದಿಸಲು ಕೇಂದ್ರವು 15 ಸಾವಿರ ರೂಪಾಯಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನೀವು ಹೊಲಿಗೆ ಯಂತ್ರವನ್ನ ಖರೀದಿಸಿ ಹೊಲಿಗೆ ಕೆಲಸ ಮಾಡಿ ಸಂಪಾದನೆ ಮಾಡಬಹುದು. ಜೊತೆಗೆ ಕೇಂದ್ರವೂ ಇದಕ್ಕಾಗಿ 20 ಸಾವಿರದವರೆಗೆ ಸಾಲವನ್ನೂ ನೀಡುತ್ತಿದೆ. ಈ ಹಣದಲ್ಲಿ ನೀವು ಹೊಲಿಗೆ ಯಂತ್ರದ ಅಂಗಡಿಯನ್ನು ಪ್ರಾರಂಭಿಸಬಹುದು.

ಈ ಯೋಜನೆಗೆ ಮಹಿಳೆಯರು ಮಾತ್ರವಲ್ಲದೆ ಪುರುಷರು ಸಹ ಅರ್ಜಿ ಸಲ್ಲಿಸಬಹುದು. ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು. ಈಗಾಗಲೇ ಟೈಲರಿಂಗ್ ಮಾಡುತ್ತಿರುವವರಾಗಿರಬೇಕು. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಟೈಲರ್ ಆಗಿ ಕೆಲಸ ಮಾಡುವ ಯಾರಾದರೂ ಈ ಯೋಜನೆಯ ಲಾಭ ಪಡೆಯಬಹುದು.

ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಎಲ್ಲಾ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು. ಅಂದ್ರೆ ಆಧಾರ್ ಕಾರ್ಡ್, ಅಡ್ರೆಸ್ ಪ್ರೂಫ್, ಐಡಿ ಕಾರ್ಡ್, ಜಾತಿ ಪ್ರಮಾಣಪತ್ರ, ಪಾಸ್​​ಪೋರ್ಟ್ ಗಾತ್ರದ ಭಾವಚಿತ್ರ, ಮೊಬೈಲ್ ನಂಬರ್, ಬ್ಯಾಂಕ್ ಪಾಸ್ ಪುಸ್ತಕವನ್ನು ಹೊಂದಿರಬೇಕು. ಅರ್ಜಿ ಸಲ್ಲಿಕೆ ಮಾಡೋದು ಹೇಗೆ ಅನ್ನೋದನ್ನ ನೋಡೋದಾದ್ರೆ ಮೊದಲು ಕೇಂದ್ರದ ಅಧಿಕೃತ ವೆಬ್‌ಸೈಟ್ ಆಗಿರುವ https://pmvishwakarma.gov.in ಗೆ ಹೋಗಿ ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ಅಪ್ಲೈ ಮಾಡಲು ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರದ CSC ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಬಳಿಕ ರೆಸಿಪ್ಟ್ ಪಡೆದುಕೊಳ್ಳಬೇಕು. ನಿಮ್ಮ ದಾಖಲೆಗಳೆಲ್ಲವೂ ಕರೆಕ್ಟ್ ಆಗಿದ್ರೆ ಏಪ್ರಿಲ್ ತಿಂಗಳಲ್ಲಿ ನೀವು ಹೊಲಿಗೆ ಯಂತ್ರವನ್ನು ಖರೀದಿಸಲು ನಿಮ್ಮ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತಗೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ರೆ ಮತ್ತಷ್ಟು ಜನರ ಜೊತೆ ಶೇರ್ ಮಾಡಿ. ಅವರಿಗೂ ಅನುಕೂಲ ಆಗಬಹುದು.

Shwetha M