ಐಟಿಬಿಟಿ ಕಂಪನಿಗಳ ಟೆಕ್ಕಿಗಳಿಗೆ ಗುಡ್‌ನ್ಯೂಸ್!‌ – ನಮ್ಮ ಮೆಟ್ರೋದಲ್ಲಿ ಆಫೀಸ್‌ಗೆ ಬಂದ್ರೆ ಫ್ರೀ ಪಾಸ್!‌

ಐಟಿಬಿಟಿ ಕಂಪನಿಗಳ ಟೆಕ್ಕಿಗಳಿಗೆ ಗುಡ್‌ನ್ಯೂಸ್!‌ – ನಮ್ಮ ಮೆಟ್ರೋದಲ್ಲಿ ಆಫೀಸ್‌ಗೆ ಬಂದ್ರೆ ಫ್ರೀ ಪಾಸ್!‌

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆಯಿಂದ ಜನ ಬೇಸತ್ತು ಹೋಗಿದ್ದಾರೆ. ರಸ್ತೆ ಮಧ್ಯೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಆದ್ರೆ ಮೆಟ್ರೋದಲ್ಲಿ ಹೋದ್ರೆ ಕಡಿಮೆ ಅವಧಿಯಲ್ಲಿ ಸಂಚಾರ ಮಾಡಬಹುದಾಗಿದೆ. ಇದೀಗ ಟ್ರಾಫಿಕ್​ಗೆ ಕಡಿವಾಣ ಹಾಕಲು ಸಂಸ್ಥೆಯೊಂದು ಐಟಿಬಿಟಿ ಕಂಪನಿಗಳ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್ ನೀಡಲು ಮುಂದಾಗಿದೆ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಕಿಚ್ಚಿಗೆ ಟ್ರ್ಯಾಕ್ಟರ್‌ಗಳು ​ಸುಟ್ಟು ಭಸ್ಮ! – ಮೂರು ತಾಲೂಕಿನಲ್ಲಿ 2 ದಿನ ನಿಷೇಧಾಜ್ಞೆ ಜಾರಿ

ಬೆಂಗಳೂರಿನಲ್ಲಿ ಆಫೀಸ್‌ಗೆ ಹೋಗಲು ಅನೇಕರು ತಮ್ಮ ಸ್ವಂತ ವಾಹನದಲ್ಲೇ ಪ್ರಯಾಣಿಸುತ್ತಾರೆ. ಇನ್ನು ಇದ್ರಿಂದಾಗಿ ಮತ್ತಷ್ಟು ಟ್ರಾಫಿಕ್‌ ಜಾಮ್‌ ಆಗಲಿದೆ. ಬಸ್ಸಿನಲ್ಲಿ ಸಂಚಾರ ಮಾಡಿದ್ರೂ ಎರಡ್ಮೂರು ಗಂಟೆ ಸಮಯ ತೆಗೆದುಕೊಳ್ಳಲಿದೆ. ಐಟಿಬಿಟಿ ಕಂಪನಿಗಳ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್ ನೀಡಲು ಸಂಸ್ಥೆಯೊಂದು ಮುಂದಾಗಿದೆ. ಆರ್.ವಿ ರೋಡ್ ನಿಂದ ಬೊಮ್ಮಸಂದ್ರ ಮಾರ್ಗದಲ್ಲಿರುವ (ಯೆಲ್ಲೋ ಲೈನ್) ಐಟಿಬಿಟಿ ಕಂಪನಿಗಳಿಗೆ ಕೆಲಸಕ್ಕೆ ಬರುವ ಟೆಕ್ಕಿಗಳಿಗೆ ಸಂಚಾರ ಮಾಡಲು ಮೆಟ್ರೋ ಪಾಸ್ ನೀಡಲು ಸಂಸ್ಥೆಯೊಂದು ನಿರ್ಧರಿಸಿದೆ.

ಪ್ರಾಯೋಗಿಕವಾಗಿ  ಈಗಾಗಲೆ ಕೆಲ ಕಂಪನಿಗಳ 250 ಉದ್ಯೋಗಿಗಳಿಗೆ ಸಿಎಸ್ಆರ್ ಫಂಡ್‌ನಿಂದ ಆರ್ಬಿಟ್ ವಾಲೆಟ್ ರೂಪೇ ಕಾರ್ಡ್ ಮೂಲಕ 1500 ರುಪಾಯಿಯ ಪಾಸ್ ನೀಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಪ್ರತಿದಿನ ಸುಮಾರು 2.5 ಲಕ್ಷ ಟೆಕ್ಕಿಗಳು ಕೆಲಸಕ್ಕಾಗಿ ಸಂಚಾರ ಮಾಡುತ್ತಿದ್ದು, ಇದರಿಂದ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಗೆ ದೊಡ್ಡಮಟ್ಟದಲ್ಲಿ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ನೂರಾರು ಐಟಿ ಬಿಟಿ ಕಂಪನಿಗಳಿದ್ದು, ಈ ಕಂಪನಿಗಳಲ್ಲಿ ಕೆಲಸ ಮಾಡಲು ಪ್ರತಿದಿನ ಲಕ್ಷಾಂತರ ನೌಕರರು ಸ್ವಂತ ಕಾರು, ಬೈಕ್, ಕಂಪನಿ ಕ್ಯಾಬ್​ಗಳಲ್ಲಿ ಬರುವುದರಿಂದ ಸಿಲ್ಕ್ ಬೋರ್ಡ್ ಭಾಗದಲ್ಲಿ ವಿಪರೀತವಾಗಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್​ನಲ್ಲಿ ನಿಲ್ಲುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಂಸ್ಥೆಯು  ನೌಕರರಿಗೆ ಪ್ರತಿ ತಿಂಗಳು 1500 ರೂಪಾಯಿ ಮುಖ ಬೆಲೆಯ ಪಾಸ್ ನೀಡಲು ಚಿಂತಿಸಿದೆ. ಮುಂದಿನ ದಿನಗಳಲ್ಲಿ ಆ ಭಾಗದ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೆಟ್ರೋ ಪಾಸ್ ನೀಡಲಿದ್ದು, ಇದರಿಂದ ಟೆಕ್ಕಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರಲಿದ್ದಾರೆ. ಇದರ ಜೊತೆಗೆ ಟ್ರಾಫಿಕ್ ಸಮಸ್ಯೆಯೂ ಕಡಿಮೆ ಆಗಲಿದೆ ಎಂದು ಐಟಿ ಬಿಟಿ ಅಸೋಸಿಯೇಷನ್ ವಕ್ತಾರ ಮಯೂರ್ ಹೇಳಿದ್ದಾರೆ.

Shwetha M