ಈ ದಿನ ಮಹಿಳೆಯರಿಗೆ ಸಂಪೂರ್ಣ ಉಚಿತ -ಏನಿದು ಲೇಡೀಸ್ ಸ್ಪೆಷಲ್ ಆಫರ್?

ಈ ದಿನ ಮಹಿಳೆಯರಿಗೆ ಸಂಪೂರ್ಣ ಉಚಿತ -ಏನಿದು ಲೇಡೀಸ್ ಸ್ಪೆಷಲ್ ಆಫರ್?

ಮಹಿಳೆಯರಿಗೊಂದು ಗುಡ್ ನ್ಯೂಸ್ ಇದೆ.. ಈ ದಿನದಂದು ಕೆಲ‌ ಜಾಗಗಳಿಗೆ ಹೋದ್ರೆ ನಿಮ್ಗೆ ಫುಲ್ ಫ್ರೀ ಸೌಲಭ್ಯ ಸಿಗುತ್ತಿದೆ.. ಅಷ್ಟಕ್ಕೂ ಯಾವ ಜಾಗಗಳಲ್ಲಿ ಉಚಿತ ಆಫರ್ ಇದೆ?. ಅಂದು ಏನ್ ಸ್ಪೆಷಲ್.. ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ..

ಮಾರ್ಚ್ 8  ಅಂದ್ರೆ ಮಹಿಳೆಯರ ದಿನ..  ಆ ದಿನದಂದು  ಮಹಿಳೆಯರಿಗೆ ಕೆಲ ಟೂರಿಸ್ಟ್ ಪ್ಲೇಸ್ ಗಳಲ್ಲಿ ಫ್ರೀ ಎಂಟ್ರಿ ಘೋಷಿಸಲಾಗಿದೆ.. ಅಂದು ಮಹಿಳಾ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಹಿಳೆಯರಿಗೆ ವಿಶೇಷ ಆಫರ್ ಗಳ‌ನ್ನು ಬೇರೆ ನೀಡಲಾಗುತ್ತಿದೆ. ಅದರಲ್ಲೂ ಭಾರತದ‌ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮಹಿಳೆಯರಿಗೆ ಫ್ರೀ ಎಂಟ್ರಿ ಘೋಷಿಸಲಾಗಿದೆ.  ನೀವೂ ಎಲ್ಲಿಗಾದರೂ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಮಹಿಳಾ ದಿನದಂದು ಇಲ್ಲಿಗೆ ಹೋಗಿ.

ಇದನ್ನೂ ಓದಿ: ಮೋಸದ ಜಾಲಕ್ಕೆ ಸಿಲುಕಿ ರಷ್ಯಾ ಸೇನೆ ಸೇರಿದ್ದ ಹಲವು ಭಾರತೀಯರ ಬಿಡುಗಡೆ

2019ರಲ್ಲಿ ಸಂಸ್ಕೃತಿ ಸಚಿವಾಲಯವು ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ವಿಶೇಷ ಉಡುಗೊರೆ ನೀಡಲು ಶುರು‌ಮಾಡಿತ್ತು. ಮಹಿಳಾ ದಿನಾಚರಣೆಯಂದು ಭಾರತೀಯ ಮಹಿಳಾ ಪ್ರವಾಸಿಗರಿಗೆ ಮಾತ್ರವಲ್ಲದೆ, ವಿದೇಶಿ ಮಹಿಳಾ ಪ್ರವಾಸಿಗರಿಗೆ ದೇಶದ ಹೆಸರಾಂತ ಸ್ಮಾರಕಗಳಿಗೆ ಭೇಟಿ ಕೊಡಲು ಉಚಿತ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಅಂದಿನಿಂದ, ಪ್ರತಿ ವರ್ಷ ಮಹಿಳೆಯರು ಯಾವುದೇ ಶುಲ್ಕವಿಲ್ಲದೆ ಭಾರತದ ಯಾವುದೇ ಸ್ಮಾರಕಕ್ಕೆ ಮಾರ್ಚ್ 8 ರಂದು ಭೇಟಿ ನೀಡಬಹುದು.

ಮಾರ್ಚ್ 8 ರಂದು ತಾಜ್ ಮಹಲ್ ನೋಡಲು ಹೋದರೆ 200 ರೂ. ಖರ್ಚು ಮಾಡುವ ಅಗತ್ಯವಿಲ್ಲ. ತಾಜ್ ಮಹಲ್ ಪ್ರವೇಶಕ್ಕೆ ಪ್ರತಿಯೊಬ್ಬ ವ್ಯಕ್ತಿಗೆ 50 ರೂ. ಟಿಕೆಟ್‌ ಇದೆ. ಇನ್ನು ತಾಜ್ ಮಹಲ್‌ನ ಒಳಗಿರುವ ಮುಖ್ಯ ಸಮಾಧಿ  ನೋಡಬೇಕಾದರೆ, ಇದಕ್ಕಾಗಿ ಪ್ರತ್ಯೇಕ200 ರೂಪಾಯಿ ಕೊಡಬೇಕು. ಆದರೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಇದನ್ನು ವೀಕ್ಷಿಸಲು ಮಹಿಳೆಯರು ಶುಲ್ಕ ಪಾವತಿಸಬೇಕಾಗಿಲ್ಲ.

ದೆಹಲಿಯ ಐತಿಹಾಸಿಕ ಕೆಂಪು ಕೋಟೆ ವೀಕ್ಷಣೆಗೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ವ್ಯಕ್ತಿಗೆ 60 ರೂ.ನಿಗದಿಪಡಿಸಲಾಗಿದೆ. ಶನಿವಾರ ಮತ್ತು ಭಾನುವಾರವಾದರೆ 80 ರೂ ಕಲೆಕ್ಟ್ ಮಾಡ್ತಾರೆ. ಆದರೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆಯರಿಂದ ಪ್ರವೇಶ ಶುಲ್ಕ ಪಡೆಯುವುದಿಲ್ಲ.

ಇದೇ ರೀತಿಯಲ್ಲಿ ಕುತುಬ್‌ ಮಿನಾರ್‌ ನೋಡಲು ಪ್ರತಿ ವ್ಯಕ್ತಿಗೆ 35 ರಿಂದ 40 ರೂ ಹಣ ನಿಗದಿಯಾಗಿದೆ. ಅಲ್ಲದೇ ವಿದೇಶಿಗರಿಂದ 500 ರೂ ಪಡೀತಾರೆ. ಆದರೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಕುತುಬ್‌ ಮಿನಾರ್‌ಗೆ ಎಲ್ಲಾ ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ಹೀಗೆ ಮಹಿಳೆಯರನ್ನು ಪ್ರವಾಸೀ ತಾಣಗಳತ್ತ ಆಕರ್ಷಿಸಲು ಕೇಂದ್ರ ಸರ್ಕಾರೀ ವಿನೂತನ ಪ್ರಯೋಗ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ‌ ಇದು ಹೆಚ್ಚೆಚ್ಚು ಜನಪ್ರಿಯತೆ‌ ಪಡೆಯುತ್ತಿದೆ.

Shwetha M