ಫ್ರೀ ಬಸ್‌ ಟಿಕೆಟ್‌ ಎಫೆಕ್ಟ್‌ – ಓಲಾ, ಉಬರ್‌ ಬುಕ್ಕಿಂಗ್‌ನಲ್ಲಿ ಶೇ.30 ರಷ್ಟು ಇಳಿಕೆ!

ಫ್ರೀ ಬಸ್‌ ಟಿಕೆಟ್‌ ಎಫೆಕ್ಟ್‌ – ಓಲಾ, ಉಬರ್‌ ಬುಕ್ಕಿಂಗ್‌ನಲ್ಲಿ ಶೇ.30 ರಷ್ಟು ಇಳಿಕೆ!

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಭಾನುವಾರ ಶಕ್ತಿ ಯೋಜನೆ ಜಾರಿಗೊಳಿಸಿದೆ. ಮಹಿಳೆಯರು ಖುಷಿಯಿಂದ ಸರ್ಕಾರಿ ಬಸ್‌ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಕೆಲವೆಡೆ ಜನರಿಂದ ವಿರೋಧವೂ ವ್ಯಕ್ತವಾಗುತ್ತಿದೆ. ಈ ನಡುವೆ ಶಕ್ತಿ ಯೋಜನೆಯ ಎಫೆಕ್ಟ್‌ ಓಲಾ, ಉಬರ್‌ ತಟ್ಟಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. – ನಗರದಲ್ಲಿ ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು ವಾಯುಮಾಲಿನ್ಯ!

ಶಕ್ತಿ ಯೋಜನೆ ಆರಂಭವಾದಾಗಿಂದ ಬೆಂಗಳೂರಿನ ಮಹಿಳೆಯರು ಹೆಚ್ಚಾಗಿ ಉಚಿತ ಬಸ್‌ ಪ್ರಯಾಣ ಮಾಡುತ್ತಿದ್ದಾರೆ. ಆಸ್ಪತ್ರೆ, ಆಫೀಸ್, ಶಾಪಿಂಗ್, ಹೀಗೆ ವಿವಿಧ ಕೆಲಸಗಳಿಗೆ ನಗರದಲ್ಲಿ ಬಿಎಂಟಿಸಿಯನ್ನೇ ಹೆಚ್ಚು ಅವಲಂಬಿಸಿಕೊಂಡಿದ್ದಾರೆ. ಹೀಗಾಗಿ ಓಲಾ, ಉಬರ್‌ ಬುಕ್ಕಿಂಗ್‌ನಲ್ಲಿ ಶೇ.30 ರಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿದೆ.

ಶಕ್ತಿ ಯೋಜನೆ ಜಾರಿಯಾದ ಎರಡು ದಿನಗಳಿಂದ, ಓಲಾ-ಉಬರ್ ಚಾಲಕರಿಗೆ ಬುಕ್ಕಿಂಗ್‌ನಲ್ಲಿ ಭಾರಿ ವಿಳಂಬವಾಗ್ತಿದೆ. ಗಂಟೆಗೆ ಒಂದೋ ಎರಡೋ ಬುಕ್ಕಿಂಗ್ ಬರುತ್ತಿದೆ. ಹೀಗಾಗಿ ಓಲಾ- ಉಬರ್, ಟ್ಯಾಕ್ಸಿ ಚಾಲಕರು ಆತಂಕದಲ್ಲಿದ್ದಾರೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಜೀವನ ಮಾಡುವುದು ಕಷ್ಟವಾಗುತ್ತದೆ. ಕನಿಷ್ಟ ಪಕ್ಷ ಸರ್ಕಾರ ನಮ್ಮ ವಾಹನಗಳ ಮೇಲಿರುವ ಪರ್ಮಿಟ್ ಟ್ಯಾಕ್ಸ್ ಆದ್ರೂ ಕಡಿಮೆ ಮಾಡಲಿ ಅಂತಾ ಒತ್ತಾಯಿಸಿದ್ದಾರೆ.

ಕೇವಲ ಟ್ಯಾಕ್ಸಿಗಳಿಗೆ ಮಾತ್ರವಲ್ಲ, ಆಟೋಗಳಿಗೂ ಬಾಡಿಗೆ ಸಿಗ್ತಿಲ್ಲ. ಬಡವರ್ಗ, ಮಧ್ಯಮ ವರ್ಗದವ್ರೆಲ್ಲಾ, ಬಿಎಂಟಿಸಿಯತ್ತ ಮುಖ ಮಾಡಿದ್ರೆ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡೋರು, ಉನ್ನತ ಹುದ್ದೆಯಲ್ಲಿರುವವರು, ಹಣ ಇದ್ದವ್ರು ಮಾತ್ರ ಓಲಾ-ಊಬರ್‌ನಲ್ಲಿ ಪ್ರಯಾಣ ಮಾಡ್ತಿದ್ದಾರೆ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ.

suddiyaana