ಆಧಾರ್ ಅಪ್​ಡೇಟ್ ಮಾಡಲು ಗಡುವು ಮತ್ತೆ ವಿಸ್ತರಣೆ – ಜೂನ್ 14ಕ್ಕೆ ಕೊನೆ ದಿನ

ಆಧಾರ್ ಅಪ್​ಡೇಟ್ ಮಾಡಲು ಗಡುವು ಮತ್ತೆ ವಿಸ್ತರಣೆ – ಜೂನ್ 14ಕ್ಕೆ ಕೊನೆ ದಿನ

ಯಾವುದೇ ಪ್ರಮುಖ ಸರ್ಕಾರಿ ಕೆಲಸಗಳು, ಬ್ಯಾಂಕ್‌ ಕೆಲಸಗಳಿಗೆ ಆಧಾರ್‌ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ರೈಲು ಟಿಕೆಟ್ ಖರೀದಿಸಲು ಅಥವಾ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಆಧಾರ್ ಕಾರ್ಡ್ ಅನ್ನು 10 ವರ್ಷಗಳಿಂದ ನವೀಕರಿಸದಿದ್ದರೆ, ಆದಷ್ಟು ಬೇಗ ನವೀಕರಿಸಲು UIDAI ಹೇಳಿತ್ತು. ಮಾರ್ಚ್ 14ಕ್ಕೆ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಬೇಕು ಅಂತಾ ಹೇಳಿತ್ತು. ಇದೀಗ ಈ ಡೆಡ್‌ಲೈನ್‌ ಅನ್ನು ಮತ್ತೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಸೆಲಾ ಸುರಂಗ ಮಾರ್ಗದ ಮೇಲೂ ಚೀನಾ ಕಣ್ಣು! – ನಮ್ಮ ಜಾಗದಲ್ಲಿ ಕಟ್ಟಿದ್ದು ಎಂದು ಕಿರಿಕ್ ಮಾಡಿದ ಡ್ರ್ಯಾಗನ್‌ ರಾಷ್ಟ್ರ!

ಹೌದು,  ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡುವ ಗಡುವು ಮುಗಿಯುತ್ತಾ ಬರುತ್ತಿದ್ದಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದೀಗ ಮತ್ತೆ ವಿಸ್ತರಿಸಿದೆ. ಈಗ ಆಧಾರ್‌ ಕಾರ್ಡ್‌ ಅನ್ನು ಉಚಿತವಾಗಿ ಅಪ್‌ಡೇಟ್‌  ಗಡುವನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಅಂದರೆ ಜೂನ್ 14ರವರೆಗೂ ನೀವು ಆನ್​ಲೈನ್​ನಲ್ಲಿ ಆಧಾರ್ ಅನ್ನು ಅಪ್​ಡೇಟ್ ಮಾಡಬಹುದಾಗಿದೆ.

ಆಧಾರ್ ಯಾಕೆ ಅಪ್ಡೇಟ್ ಮಾಡಬೇಕು?

ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ ಅನ್ನು ಅಪ್​ಡೇಟ್ ಮಾಡದೇ ಇದ್ದವರು ಅದನ್ನು ಅಪ್​ಡೇಟ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಬಹಳಷ್ಟು ಜನರು ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಅದನ್ನು ಅಪ್​ಡೇಟ್ ಮಾಡಿಲ್ಲ. ನಿಮ್ಮ ಪ್ರೊಫೈಲ್​ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ ಕೂಡ ಅದನ್ನು ನಮೂದಿಸಿ ಅಪ್​ಡೇಟ್ ಮಾಡಬಹುದು.

ವಯಸ್ಸಾದಂತೆ ಬೆರಳು ಸವೆದು ಬೆರಳಚ್ಚು ಗುರುತು ಮಾಸಬಹುದು. ಮೊದಲಿನಂತೆ ಬೆರಳಚ್ಚು ಸರಿಯಾಗಿ ಮೂಡದೇ ಇರಬಹುದು. ಹೀಗಾಗಿ, ಆಧಾರ್​ನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್​ಡೇಟ್ ಮಾಡುವುದು ಅವಶ್ಯಕ ಎಂದು ಹೇಳಲಾಗುತ್ತದೆ.

ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡುವ ಕ್ರಮಗಳು

  • ಯುಐಡಿಎಐನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ: uidai.gov.in/
  • ಈ ವೆಬ್​ಸೈಟ್​ನಿಂದ ಮೈ ಆಧಾರ್ ಪೋರ್ಟಲ್​ಗೆ ಹೋಗಿ.
  • ಇಲ್ಲಿ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಿರಿ.
  • ಅದರಲ್ಲಿ ನಿಮ್ಮ ಪ್ರೊಫೈಲ್​ಗೆ ಹೋಗಿ ಮಾಹಿತಿ ವೀಕ್ಷಿಸಬಹುದು.
  • ಎಲ್ಲವೂ ಸರಿ ಇದ್ದರೆ ಒಪ್ಪಿಗೆ ನೀಡಬಹುದು.

ಒಂದು ವೇಳೆ ವಿಳಾಸ ಮತ್ತಿತರ ಮಾಹಿತಿ ಬದಲಿಸಬೇಕೆಂದಿದ್ದರೆ ಅದನ್ನು ಮಾಡಬಹುದು. ಅದರ ದಾಖಲೆಗಳ ಸ್ಕ್ಯಾನ್ಡ್ ಕಾಪಿ ನಿಮ್ಮ ಬಳಿ ಇರಬೇಕು. ವಿಳಾಸ ಮಾಹಿತಿ ಬದಲಾಯಿಸಬೇಕಿದ್ದರೆ ಹೊಸ ವಿಳಾಸದ ಸಾಕ್ಷ್ಯ ಇರುವ ದಾಖಲೆ ಇರಬೇಕು. ಹೆಸರು ಬದಲಾಯಿಸಲಾಗಿದ್ದರೆ, ಅದಕ್ಕೆ ಪೂರಕ ದಾಖಲೆ ಇರಬೇಕು.

Shwetha M