ಭಾರತೀಯ ಪ್ರವಾಸಿಗರು ಇನ್ನುಮುಂದೆ ಫ್ರಾನ್ಸ್‌ನಲ್ಲೂ ಯುಪಿಐ ಬಳಸಬಹುದು!

ಭಾರತೀಯ ಪ್ರವಾಸಿಗರು ಇನ್ನುಮುಂದೆ ಫ್ರಾನ್ಸ್‌ನಲ್ಲೂ ಯುಪಿಐ ಬಳಸಬಹುದು!

ಪ್ಯಾರಿಸ್​: ಭಾರತೀಯರು ಮುಂದಿನ ದಿನಗಳಲ್ಲಿ ಫಾನ್ಸ್‌ಗೆ ಹೋದಾಗ ಅಲ್ಲಿನ ಕರೆನ್ಸಿ ಬಳಸಬೇಕಿಲ್ಲ. ಇನ್ನು ಮುಂದೆ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ಬಿಲ್‌ ಪಾವತಿ ಮಾಡಬಹುದು. ಭಾರತದ   ಆನ್​ಲೈನ್​ ಪಾವತಿ ವ್ಯವಸ್ಥೆ ಯುಪಿಐ ಅನ್ನು ಮುಂದಿನ ದಿನಗಳಲ್ಲಿ ಫ್ರಾನ್ಸ್​ನಲ್ಲೂ ಬಳಸಬಹುದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸದ್ಯ ಪ್ರಧಾನಿ ಮೋದಿ ಎರಡು ದಿನಗಳ ಕಾಲ ಫ್ರಾನ್ಸ್​ ಪ್ರವಾಸದಲ್ಲಿ ಇದ್ದಾರೆ. ಈ ವೇಳೆ ನರೇಂದ್ರ ಮೋದಿ ಪ್ಯಾರಿಸ್​ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಫ್ರಾನ್ಸ್​ನಲ್ಲಿ ಯುಪಿಐ ಬಳಸಲು ಭಾರತ ಮತ್ತು ಫ್ರಾನ್ಸ್​ ಒಪ್ಪಿಕೊಂಡಿವೆ. ಮುಂದಿನ ದಿನಗಳಲ್ಲಿ ಇದು ಜಾರಿಗೆ ಬರಲಿದೆ. ಇದು ಐಫೆಲ್​ ಟವರ್​ನಿಂದಲೇ ಆರಂಭವಾಗಲಿದೆ. ಅದರರ್ಥ ಭಾರತೀಯ ಪ್ರವಾಸಿಗರು ಭಾರತದ ರೂಪಾಯಿಯನ್ನೇ ಮುಂದಿನ ದಿಗಳಲ್ಲಿ ಫ್ರಾನ್ಸ್​ನಲ್ಲಿ ಪಾವತಿ ಮಾಡಬಹುದು ಹೇಳಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌ ಶುರು – ಸಾಫ್ಟ್‌ ಲ್ಯಾಂಡಿಗ್‌ ಇಸ್ರೋ ಗುರಿ

ಫ್ರಾನ್ಸ್​ನಲ್ಲಿ ಯುಪಿಐ ಜಾರಿಯಾದರೆ, ಭಾರತೀಯರ ಖರ್ಚಿನ ಹಾದಿಯು ದೊಡ್ಡ ಮಟ್ಟದಲ್ಲಿ ತೆರೆದುಕೊಳ್ಳುವ ಸಾಧ್ಯತೆ ಇದೆ. ಯುಪಿಐ, ವಿದೇಶಿ ವಿನಿಮಯ ಕಾರ್ಡುಗಳ ಅನಿವಾರ್ಯತೆಯನ್ನು ತೊಡೆದುಹಾಕುತ್ತದೆ ಮತ್ತು ಖರ್ಚು ಮಾಡಲು ಹಣವನ್ನು ಸಾಗಿಸುವ ಅಗತ್ಯವನ್ನು ತಪ್ಪಿಸುತ್ತದೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಪ್ರಧಾನಿ ಮೋದಿಯವರು ತಮ್ಮ ಫ್ರಾನ್ಸ್ ಪ್ರವಾಸವನ್ನು ಅಲ್ಲಿನ ಪ್ರಧಾನಿ ಎಲಿಜಬೆತ್ ಬೋರ್ನ್ ಮತ್ತು ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಅವರೊಂದಿಗೆ ಫಲಪ್ರದಾಯಕ ಸಭೆಗಳೊಂದಿಗೆ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಭಾರತದ ಬಹುಮುಖಿ ಸಹಕಾರ ಮತ್ತು ಸಮಯ-ಪರೀಕ್ಷಿತ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಉತ್ತೇಜನ ನೀಡುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ.

2022ರಲ್ಲೇ NPCI ಫ್ರಾನ್ಸ್‌ನ ವೇಗದ ಮತ್ತು ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆ ಲೈರಾ ಜತೆ ಒಪ್ಪಂದಕ್ಕೆ ಸಹಿ ಹಾಕಿತು. ಈ ವರ್ಷ ಭಾರತದ UPI ಮತ್ತು ಸಿಂಗಾಪುರದ PayNow ಒಪ್ಪಂದಕ್ಕೆ ಸಹಿ ಹಾಕಿವೆ. ಎರಡೂ ದೇಶಗಳ ಬಳಕೆದಾರರಿಗೆ ಗಡಿಯಾಚೆಗಿನ ವಹಿವಾಟುಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಯುಎಇ, ಭೂತಾನ್ ಮತ್ತು ನೇಪಾಳ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. NPCI ಇಂಟರ್ನ್ಯಾಷನಲ್, ಅಮೆರಿಕ ಹಾಗೂ ಇತರ ಯುರೋಪಿಯನ್ ರಾಷ್ಟ್ರಗಳು ಮತ್ತು ಪಶ್ಚಿಮ ಏಷ್ಯಾದಲ್ಲಿ UPI ಸೇವೆಗಳನ್ನು ವಿಸ್ತರಿಸಲು ಮಾತುಕತೆ ನಡೆಸುತ್ತಿದೆ.

ಅಂದಹಾಗೆ ಭಾರತದ UPI ವ್ಯವಸ್ಥೆ ತುಂಬಾ ಸರಳ ಮತ್ತು ಸುರಕ್ಷಿತವಾಗಿದೆ. ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್​ನಲ್ಲಿ ನಿರ್ವಹಹಿಸುವ ಅಧಿಕಾರವನ್ನು ನೀಡುತ್ತದೆ. ಹಲವಾರು ಬ್ಯಾಂಕಿಂಗ್ ವೈಶಿಷ್ಟ್ಯಗಳು ಯುಪಿಐನಲ್ಲಿ ವಿಲೀನಗೊಂಡಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI) 2016ರ ಏಪ್ರಿಲ್ 21ರಂದು ತನ್ನ ಸದಸ್ಯ ಬ್ಯಾಂಕ್‌ಗಳೊಂದಿಗೆ ಪ್ರಾಯೋಗಿಕವಾಗಿ ಯುಪಿಐ ಅನ್ನು ಜಾರಿಗೆ ತಂದಿತು. ಅಂದಿನಿಂದ UPI ಬಳಕೆಯು ಅದ್ಭುತ ಬೆಳವಣಿಗೆಯನ್ನು ಕಂಡಿದೆ.

suddiyaana