ಚಂದ್ರಯಾನ – 3 ಯೋಜನೆಗೆ ಮತ್ತೊಂದು ಹಂತದಲ್ಲಿ ಯಶಸ್ಸು – ನೌಕೆಯ ಕಕ್ಷೆ ಎತ್ತರಿಸುವ 4ನೇ ಹಂತದ ಪ್ರಕ್ರಿಯೆ ಪೂರ್ಣ

ಚಂದ್ರಯಾನ – 3 ಯೋಜನೆಗೆ ಮತ್ತೊಂದು ಹಂತದಲ್ಲಿ ಯಶಸ್ಸು – ನೌಕೆಯ ಕಕ್ಷೆ ಎತ್ತರಿಸುವ 4ನೇ ಹಂತದ ಪ್ರಕ್ರಿಯೆ ಪೂರ್ಣ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೈಲುಗಲ್ಲು ಸಾಧಿಸಲು ಮುಂದಾಗಿರುವ ಚಂದ್ರಯಾನ-3 ಯೋಜನೆಗೆ ಗುರುವಾರ ಮತ್ತೊಂದು ಹಂತ ಯಶಸ್ಸು ಲಭಿಸಲಿದೆ. ಮೂರನೇ ಕಕ್ಷೆಯನ್ನು ಸಮರ್ಪಕವಾಗಿ ದಾಟಿಸಿದ್ದ ಇಸ್ರೋ ಗುರುವಾರ ಮತ್ತೊಂದು ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಬಿದ್ದೇ ಬಿಡ್ತಾ ಚಂದ್ರಯಾನ-3 ತುಣುಕು..?

ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ 4ನೇ ಹಂತದ ಪ್ರಕ್ರಿಯೆಯನ್ನು ಗುರುವಾರ ಯಶಸ್ವಿಯಾಗಿ ಪೂರ್ಣ ಗೊಳಿಸಲಾಗಿದೆ. ಮುಂದಿನ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಜುಲೈ 25 ರಂದು ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಯೋಜಿಸಲಾಗಿದೆ. ಚಂದ್ರಯಾನ-3 ಅನ್ನು ಚಂದ್ರನ ಹತ್ತಿರ ಒಂದು ಹೆಜ್ಜೆ ಮುಂದಿಡುವ ಮೂಲಕ ಭಾರತವು 2023 ರ ಅಂತಾರಾಷ್ಟ್ರೀಯ ಚಂದ್ರ ದಿನವನ್ನು ಆಚರಿಸುತ್ತದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಚಂದ್ರಯಾನ-3 ನೌಕೆ ಜು.14 ರಂದು ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಚಂದ್ರಯಾನ-3 ನೌಕೆ ನಭಕ್ಕೆ ಯಶಸ್ವಿಯಾಗಿ ಹಾರಿದೆ. ಚಂದ್ರಯಾನ-3 ನೌಕೆ GSLV-MK3 ರಾಕೆಟ್ ಹೊತ್ತೊಯ್ದಿದೆ. ಚಂದ್ರಯಾನ-3 ನೌಕೆ ಲ್ಯಾಂಡರ್​, ರೋವರ್ ಒಳಗೊಂಡಿದೆ. ಚಂದ್ರನ ನೆಲದಲ್ಲಿ ಅಧ್ಯಯನ ನಡೆಸಲು ಇಸ್ರೋ ಕಳಿಸಿರುವ 3ನೇ ನೌಕೆ ಇದಾಗಿದೆ. ನೌಕೆ ಆಗಸ್ಟ್​ 23 ಅಥವಾ 24ರಂದು ಚಂದ್ರನ ಅಂಗಳಕ್ಕೆ ತಲುಪಲಿದೆ.

suddiyaana