KL.. ಗಿಲ್.. ಶ್ರೇಯಸ್.. ಪಂತ್ ಔಟ್ – ನಾಲ್ವರ ಟಿ-20 ಕೆರಿಯರ್ ಅಂತ್ಯ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಜನವರಿ 22 ರಿಂದ ಆರಂಭವಾಗಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಕೂಡ ಅನೌನ್ಸ್ ಆಗಿದೆ. ಅಲ್ದೇ ಈ ಸಿರೀಸ್ಗೆ ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಧೃವ್ ಜುರೇಲ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಗ್ರೇಟೆಸ್ಟ್ ಥಿಂಗ್ ಅಂದ್ರೆ 2 ವರ್ಷಗಳ ಬಳಿಕ ಮೊಹಮ್ಮದ್ ಶಮಿ ಟಿ-20 ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇಷ್ಟೆಲ್ಲಾ ಅಚ್ಚರಿಗಳ ನಡುವೆ ಕೆಲ ಆಟಗಾರರ ಟಿ-20 ಕ್ರಿಕೆಟ್ ಭವಿಷ್ಯವೂ ಮುಗಿದಂತೆ ಕಾಣ್ತಿದೆ. ಈ ಲಿಸ್ಟ್ನಲ್ಲಿ ನಾಲ್ವರ ಹೆಸರು ಮುಂಚೂಣಿಯಲ್ಲಿದೆ.
ಇದನ್ನೂ ಓದಿ : ರಾಹುಲ್ Vs ಪಂತ್ Vs ಸಂಜು – ಚಾಂಪಿಯನ್ಸ್ ಟ್ರೋಫಿಗೆ ಯಾರು ಬೆಸ್ಟ್ ವಿಕೆಟ್ ಕೀಪರ್?
ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಶುಭ್ಮನ್ ಗಿಲ್ ವರ್ಸಸ್ ಯಶಸ್ವಿ ಜೈಸ್ವಾಲ್ ಅಂತಾ ಇಟ್ರೆ ಫಸ್ಟ್ ಚಾಯ್ಸ್ ಜೈಸ್ವಾಲ್ ಇದ್ದಾರೆ. ಹೀಗಾಗಿ ಶುಭ್ಮನ್ ಗಿಲ್ ಟಿ20 ಭವಿಷ್ಯವೂ ಅಡಕತ್ತರಿಯಲ್ಲಿ ಸಿಲುಕಿರೋದ್ರಲ್ಲಿ ಡೌಟೇ ಇಲ್ಲ. ಇದರ ಜೊತೆಗೆ ಸಂಜು ಸ್ಯಾಮ್ಸನ್ ಫಾರ್ಮ್ ಗಿಲ್ ಪಾಲಿಗೆ ಕಂಟಕವಾಗಿದೆ. ನಿಜ ಹೇಳ್ಬೇಕಂದ್ರೆ ಸಂಜು ಮತ್ತು ಜೈಸ್ವಾಲ್ಗೆ ಕಂಪೇರ್ ಮಾಡಿದ್ರೆ ಗಿಲ್ ಟಿ20ಯಲ್ಲಿ ಹೇಳಿಕೊಳ್ಳುವ ಆಟವಾಡಿಲ್ಲ. ಹೀಗಾಗಿ ಟಿ20 ತಂಡದಲ್ಲಿ ಪರ್ಮನೆಂಟ್ ರೆಸ್ಟ್ ಪಡೆಯೋ ಸಾಧ್ಯತೆ ಹೆಚ್ಚಿದೆ.
ಇನ್ನು ಕನ್ನಡಿಗ ಕೆ.ಎಲ್.ರಾಹುಲ್, ಪಾಲಿಗೆ ಟಿ20 ಕ್ರಿಕೆಟ್ ಮುಗಿದ ಆಧ್ಯಾಯವೇ ಬಿಡಿ. ಓಪನರ್, ಮಿಡಲ್ ಆರ್ಡರ್.. ವಿಕೆಟ್ ಕೀಪರ್ ಇದ್ಯಾವ ಸ್ಲಾಟ್ನಲ್ಲೂ ಕೆ.ಎಲ್.ರಾಹುಲ್ ಮತ್ತೆ ಟಿ20ಗೆ ಮುಖ ಮಾಡೋ ಲಕ್ಷಣಗಳೇ ಇಲ್ಲ. ಯಾಕಂದ್ರೆ, ಪ್ರತಿ ಸ್ಲಾಟ್ನಲ್ಲೂ ಯುವ ಆಟಗಾರರ ಪೈಪೋಟಿ ಇದೆ. ಮತ್ತೊಂದೆಡೆ 32 ವರ್ಷದ ಕೆ.ಎಲ್.ರಾಹುಲ್ ಟಿ-20 ಫಾರ್ಮೆಟ್ ಶೈಲಿ ಹೊಡಿಬಡಿ ಆಟಗಾರನೂ ಅಲ್ಲ. ಇದೇ ಕಾರಣಕ್ಕೆ ಐಪಿಎಲ್ನಲ್ಲಿ ಮಿಂಚು ಹರಿಸಿ ಕಮ್ಬ್ಯಾಕ್ ಶಪಥ ಮಾಡಿದ್ರು ಅದು ಸಾಧ್ಯವಾಗಿಲ್ಲ. ಸೋ ಇನ್ನೇನಿದ್ರೂ ಏಕದಿನ ಮತ್ತು ಟೆಸ್ಟ್ ನಲ್ಲಿ ಮಾತ್ರವೇ ಚಾನ್ಸ್ ಪಡೆಯಬಹುದು.
ಇನ್ನು ಶ್ರೇಯಸ್ ಅಯ್ಯರ್ ಕಥೆಯೂ ಹೀಗೇ ಇದೆ. ಶ್ರೇಯಸ್ ಅಯ್ಯರ್ ದೇಶಿ ಕ್ರಿಕೆಟ್ನಲ್ಲಿ ಅಬ್ಬರಿಸ್ತಿದ್ದಾರೆ. ಬಟ್ ಟೀಂಇಂಡಿಯಾದಲ್ಲಿ ಅವ್ರ ಫೇವರಿಟ್ ಸ್ಲಾಟ್-4ರಲ್ಲಿ ತಿಲಕ್ ವರ್ಮ, ನಾಯಕ ಸೂರ್ಯಕುಮಾರ್ ಯಾದವ್ ಚೇರ್ ಅನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ 30 ವರ್ಷದ ಶ್ರೇಯಸ್ ಅಯ್ಯರ್ಗೆ, ಟಿ20 ಫಾರ್ಮೆಟ್ನ ಬಾಗಿಲು ಬಂದ್ ಆದಂತೆಯೇ ಲೆಕ್ಕ. ಅಲ್ದೇ ಇತ್ತೀಚೆಗೆ ಶ್ರೇಯಸ್ಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗೋದೇ ಹೆಚ್ಚು ಎನ್ನುವಂತಾಗಿದೆ.
ರಿಷಭ್ ಪಂತ್. ಸದ್ಯ ಟೀಂ ಇಂಡಿಯಾದಲ್ಲಿ ಇರೋ ಆಟಗಾರರ ಪೈಕಿ ಬೆಟರ್ ಪರ್ಫಾಮೆನ್ಸ್ ಕೊಡ್ತಿರೋ ಪ್ಲೇಯರ್. ಅಲ್ದೇ ಪಂತ್ರನ್ನ ಬಿಸಿಸಿಐ ಫ್ಯೂಚರ್ ಕ್ಯಾಪ್ಟನ್ ಅಂತಾನೇ ಬಿಂಬಿಸುತ್ತಾ ಇದೆ. ಇದೇ ಕಾರಣಕ್ಕೆ ಟಿ-20 ಕ್ರಿಕೆಟ್ನಿಂದ ಬ್ರೇಕ್ ಕೊಟ್ಟು ಮುಂದಿನ ಪಂದ್ಯಗಳಿಗೆ ಪ್ರಿಸರ್ವ್ ಮಾಡ್ತಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪಂತ್ ಟಿ-20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರ. ಇತ್ತೀಚೆಗೆ ಆಸ್ಟ್ರೇಲಿಯಾ ಸರಣಿಯಲ್ಲೂ ಕೂಡ ಟೆಸ್ಟ್ ಪಂದ್ಯದಲ್ಲೇ ಹೊಡಿಬಡಿ ಆಟವಾಡಿದ್ರು. ಸೋ ಟಿ-20 ಕ್ರಿಕೆಟ್ನಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಒಂದೆರಡು ಪಂದ್ಯಗಳಲ್ಲಿ ಫೇಲ್ ಆದ್ರೆ ರಿಷಭ್ ಪಂತ್ರನ್ನೇ ಕ್ಯಾಪ್ಟನ್ ಮಾಡೋ ಸಾಧ್ಯತೆ ಇದೆ.