ನಾಲ್ಕು ಆಟಗಾರರು.. ಒಂದೇ ಫ್ರಾಂಚೈಸಿ – ಇವರನ್ನು ತಂಡ ಬಿಟ್ಟು ಕೊಟ್ಟಿಲ್ಲ ಯಾಕೆ ಅನ್ನೋದು ನಿಮಗೆ ಗೊತ್ತಾ?
ಐಪಿಎಲ್ನಲ್ಲಿ ಪ್ರತಿ ವರ್ಷ ಆಕ್ಷನ್ ವೇಳೆ ಫ್ರಾಂಚೈಸಿಗಳು ಕೆಲ ಆಟಗಾರರನ್ನ ರಿಟೇನ್ ಮಾಡುತ್ತವೆ. ಇನ್ನೂ ಕೆಲ ಪ್ಲೇಯರ್ಸ್ಗಳನ್ನ ರಿಲೀಸ್ ಮಾಡುತ್ತವೆ. ಆದ್ರೆ ಕೆಲವೇ ಕೆಲ ಆಟಗಾರರನ್ನ ಮಾತ್ರ ಫ್ರಾಂಚೈಸಿಗಳು ಇದುವರೆಗೂ ಒಮ್ಮೆಯೂ ಬಿಟ್ಟು ಕೊಟ್ಟಿಲ್ಲ. ಅಂದ್ರೆ ಟೀಮ್ಗೆ ಸೇರ್ಪಡೆಗೊಳಿಸಿದಾಗಿನಿಂದ ಒಂದೇ ಒಂದು ಬಾರಿ ರಿಲೀಸ್ ಮಾಡಿಲ್ಲ. ಆ ಪ್ಲೇಯರ್ಗಳೂ ಅಷ್ಟೇ, ತಮ್ಮ ಮೇಲೆ ನಂಬಿಕೆ ಇಟ್ಟ ಫ್ರಾಂಚೈಸಿಯನ್ನ ಬಿಟ್ಟು ಬೇರೆ ಟೀಮ್ನ್ನ ಸೇರಿಕೊಂಡಿಲ್ಲ. ಫ್ರಾಂಚೈಸಿಗಳು ಒಂದು ಬಾರಿ ರಿಲೀಸ್ ಮಾಡದ ಆಟಗಾರರು ಯಾರೆಲ್ಲಾ? ಯಾವ ಫ್ರಾಂಚೈಸಿಯಲ್ಲಿ ಯಾವ ಪ್ಲೇಯರ್ ಡೇ ಒನ್ ನಿಂದಲೂ ಇದ್ದಾರೆ ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಎರಡನೇ ಟಿ20 ಪಂದ್ಯ – ಸೌತ್ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾ
ಪ್ರತಿ ಐಪಿಎಲ್ ಸೀಸನ್ ವೇಳೆಯೂ ಎಲ್ಲಾ ಫ್ರಾಂಚೈಸಿಗಳಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಲಾಸ್ಟ್ ಸೀಸನ್ನಲ್ಲಿದ್ದ ಪ್ಲೇಯರ್ಸ್ಗಳು ಈ ಸೀಸನ್ಗಾಗುವಾಗ ಟೀಮ್ನಲ್ಲೇ ಇರೋದಿಲ್ಲ. ಕೆಲವರು ಐಪಿಎಲ್ನಲ್ಲೇ ಕಾಣಿಸೋದಿಲ್ಲ. ಇನ್ನೂ ಕೆಲವರು ಬೇರೆ ಫ್ರಾಂಚೈಸಿಯಲ್ಲಿ ಆಡ್ತಿರ್ತಾರೆ. ಆದ್ರೆ ಇಲ್ಲೊಂದಷ್ಟು ಆಟಗಾರರು ತಮ್ಮ ಫ್ರಾಂಚೈಸಿ ಬೇರೆಲ್ಲೂ ಹೋಗಿಲ್ಲ. ಆ ಫ್ರಾಂಚೈಸಿ ಕೂಡ ಅಂಥವರನ್ನ ಬಿಟ್ಟು ಕೊಟ್ಟಿಲ್ಲ.
ಜಸ್ಪ್ರಿತ್ ಬುಮ್ರಾ – ಮುಂಬೈ ಇಂಡಿಯನ್ಸ್!
2013ರಲ್ಲಿ ಟೀಂ ಇಂಡಿಯಾದ ಮಾಜಿ ಕೋಚ್ ಜಾನ್ ರೈಟ್ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ರು. ಆಗ ಜಸ್ಪ್ತ್ರಿತ್ ಬುಮ್ರಾರನ್ನ ಟೀಂಗೆ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದೇ ಜಾನ್ ರೈಟ್. ಬುಮ್ರಾ ಪೊಟೆನ್ಷಿಯಲ್ನ್ನ ಅಬ್ಸರ್ವ್ ಮಾಡಿದ್ದ ಜಾನ್ ರೈಟ್ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ಗೆ ಬುಮ್ರಾ ಬಗ್ಗೆ ತಿಳಿಸ್ತಾರೆ. ಹೀಗಾಗಿ ಬುಮ್ರಾರನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಸೇರಿಸಿಕೊಳ್ಳುತ್ತೆ. ಎಂಐ ಜಾಯಿನ್ ಆಗುತ್ತಲೇ ಬುಮ್ರಾ ಟೀಮ್ನ ಲೀಡ್ ಬೌಲರ್ ಆಗ್ತಾರೆ. ಮುಂಬೈ ಇಂಡಿಯನ್ಸ್ ಇದುವರೆಗೆ 5 ಬಾರಿ ಐಪಿಎಲ್ ಗೆದ್ದಿದೆ. ಈ ಪೈಕಿ ನಾಲ್ಕು ಬಾರಿ ಗೆದ್ದಾಗ ಜಸ್ಪ್ರಿತ್ ಬುಮ್ರಾ ಕೂಡ ಟೀಮ್ನಲ್ಲಿದ್ರು. ಪ್ರತಿ ಬಾರಿಯೂ ಬಿಡ್ಡಿಂಗ್ ವೇಳೆ ಮುಂಬೈ ಇಂಡಿಯನ್ಸ್ ಮಾತ್ರ ಯಾವುದೇ ಕಾರಣಕ್ಕೂ ಜಸ್ಪ್ರಿತ್ ಬುಮ್ರಾರನ್ನ ಬಿಟ್ಟು ಕೊಡ್ತಿಲ್ಲ. ಬುಮ್ರಾರನ್ನ ಬುಟ್ಟಿಗೆ ಹಾಕಿಕೊಳ್ಳೋಕೆ ಉಳಿದ ಫ್ರಾಂಚೈಸಿಗಳು ಕಾಯುತ್ತಲೇ ಇರುತ್ತವೆ. ಆದ್ರೆ ತಮ್ಮ ಪ್ರಮುಖ ಅಸ್ತ್ರವನ್ನ ಬಿಟ್ಟು ಕೊಡೋಕೆ ಅಂಬಾನಿಗಳು ರೆಡಿ ಇಲ್ಲ. ಇತ್ತ ಬುಮ್ರಾ ಕೂಡ ಎಷ್ಟೇ ಡಿಮ್ಯಾಂಡ್ ಬಂದ್ರೂ ಮುಂಬೈ ಇಂಡಿಯನ್ಸ್ ಬಿಟ್ಟು ಹೋಗ್ತಿಲ್ಲ. ಟೋಟಲಿ ಬುಮ್ರಾ ಮುಂಬೈ ಇಂಡಿಯನ್ಸ್ಗೆ ಫುಲ್ ಲಾಯಲ್ ಆಗಿದ್ದಾರೆ. ಇದೇ ಕಾರಣಕ್ಕೆ ಈಗ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯನ್ನ ಹಾರ್ದಿಕ್ ಪಾಂಡ್ಯ ಹೆಗಲಿಗೇರಿಸೋದಕ್ಕೆ ಬುಮ್ರಾ ಇಂಡೈರೆಕ್ಟ್ ಆಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ್ಯಕ್ಚುವಲಿ ಎಂಐ ಕ್ಯಾಪ್ಟನ್ ಆಗಬೇಕು ಅನ್ನೋ ಆಸೆ ಬುಮ್ರಾಗೆ ಕೂಡ ಇದೆ. ಆದ್ರೆ ಫ್ರಾಂಚೈಸಿಗೆ ತಾನಿಷ್ಟು ಲಾಯಲ್ ಆಗಿದ್ರು ಕೂಡ ಟೀಮ್ನ್ನ ಬಿಟ್ಟು ಹೋಗಿ ಈಗ ವಾಪಸ್ ಆಗ್ತಿರೋ ಪಾಂಡ್ಯಾಗೆ ಕ್ಯಾಪ್ಟನ್ಸಿ ನೀಡೋದು ಎಷ್ಟು ಸರಿ ಅನ್ನೋ ಭಾವನೆ ಜಸ್ಪ್ರಿತ್ ಬುಮ್ರಾಗೆ ಬಂದಿದೆ.
ರಿಷಬ್ ಪಂತ್ – ದೆಹಲಿ ಕ್ಯಾಪಿಟಲ್ಸ್!
ಟೀಂ ಇಂಡಿಯಾದ ಮತ್ತೊಬ್ಬ ಯಂಗ್ ಸ್ಟಾರ್ ರಿಷಬ್ ಪಂತ್ 2016ರಲ್ಲಿ ದೆಹಲಿ ಕ್ಯಾಪಿಟಲ್ಸ್ನ್ನ ಸೇರಿಕೊಳ್ತಾರೆ. ನಂತರ 2018 ಮತ್ತು 2022ರಲ್ಲಿ ಬಿಡ್ಡಿಂಗ್ ವೇಳೆ ಪಂತ್ಗೆ ಭಾರಿ ಡಿಮ್ಯಾಂಡ್ ಬರುತ್ತೆ. ಆದ್ರೆ ದೆಹಲಿ ಕ್ಯಾಪಿಟಲ್ಸ್ ಮಾತ್ರ ಯಾವುದೇ ಕಾರಣಕ್ಕೂ ರಿಷಬ್ ಪಂತ್ರನ್ನ ಬಿಟ್ಟುಕೊಡೋದಿಲ್ಲ. ಮತ್ತೆ ತಂಡಕ್ಕೆ ರಿಟೆನ್ಷನ್ ಮಾಡಿಕೊಳ್ಳುತ್ತೆ. ಅಷ್ಟೇ ಅಲ್ಲ, ರಿಷಬ್ ಪಂತ್ರನ್ನ ದೆಹಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಮಾಡಲಾಗುತ್ತೆ. ಈಗ ಪಂತ್ ಡಿಸಿಯ ಅತ್ಯಂತ ವ್ಯಾಲ್ಯುವೆಬಲ್ ಪ್ಲೇಯರ್. ಕಾರು ಆಕ್ಸಿಡೆಂಟ್ನಿಂದಾಗಿ 2023ರ ಐಪಿಎಲ್ ಟೂರ್ನಿಯಲ್ಲಿ ಪಂತ್ ಆಡೋದಿಲ್ಲ. ರಿಷಬ್ ಪಂತ್ ಇಲ್ಲದೆ ಆ ಟೂರ್ನಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತುಂಬಾನೆ ಹೊಡೆತ ತಿದ್ದಿತ್ತು. ಆದ್ರೆ, 2024ರ ಟೂರ್ನಿಯಲ್ಲಿ ಕಮ್ಬ್ಯಾಕ್ ಮಾಡೋಕೆ ಪಂತ್ ಫುಲ್ ಪ್ರಿಪೇರ್ ಆಗ್ತಿದ್ದಾರೆ.
ಬೆಂಗಳೂರಿನ ಎನ್ಸಿಎನಲ್ಲಿ ಫಿಟ್ನೆಸ್ ಮೇಲೆ ವರ್ಕೌಟ್ ಮಾಡ್ತಿದ್ದಾರೆ. ಪಂತ್ ಈಗ ಆಲ್ಮೋಸ್ಟ್ ಫಿಟ್ ಆಗಿದ್ದು, ಮುಂದಿನ ಐಪಿಎಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡೋ ಸಾಧ್ಯತೆ ಹೆಚ್ಚಾಗಿದೆ.
ವಿರಾಟ್ ಕೊಹ್ಲಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಐಪಿಎಲ್ ಆರಂಭವಾದಾಗಿನಿಂದಲೂ, ಅಂದ್ರೆ 2008ರಲ್ಲೇ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನ ಸೇರಿಕೊಂಡಿದ್ರು. ಅಲ್ಲಿಂದ ಇಲ್ಲಿವರೆಗೂ ಕೊಹ್ಲಿ ಆರ್ಸಿಬಿ ಬಿಟ್ಟು ಮೂವ್ ಆಗಿಲ್ಲ. ಅತ್ತ ಆರ್ಸಿಬಿ ಕೂಡ ರನ್ ಮಷೀನ್ನನ್ನ ಬಿಟ್ಟು ಕೊಟ್ಟಿಲ್ಲ. 2018ರ ಬಳಿಕ ಆರ್ಸಿಬಿ ಜಾಯಿನ್ ಆದಾಗಿನಿಂದ ಇದುವರೆಗೂ ಒಂದೇ ಒಂದು ಬಾರಿ ವಿರಾಟ್ ಕೊಹ್ಲಿ ಆರ್ಸಿಬಿ ಆಕ್ಷನ್ಗೆ ಎಂಟ್ರಿಯಾಗಿಲ್ಲ. ಕೊಹ್ಲಿಯ ಹೆಸರು ಆಕ್ಷನ್ನಲ್ಲಿ ಕೇಳಿ ಬಂದೇ ಇಲ್ಲ. ಕೆಲ ಫ್ರಾಂಚೈಸಿಗಳು ವಿರಾಟ್ ಕೊಹ್ಲಿ ಕಾಂಟ್ಯಾಕ್ಟ್ ಮಾಡಿವೆಯಾದ್ರೂ, ಕಿಂಗ್ ಮಾತ್ರ ಯಾವುದೇ ಕಾರಣಕ್ಕೂ ಆರ್ಸಿಬಿ ಬಿಡಲ್ಲ ಅಂತಾ ಕ್ಲೀಯರ್ ಆಗಿ ಹೇಳಿದ್ದಾರೆ. ಐಪಿಎಲ್ನಲ್ಲಿ ಅಡೋವರೆಗೂ ಆರ್ಸಿಬಿ ಪರವೇ ಆಡಬೇಕು ಅನ್ನೋ ಡಿಸೀಶನ್ಗೆ ಕೊಹ್ಲಿ ಬಂದಾಗಿದೆ. ಆರ್ಸಿಬಿ ಪಾಲಿಗೆ ಕೊಹ್ಲಿ ಕೇವಲ ಒಬ್ಬ ಕೀ ಪ್ಲೇಯರ್ ಅಷ್ಟೇ ಅಲ್ಲ, ಕೊಹ್ಲಿ ಅಂದ್ರೆ ಆರ್ಸಿಬಿಯ ಐಡೆಂಟಿಟಿ. ಕೊಹ್ಲಿ ಅಂದ್ರೆ ಆರ್ಸಿಬಿಯ ಬ್ರ್ಯಾಂಡ್ ಅಂಬಾಸಿಡರ್. ಹೀಗಾಗಿ ಐಪಿಎಲ್ನಲ್ಲಿ ಲಾಯಲ್ಟಿ ಪ್ರೂವ್ ಮಾಡಿದ ಮತ್ತೊಬ್ಬ ಪ್ಲೇಯರ್ ಮತ್ತು ಫ್ರಾಂಚೈಸಿ ಅಂದ್ರೆ ಅದು ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು.
ಎಂ.ಎಸ್. ಧೋನಿ – ಚೆನ್ನೈ ಸೂಪರ್ ಕಿಂಗ್ಸ್!
ಧೋನಿ ಮತ್ತು ಸಿಎಸ್ಕೆಯನ್ನ ಬೇರೆ ಮಾಡೋಕೆ ಸಾಧ್ಯವೇ ಇಲ್ಲ. ಡೇ 1ನಿಂದಲೂ ಅಂದ್ರೆ 2008ರಿಂದಲೇ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರವೇ ಆಡ್ತಾ ಇದ್ದಾರೆ. ಕಳೆದ 5 ವರ್ಷಗಳಿಂದಲೂ ಧೋನಿಯೇ ಸಿಎಸ್ಕೆ ಕ್ಯಾಪ್ಟನ್ ಆಗಿದ್ದಾರೆ. 2015ರಲ್ಲಿ ಬೆಟ್ಟಿಂಗ್ ಸ್ಕ್ಯಾಮ್ನಿಂದಾಗಿ ಸಿಎಸ್ಕೆ ಎರಡು ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಆಗಿತ್ತು. ಆಗ ಧೋನಿ ಪುಣೆ ಫ್ರಾಂಚೈಸಿ ಪರ ಆಡಿದ್ರು. ಬ್ಯಾನ್ ರಿವೋಕ್ ಆಗುತ್ತಲೇ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡಿದ್ರು. ಹೀಗಾಗಿ ಧೋನಿ ಯಾವತ್ತೂ ಸಿಎಸ್ಕೆಯನ್ನ ಬಿಟ್ಟು ಹೋಗಿಲ್ಲ. ಮುಂದೆಯೂ ಅಷ್ಟೇ, ಒಂದು ವೇಳೆ ಐಪಿಎಲ್ನಿಂದ ರಿಟೈರ್ ಆದ್ರೂ ಕೂಡ ಎಂಎಸ್ಡಿ ಚೆನ್ನೈ ಸೂಪರ್ ಕಿಂಗ್ಸ್ನಲ್ಲೇ ಒಂದಲ್ಲಾ ಒಂದು ರೋಲ್ನಲ್ಲಿ ಮುಂದುವರಿಯಲಿದ್ದಾರೆ. ಭವಿಷ್ಯದಲ್ಲಿ ಧೋನಿ ಸಿಎಸ್ಕೆಯ ಹೆಡ್ ಕೋಚ್ ಆದ್ರೂ ಆಶ್ಚರ್ಯ ಇಲ್ಲ.
ಇನ್ನು ಐಪಿಎಲ್ನಿಂದ ರಿಟೈರ್ ಆಗಿರೋರ ವಿಚಾರಕ್ಕೆ ಬರೋದಾದ್ರೆ, ಸಚಿನ್ ತೆಂಡೂಲ್ಕರ್ ಕೂಡ ಅಷ್ಟೇ ಮುಂಬೈ ಇಂಡಿಯನ್ಸ್ ಪರ ಮಾತ್ರ ಆಡಿದ್ರು. 2008ರಿಂದಲೂ ಸಚಿನ್ ಮುಂಬೈ ಇಂಡಿಯನ್ಸ್ನ ಐಕಾನಿಕ್ ಪ್ಲೇಯರ್ ಆಗಿದ್ರು. ಸಚಿನ್ರನ್ನ ತಮ್ಮ ಐಕಾನಿಕ್ ಪ್ಲೇಯರ್ ಅಂತಾ ಎಂಐ ರಿಕ್ರ್ಯೂಟ್ ಮಾಡಿತ್ತು. ಐಕಾನಿಕ್ ಪ್ಲೇಯರ್ ಅಂದ್ಮೇಲೆ ಮುಗೀತು. ಅಲ್ಲಿ, ಆಕ್ಷನ್ ಮಾಡೋ ಪ್ರಶ್ನೆಯೇ ಬರೋದಿಲ್ಲ. 2013ರವರೆಗೆ ಅಂದ್ರೆ ತಮ್ಮ ಕೊನೆಯ ಐಪಿಎಲ್ ಟೂರ್ನಿವರೆಗೂ ಸಚಿನ್ ಮುಂಬೈ ಇಂಡಿಯನ್ಸ್ ಪರವೇ ಆಡಿದ್ರು. ಒಂದು ಬಾರಿ ಟ್ರೋಫಿ ಕೂಡ ಗೆದ್ದಿದ್ರು. ಈಗಲೂ ಅಷ್ಟೇ, ಸಚಿನ್ ಮುಂಬೈ ಇಂಡಿಯನ್ಸ್ ಟೀಮ್ನ ಮೆಂಟರ್ ಆಗಿದ್ದಾರೆ. ಪ್ರತಿ ಬಾರಿಯೂ ಐಪಿಎಲ್ ಟೂರ್ನಿ ನಡೆಯೋ ವೇಳೆ ಸಚಿನ್ ಟೀಂ ಜೊತೆಗೆ ಇರ್ತಾರೆ.