ಮೋದಿಯಿಂದ ನೂತನ ಸಂಸತ್ ಭವನ ಉದ್ಘಾಟನೆಗೆ ವಿರೋಧ –  ರಾಷ್ಟ್ರಪತಿಯಿಂದ ಲೋಕಾರ್ಪಣೆಗೆ ವಿಪಕ್ಷಗಳ ಪಟ್ಟು
ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸೋದಾಗಿ ನಾಯಕರ ಆಕ್ರೋಶ

ಮೋದಿಯಿಂದ ನೂತನ ಸಂಸತ್ ಭವನ ಉದ್ಘಾಟನೆಗೆ ವಿರೋಧ –  ರಾಷ್ಟ್ರಪತಿಯಿಂದ ಲೋಕಾರ್ಪಣೆಗೆ ವಿಪಕ್ಷಗಳ ಪಟ್ಟುಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸೋದಾಗಿ ನಾಯಕರ ಆಕ್ರೋಶ

ರಾಷ್ಟ್ರ ರಾಜಧಾನಿಯಲ್ಲಿ ನೂತನ ಸಂಸತ್ ಭವನ ಈಗಾಗ್ಲೇ ನಿರ್ಮಾಣಗೊಂಡಿದೆ. ಇನ್ನೇನಿದ್ರೂ ಉದ್ಘಾಟನೆಯಷ್ಟೇ ಬಾಕಿ. ಇದೇ ಭಾನುವಾರ ಸುಸಜ್ಜಿತ ಸಂಸತ್ ಭವನ ಲೋಕಾರ್ಪಣೆಯಾಗಿದೆ. ಅದ್ರೆ ಅದಕ್ಕೂ ಮುನ್ನವೇ ಸಂಸತ್ ಉದ್ಘಾಟನೆ ವಿಚಾರದಲ್ಲಿ ಕಿತ್ತಾಟ ಶುರುವಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ಸಂಸತ್ತನ್ನ ಪ್ರಧಾನಿ ಮೋದಿ ಉದ್ಘಾಟಿಸುತ್ತಿದ್ದಾರೆ. ಆದ್ರೆ ಮೋದಿ ಉದ್ಘಾಟನೆ ಮಾಡ್ತಿರೋದಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಇದನ್ನೂ ಓದಿ : ಕೇದಾರನಾಥ ಧಾಮದ ಮೆರುಗು ಹೆಚ್ಚಿಸಲಿದೆ 60 ಕ್ವಿಂಟಾಲ್‌ ತೂಕದ ‘ಓಂ’ ಆಕೃತಿ!

ಸಂಸತ್ ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕೆ ಹೊರತು ಪ್ರಧಾನಿ ಅಲ್ಲ. ಒಂದು ವೇಳೆ ಮೋದಿಯೇ ಉದ್ಘಾಟನೆ ಮಾಡ್ತಾರೆ ಅಂದ್ರೆ ನಾವು ಕಾರ್ಯಕ್ರಮಕ್ಕೆ ಹಾಜರಾಗೋದಿಲ್ಲ ಅಂತಾ ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರು ಹೇಳಿದ್ದಾರೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇಲ್ಲಿ ಸಾಬೀತಾಗುತ್ತಿರೋದು ಏನಂದ್ರೆ, ದಲಿತ ಮತ್ತು ಬುಡಕಟ್ಟು ಜನಾಂಗದ ರಾಷ್ಟ್ರಪತಿಯನ್ನ ಆಯ್ಕೆ ಮಾಡಿರೋದು ಕೇವಲ ಚುನಾವಣೆಗೋಸ್ಕರ. ಆ ಸಮುದಾಯದ ಮತದಾರರನ್ನ ಮೆಚ್ಚಿಸೋಕಷ್ಟೇ ರಾಷ್ಟ್ರಪತಿಯಾಗಿ ನೇಮಕ ಮಾಡಿದ್ದಾರೆ. ಈ ಹಿಂದೆ ಸಂಸತ್ ಶಿಲನ್ಯಾಸ ಕಾರ್ಯಕ್ರಮಕ್ಕೂ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನ ಆಹ್ವಾನಿಸಿರಲಿಲ್ಲ ಅಂತಾ ಖರ್ಗೆ ಟೀಕಾ ಪ್ರಹಾರ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರ ಟೀಕೆಗಳಿಂದ ಬಿಜೆಪಿಗರು ಕೆಂಡವಾಗಿದ್ದಾರೆ. ನೂತನ ಸಂಸತ್ ಕಟ್ಟಡದ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದಾರೆ. ಪ್ರತಿ ಬಾರಿಯೂ ದೇಶ ಐತಿಹಾಸ ಘಟನೆಯೊಂದಕ್ಕೆ ಸಾಕ್ಷಿಯಾಗುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಣ್ಣ ಮಗುವಿನಂತೆ ಎದೆ ಹೊಡೆದುಕೊಂಡು ಅಳೋಕೆ ಶುರು ಮಾಡ್ತಾರೆ ಅಂತಾ ಬಿಜೆಪಿ ನಾಯಕ ಗೌರವ್ ಭಾಟಿಯಾ ವ್ಯಂಗ್ಯವಾಡಿದ್ದಾರೆ.

suddiyaana