ಫಿಫಾ ವಿಶ್ವಕಪ್‌ನಲ್ಲಿ 68 ವರ್ಷಗಳ ಬಳಿಕ ಇತಿಹಾಸ – ಒಂದೇ ದಿನ ನಾಲ್ಕು ಪಂದ್ಯ ಡ್ರಾ

ಫಿಫಾ ವಿಶ್ವಕಪ್‌ನಲ್ಲಿ 68 ವರ್ಷಗಳ ಬಳಿಕ ಇತಿಹಾಸ – ಒಂದೇ ದಿನ ನಾಲ್ಕು ಪಂದ್ಯ ಡ್ರಾ

ವಿಶ್ವದಲ್ಲಿ ಈಗ ಫಿಫಾ ವಿಶ್ವಕಪ್ ಜ್ವರ ಜೋರಾಗಿದ್ದು, ಫುಟ್ಬಾಲ್ ಫ್ಯಾನ್ಸ್‌ಗೆ ದಿನನಿತ್ಯ ರಸದೌತಣ ನೀಡ್ತಿದೆ. ಅದರಲ್ಲೂ ಇವತ್ತು ಐತಿಹಾಸಿಕ ಹಾಗೂ ಅಪರೂಪದ ದಾಖಲೆಗೆ ಫಿಫಾ ವಿಶ್ವಕಪ್ ಸಾಕ್ಷಿಯಾಗಿದೆ. ಸರಿಸುಮಾರು ಅರವತ್ತೆಂಟು ವರ್ಷಗಳ ಬಳಿಕ ಫಿಫಾ ವಿಶ್ವಕಪ್​ನಲ್ಲಿ ಇತಿಹಾಸ ನಿರ್ಮಾಣ ಆಗಿದೆ. ಅಂದ್ರೆ ಒಂದೇ ದಿನ ಎಲ್ಲಾ ಪಂದ್ಯಗಳು ಡ್ರಾ ಆಗಿದೆ.

1958ರ ಜೂನ್ 15 ರಂದು ವಿಶ್ವಕಪ್‌ನಲ್ಲಿ ಒಂದೇ ದಿನ 4 ಪಂದ್ಯಗಳು ಡ್ರಾ ಆಗಿದ್ದವು. ಆದರೆ, ಅಂದು ಒಟ್ಟು 8 ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ಜೂನ್ 15, 2026 ರಂದು ನಿಗದಿಯಾಗಿದ್ದ ಎಲ್ಲಾ 4 ಪಂದ್ಯಗಳೂ ಡ್ರಾ ಆಗುವ ಮೂಲಕ ಶೇ. 100 ರಷ್ಟು ಪಂದ್ಯಗಳು ಸಮಬಲಗೊಂಡ ವಿಶಿಷ್ಟ ದಾಖಲೆ ಸೃಷ್ಟಿಯಾಗಿದೆ.

ಇರಾನ್ Vs ನ್ಯೂಝಿಲೆಂಡ್ ( 2 -2)

ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳು ತಲಾ 2 ಗೋಲುಗಳನ್ನು ಹೊಡೆಯುವ ಮೂಲಕ ಪಂದ್ಯ ಹೈ-ಸ್ಕೋರಿಂಗ್ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿದ್ದಾರೆ.

ಬೆಲ್ಜಿಯಂ Vs ಈಜಿಪ್ಟ್ (1-1)

ಆರಂಭದಲ್ಲಿ ಈಜಿಪ್ಟ್ ತಂಡ ಮುನ್ನಡೆ ಸಾಧಿಸಿತ್ತಾದರೂ, ಬೆಲ್ಜಿಯಂನ ರೊಮೇಲು ಲುಕಾಕು ಮೈದಾನಕ್ಕೆ ಬಂದ ತಕ್ಷಣ ಎದುರಾಳಿ ತಂಡದ ಓನ್-ಗೋಲ್ ನೆರವಿನಿಂದ ಈ ಪಂದ್ಯವನ್ನು 1-1 ಅಂತರದಲ್ಲಿ ಡ್ರಾಗೊಳಿಸಿದೆ.

ಸೌದಿ ಅರೇಬಿಯಾ vs ಉರುಗ್ವೆ (1-1)

ತೀವ್ರ ಪೈಪೋಟಿಯಿಂದ ಕೂಡಿದ್ದ  ಸೌದಿ ಅರೇಬಿಯಾ vs ಉರುಗ್ವೆ  ಪಂದ್ಯದಲ್ಲಿ, ಉರುಗ್ವೆ ತಂಡದ ಮ್ಯಾಕ್ಸಿಮಿಲಿಯಾನೊ ಅರಾಜೊ 80ನೇ ನಿಮಿಷದಲ್ಲಿ ಗೋಲು ಬಾರಿಸಿ ಪಂದ್ಯವನ್ನು 1-1 ಅಂತರದಿಂದ ಸಮಬಲದಲ್ಲಿ ಕೊನೆಗೊಳಿಸಿದ್ದಾರೆ.

ಸ್ಪೇನ್ vs ಕೇಪ್ ವರ್ಡೆ (0-0)

ವಿಶ್ವಕಪ್‌ಗೆ ಹೊಸದಾಗಿ ಪದಾರ್ಪಣೆ ಮಾಡಿರುವ ಕೇಪ್ ವರ್ಡೆ ತಂಡವು, ಬಲಿಷ್ಠ ಸ್ಪೇನ್ ತಂಡಕ್ಕೆ ಒಂದೂ ಗೋಲು ಹೊಡೆಯಲು ಬಿಡದೆ ಪಂದ್ಯವನ್ನು 0-0 ಅಂತರದಿಂದ ಸಮಬಲಗೊಳಿಸಿತು.

 

Kishor KV

Leave a Reply

Your email address will not be published. Required fields are marked *