ನಾಲ್ವರು ಮಾನವರು ಮಂಗಳ ಗ್ರಹದಲ್ಲಿ ವಾಸಿಸಲು ಮಿಷನ್ ರೆಡಿ – ಹೇಗಿದೆ ಗೊತ್ತಾ ಸಿದ್ಧತೆ..?

ನಾಲ್ವರು ಮಾನವರು ಮಂಗಳ ಗ್ರಹದಲ್ಲಿ ವಾಸಿಸಲು ಮಿಷನ್ ರೆಡಿ – ಹೇಗಿದೆ ಗೊತ್ತಾ ಸಿದ್ಧತೆ..?

ಒಂದು ವರ್ಷದ ಮಿಷನ್ ಭಾಗವಾಗಿ ಈ ಬೇಸಿಗೆಯಲ್ಲಿ ನಾಲ್ವರು ಮಾನವರು ಮಂಗಳ ಗ್ರಹದಲ್ಲಿ ವಾಸಿಸಲಿದ್ದಾರೆ. ಆದರೆ ಅದು ನಡೆಯೋದು ಮಾತ್ರ ಭೂಮಿಯಲ್ಲಿ. ಮಂಗಳ ಗ್ರಹವನ್ನ ಅನ್ವೇಷಿಸಲು ಮಾನವರನ್ನ ಸಿದ್ಧ ಪಡಿಸೋದು ಈ ಮಿಷನ್ ಗುರಿಯಾಗಿದೆ. ಮಂಗಳ ಗ್ರಹವನ್ನು ಪುನರಾವರ್ತಿಸುವಂತಹ ಮಾದರಿಯನ್ನ ಸಿದ್ಧಪಡಿಸಿಕೊಂಡು ನಾಲ್ವರು ಅಲ್ಲಿ ವಾಸಿಸಲಿದ್ದಾರೆ.

ಭೂಮಿ ಮತ್ತು ಮಂಗಳ ಗ್ರಹದ ನಡುವಿನ ದೊಡ್ಡ ಅಂತರದಿಂದಾಗಿ ಮಂಗಳ ಗ್ರಹದ ಕಡೆಗಿನ ಪ್ರಯಾಣ ಅತ್ಯಂತ ಸವಾಲಿನ ಕೆಲಸ. ಹಾಗಿದ್ದರೂ ಒಂದು ದಿನ ಗುರಿ ಮುಟ್ಟುತ್ತೇವೆ ಎನ್ನುವ ವಿಶ್ವಾಸದಲ್ಲಿರುವ ವಿಜ್ಞಾನಿಗಳು ಈಗ ಮಂಗಳ ಗ್ರಹದಲ್ಲಿ ಯಾವ ರೀತಿ ವಾಸಿಸಬೇಕು ಮತ್ತು ಅಲ್ಲಿಯ ವಾತಾವರಣಕ್ಕೆ ಯಾವ ರೀತಿ ಹೊಂದಿಕೊಳ್ಳಬೇಕು ಎನ್ನುವ ಕುರಿತಾಗಿ ಸಿದ್ಧತೆ ನಡೆಸುತ್ತಾ ಇದ್ದಾರೆ.

ಇದನ್ನೂ ಓದಿ : ಮಂಗಳನ ಅಂಗಳದಲ್ಲಿ ಚಲಿಸುವ ಮೋಡಗಳು! – ಫೋಟೋ ಸೆರೆಹಿಡಿದ ನಾಸಾ

ಸಂಪೂರ್ಣ ಆವಾಸಸ್ಥಾನವು 3D-ಮುದ್ರಿತವಾಗಿದ್ದು ಖಾಸಗಿ ಸಿಬ್ಬಂದಿ ಕ್ವಾರ್ಟರ್ಸ್, ಅಡುಗೆಮನೆ ಮತ್ತು ವೈದ್ಯಕೀಯ, ಮನರಂಜನೆ, ಫಿಟ್ನೆಸ್, ಕೆಲಸ ಮತ್ತು ಬೆಳೆ ಬೆಳವಣಿಗೆಯ ಚಟುವಟಿಕೆಗಳಿಗೆ ಮೀಸಲಾದ ಪ್ರದೇಶಗಳು, ತಾಂತ್ರಿಕ ಕೆಲಸದ ಪ್ರದೇಶ ಮತ್ತು ಎರಡು ಸ್ನಾನಗೃಹಗಳನ್ನ ಒಳಗೊಂಡಿರುತ್ತದೆ.

ಸಿಮ್ಯುಲೇಶನ್ ಸಮಯದಲ್ಲಿ, ಸಿಬ್ಬಂದಿ ಸದಸ್ಯರು ಸಿಮ್ಯುಲೇಟೆಡ್ ಬಾಹ್ಯಾಕಾಶ ನಡಿಗೆಗಳು, ರೋಬೋಟಿಕ್ ಕಾರ್ಯಾಚರಣೆಗಳು, ಆವಾಸಸ್ಥಾನ ನಿರ್ವಹಣೆ, ಆರೋಗ್ಯ ನಿರ್ವಹಣೆ, ವ್ಯಾಯಾಮ ಮತ್ತು ಬೆಳೆ ಬೆಳವಣಿಗೆ ಸೇರಿದಂತೆ ವಿವಿಧ ರೀತಿಯ ಮಿಷನ್ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ. ಅಂದ ಹಾಗೇ ಜೂನ್ ತಿಂಗಳಲ್ಲಿ ಮಿಷನ್ ಆರಂಭವಾಗಲಿದೆ.

ಮಾನವರು ಮಂಗಳ ಗ್ರಹಕ್ಕೆ ಕಾಲಿಟ್ಟಾಗ ಸಿಬ್ಬಂದಿ, ಸಂಪನ್ಮೂಲ ಕೊರತೆ ಮತ್ತು ಸಲಕರಣೆಗಳ ವೈಫಲ್ಯದೊಂದಿಗೆ ಪರಿಸರದ ಒತ್ತಡ ಮತ್ತು ಅರೋಗ್ಯದ ಒತ್ತಡ ವನ್ನ ಎದುರಿಸಬೇಕಾಗುತ್ತದೆ. ಸಿಬ್ಬಂದಿ ಸದಸ್ಯರು ತಮ್ಮ ಪರಿಶೋಧನಾ ಸಾಮರ್ಥ್ಯಗಳನ್ನು ವಿಸ್ತರಿಸಲು ಮಂಗಳ ಗ್ರಹ ಯಾತ್ರಿಗಳಿಗೆ ಅಗತ್ಯವಿರುವ ರೊಬೊಟಿಕ್ ಅಂಶಗಳನ್ನು ಈ ಆವಾಸಸ್ಥಾನದಲ್ಲಿ ತಿಳಿದುಕೊಳ್ಳಲಿದ್ದಾರೆ. ಹೆಲಿಕಾಪ್ಟರ್ ತರಹದ ಡ್ರೋನ್ ಮತ್ತು ರೋವಿಂಗ್ ರೋಬೋಟ್ ಅನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮಂಗಳ ಗ್ರಹದ ಆವಾಸಸ್ಥಾನದ ಅವಶ್ಯಕತೆಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ನಾಸಾ ಅಂತಹ ಮೂರು ಕಾರ್ಯಾಚರಣೆಗಳನ್ನು ಯೋಜಿಸುತ್ತಿದೆ.

suddiyaana