ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ಕಾವ್ಯಮಾರನ್ – RCB ಮಾಜಿ ವೇಗಿ SRH ತಂಡಕ್ಕೆ ಬೌಲಿಂಗ್ ಕೋಚ್

2026 ಐಪಿಎಲ್ಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಈಗಾಗಲೇ ಭರ್ಜರಿ ಸಿದ್ಧತೆಯಲ್ಲಿದೆ. ಈ ಬಾರಿಯ ಐಪಿಎಲ್ನಲ್ಲಿ ಕಾವ್ಯಮಾರನ್ ತಂಡ ಸಾಕಷ್ಟು ಮುಖಭಂಗಕ್ಕೆ ಒಳಗಾಗಿತ್ತು. ಹೀಗಾಗಿ ಹೈದರಾಬಾದ್ ಪ್ರಾಂಚೈಸಿ ಈಗಲೇ ಇಡೀ ತಂಡಕ್ಕೆ ಸರ್ಜರಿ ಶುರುಮಾಡಿದೆ. ಜೊತೆಗೆ ಮುಂದಿನ ಐಪಿಎಲ್ನಲ್ಲಿ ಗೆಲುವು ಪಡೆಯಲು ಈಗಲೇ ಕೋಚ್ಗಳ ಹುಡುಕಾಟದಲ್ಲಿ ಸಕ್ಸಸ್ ಕೂಡಾ ಆಗಿದೆ.
ಇದನ್ನೂ ಓದಿ:HITಮ್ಯಾನ್ ಗಿಲ್ಲ ODI ಕ್ಯಾಪ್ಟನ್ಸಿ – ಆಸೀಸ್ ಸರಣಿಗೆ ಗಿಲ್ ನಾಯಕ?
ಸನ್ರೈಸರ್ಸ್ ಹೈದರಾಬಾದ್ ತಂಡವು 2026ರ ಐಪಿಎಲ್ಗೆ ಮಾಜಿ ಭಾರತೀಯ ವೇಗದ ಬೌಲರ್ ವರುಣ್ ಆರೋನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಐಪಿಎಲ್ನಲ್ಲಿ ಈ ಹಿಂದೆ ಆರ್ಸಿಬಿ ತಂಡದ ಪರ ಆಡಿದ್ದ ವರುಣ್, ಈಗ ತಮ್ಮ ಅನುಭವವನ್ನು SRH ತಂಡಕ್ಕೆ ನೀಡಲಿದ್ದಾರೆ. ಇದರಿಂದ ತಂಡದ ಬೌಲಿಂಗ್ ವಿಭಾಗಕ್ಕೆ ಹೊಸ ಶಕ್ತಿ ಸಿಗುವ ನಿರೀಕ್ಷೆಯಿದೆ. ವೇಗದ ಬೌಲಿಂಗ್ ಮೂಲಕ ಟೀಂ ಇಂಡಿಯಾದಲ್ಲೂ ವರುಣ್ ಆರೋನ್ ಹೆಸರು ಮಾಡಿದ್ದರು. ಕಳೆದ ಸೀಸನ್ನಲ್ಲಿ ತಂಡದ ಭಾಗವಾಗಿದ್ದ ಜೇಮ್ಸ್ ಫ್ರಾಂಕ್ಲಿನ್ ಬದಲಿಗೆ ವರುಣ್ ಆರೋನ್ ಅವರನ್ನು ತಂಡಕ್ಕೆ ನೇಮಕಗೊಳ್ಳಲಾಗಿದ್ದು, ಈ ಮಾಹಿತಿಯನ್ನು ಸ್ವತಃ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನೀಡಿದೆ.
ವರುಣ್ ಆರೋನ್ ಭಾರತ ಪರ ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ಆಡಿದ್ದಾರೆ . ಈ ವರ್ಷದ ಆರಂಭದಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವರುಣ್ಗೆ ಈಗ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಈ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿರುವ ಎಸ್ಆರ್ಹೆಚ್, ‘‘ನಮ್ಮ ಕೋಚಿಂಗ್ ಸಿಬ್ಬಂದಿಗೆ ಆಕ್ರಮಣಕಾರಿ ಬೌಲರ್ಗೆ ಸ್ವಾಗತ . ವರುಣ್ ಆರೋನ್ ಸನ್ರೈಸರ್ಸ್ ಹೈದರಾಬಾದ್ ತಂಡದ ಹೊಸ ಬೌಲಿಂಗ್ ಕೋಚ್ ಆಗಿರುತ್ತಾರೆ’ ಎಂದು ಬರೆದುಕೊಂಡಿದೆ . ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ತಮ್ಮ ವೇಗದಿಂದ ಎಲ್ಲರನ್ನೂ ಮೆಚ್ಚಿಸಿದ್ದ ವರುಣ್ಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಇದಕ್ಕೆ ಕಾರಣ ಅವರ ಇಂಜುರಿ ಸಮಸ್ಯೆ. ಈ ಸಮಸ್ಯೆಯಿಂದ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಹೆಚ್ಚು ವರ್ಷ ನಡೆಯಲಿಲ್ಲ. 2011 ರಲ್ಲಿ ಅಂತರರಾಷ್ಟ್ರೀಯ ವೃತ್ತಿಜೀವನ ಪ್ರಾರಂಭಿಸಿದ ವರುಣ್ ಆರೋನ್, 2015 ರಲ್ಲಿ ಟೀಂ ಇಂಡಿಯಾ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈ ಸಮಯದಲ್ಲಿ, ಅವರು 9 ಟೆಸ್ಟ್ ಮತ್ತು 9 ಏಕದಿನ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು, ಆಡಿದ 9 ಟೆಸ್ಟ್ಗಳಲ್ಲಿ ಒಟ್ಟು 18 ವಿಕೆಟ್ಗಳನ್ನು ಕಬಳಿಸಿದ್ದ ವರುಣ್, ಏಕದಿನ ಮಾದರಿಯಲ್ಲಿ 11 ವಿಕೆಟ್ಗಳನ್ನು ಉರುಳಿಸಿದ್ದರು. ಇದಲ್ಲದೆ, ವರುಣ್ 52 ಐಪಿಎಲ್ ಪಂದ್ಯಗಳನ್ನು ಆಡಿದ್ದು 50 ವಿಕೆಟ್ಗಳನ್ನು ಸಹ ಪಡೆದಿದ್ದಾರೆ.

ನೋಡಿರಿ

