86 ವರ್ಷದ ಮಾಜಿ ಪ್ರಧಾನಿಗೆ 33 ವರ್ಷದ ಸುಂದರಿ ಜೊತೆ ಪ್ರೀತಿ – ಸಾಯುವ ಮೊದಲು ಪ್ರೇಯಸಿಗೆ ಬರೆದರು 900 ಕೋಟಿ ಮೌಲ್ಯದ ಆಸ್ತಿ..!

ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಅವರು ಕಳೆದ ತಿಂಗಳು ನಿಧನರಾಗಿದ್ದರು. ಈ ಸುದ್ದಿಗಿಂತ ಈಗ ಅವರು ಬರೆದ ಆಸ್ತಿಯೇ ದೊಡ್ಡ ಸುದ್ದಿಯಾಗಿದೆ. ಯಾಕೆಂದರೆ, 86 ವರ್ಷದ ಮಾಜಿ ಪ್ರಧಾನಿ 33 ವರ್ಷದ ಸುಂದರಿ ಜೊತೆ ಪ್ರೀತಿಯಲ್ಲಿ ಇದ್ದಿದ್ದರು. ಕಾಡುತ್ತಿರುವ ಅನಾರೋಗ್ಯದಿಂದಾಗಿ ಪ್ರೇಯಸಿಯನ್ನು ಮದುವೆಯಾಗಿರಲಿಲ್ಲ. ಆದರೆ, ತನ್ನ ಜೀವನದ ಕೊನೇ ಕ್ಷಣಗಳಲ್ಲಿ ಪ್ರೀತಿಯ ಧಾರೆ ಸುರಿಸಿದ ಪ್ರಿಯತಮೆ ಹೆಸರಿಗೆ ತನ್ನ ಬರೋಬ್ಬರಿ 900 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬರೆದಿದ್ದಾರೆ.
ಇದನ್ನೂ ಓದಿ: 35 ವರ್ಷಗಳ ನಂತರ ಪ್ರೇಮಿಗಳ ಪುನರ್ಮಿಲನ – ಪ್ರೀತಿ ಎಂದರೆ ಇದುವೆ ತಾನೇ…!
86 ವರ್ಷದ ಬೆರ್ಲುಸ್ಕೋನಿ ಅವರು 33 ವರ್ಷದ ಮಾರ್ಟಾ ಫಾಸಿನಾ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಮದುವೆಯಾಗಿರಲಿಲ್ಲ. ದೀರ್ಘಕಾಲದ ಅನಾರೋಗ್ಯ ಅವರನ್ನು ಕಾಡುತ್ತಿತ್ತು. ಜೂನ್ 12 ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ನಿಧನರಾಗಿದ್ದಾರೆ. ಅವರ ಕೊನೆ ದಿನಗಳಲ್ಲಿ ತಮ್ಮ ಗೆಳತಿಯನ್ನು ಪತ್ನಿ ಎಂದು ಉಲ್ಲೇಖಿಸಿ ತಮ್ಮ ಸುಮಾರು 905 ಕೋಟಿ ರೂ. ಮೌಲ್ಯದ ಆಸ್ತಿಯನ್ನು (100 ದಶಲಕ್ಷ ಯುರೋ) ಬರೆದಿದ್ದಾರೆ. ಸಿಲ್ವಿಯೊ ಬರ್ಲುಸ್ಕೋನಿ ಹಾಗೂ ಮಾರ್ಟಾ ಫಾಸಿನಾ ನಡುವೆ 2020ರಲ್ಲಿ ಪ್ರೇಮಾಂಕುರವಾಗಿತ್ತು. ಈ ಹಿಂದೆ ಇಬ್ಬರನ್ನು ಮದುವೆಯಾಗಿದ್ದ ಇಟಲಿಯ ಮಾಜಿ ಪ್ರಧಾನಿ ಇಬ್ಬರಿಗೂ ವಿಚ್ಛೇದನ ನೀಡಿ ಬಳಿಕ ಮಾರ್ಟಾ ಫಾಸಿನಾ ಜೊತೆ ಸಂಬಂಧ ಬೆಳೆಸಿದ್ದರು. ವರದಿಗಳ ಪ್ರಕಾರ ಬರ್ಲುಸ್ಕೋನಿ ಅವರ ಸಂಪತ್ತನ್ನು 5 ಶತಕೋಟಿ ಯೂರೋಗಳೆಂದು ಅಂದಾಜಿಸಲಾಗಿದೆ. ಅವರು ದೊಡ್ಡ ಉದ್ಯಮಿಯೂ ಆಗಿದ್ದರಿಂದ ತಮ್ಮ ಗೆಳತಿಯ ಹೆಸರಿನಲ್ಲಿ ದೊಡ್ಡ ಮೊತ್ತದ ಆಸ್ತಿಯನ್ನು ಬರೆದಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೇ ಬರ್ಲುಸ್ಕೋನಿ ಅವರು ತಮ್ಮ ಕುಟುಂಬಸ್ಥರ ಹೆಸರಿನಲ್ಲೂ ಆಸ್ತಿಯನ್ನು ಬರೆದಿದ್ದಾರೆ. ತಮ್ಮ ಸಹೋದರ ಪಾವೋಲೊ ಅವರಿಗೆ 100 ದಶಲಕ್ಷ ಯೂರೋ, ಇಬ್ಬರು ಮಕ್ಕಳಿಗೆ ಕಂಪನಿಯಲ್ಲಿ 53% ರಷ್ಟು ಶೇರುಗಳನ್ನು ನೀಡಿದ್ದಾರೆ.