ಮೂರನೇ ಪತ್ನಿಗೂ ಕೈ ಕೊಟ್ಟ ಸಾನಿಯಾ ಮಿರ್ಜಾ ಮಾಜಿ ಗಂಡ – ಸನಾ ಜಾವೇದ್ ಮತ್ತು ಶೋಯೆಬ್ ಮಲಿಕ್ ದೂರ ದೂರ?

ಮೂರನೇ ಪತ್ನಿಗೂ ಕೈ ಕೊಟ್ಟ ಸಾನಿಯಾ ಮಿರ್ಜಾ ಮಾಜಿ ಗಂಡ – ಸನಾ ಜಾವೇದ್ ಮತ್ತು ಶೋಯೆಬ್ ಮಲಿಕ್ ದೂರ ದೂರ?

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೂರನೇ ಮದುವೆಯಾಗಿರುವ ಶೋಯೆಬ್ ಮಲಿಕ್ ಈಗ ಮೂರನೇ ಪತ್ನಿಯನ್ನು ಬಿಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ:ಅಂದು ದ್ರಾವಿಡ್.. ಇಂದು ರಾಹುಲ್ – ಅನುಭವ + ತಾಳ್ಮೆ = ಶತಕ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ತಮ್ಮ ಮೂರನೇ ಪತ್ನಿ ಸನಾ ಜಾವೇದ್ ಅವರಿಂದಲೂ ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿದ್ದರು. ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 14 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದರು. ನಂತರ ಇಬ್ಬರೂ ಬೇರೆ ಬೇರೆಯಾಗಿದ್ದರು. ಇದಾಗಿ ಕೆಲವೇ ತಿಂಗಳಲ್ಲಿ ಶೋಯೆಬ್ ಮಲಿಕ್ ತಮ್ಮ ಮೂರನೇ ವಿವಾಹದ ಘೋಷಣೆ ಮಾಡಿದರು.

ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ದಂಪತಿಗೆ ಇಜ್ಯಾನ್ ಎಂಬ ಮಗನಿದ್ದು, ಸಾನಿಯಾ ಮಿರ್ಜಾ ಜೊತೆಯಲ್ಲಿದ್ದಾನೆ. ಇನ್ನು ಸನಾ ಮತ್ತು ಶೋಯೆಬ್ ಈಗಾಗಲೇ ಬೇರೆ ಬೇರೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಾವಿನ್ನೂ ಬೇರೆಯಾಗಿಲ್ಲ. ಜೊತೆಯಾಗಿದ್ದೇವೆ ಎಂಬ ಮಾಹಿತಿಯನ್ನು ರವಾನಿಸುವ ಪ್ರಯತ್ನ ಮಾಡಿದ್ದಾರೆ ಶೋಯೆಬ್ ಮಲಿಕ್.ಡಿವೋರ್ಸ್‌ ಸುಳ್ಳು ಎಂದು ಅವರೇ ಪರೋಕ್ಷವಾಗಿ ಹೇಳಿದ್ದಾರೆ.

Sulekha