ಬದುಕಿನ ಪಯಣ ಮುಗಿಸಿದ ಮಾಜಿ ವಿಶ್ವಸುಂದರಿ ಸ್ಪರ್ಧಿ – ‘ಎಂದೆಂದಿಗೂ ಮೇಲಕ್ಕೆ ಹಾರು ನನ್ನ ಪುಟ್ಟ ತಂಗಿ’ ಎಂದು ಸಹೋದರನ ಕಂಬನಿ
ಮಾಜಿ ವಿಶ್ವಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್ ಕೇವಲ 26 ವರ್ಷದಲ್ಲೇ ತನ್ನ ಬದುಕಿನ ಪಯಣ ಮುಗಿಸಿದ್ದಾರೆ. 2015ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದ ಈ ಚೆಲುವೆ ಮುಂದೊಂದು ದಿನ ತನ್ನ ಸೌಂದರ್ಯದ ಮೂಲಕವೇ ಜಗತ್ತೇ ನಿಬ್ಬೆರಗಾಗುವಂತೆ ಮಾಡುವ ಮಹದಾಸೆ ಹೊಂದಿದ್ದರು. ಆದರೆ, ವಿಧಿ ನಿಯಮವೇ ಬೇರೆಯಾಗಿತ್ತು. ಚೆಲುವೆಯ ಬದುಕಿನ ಪಯಣ ಬೇರೆ ರೀತಿಯಲ್ಲಿ ಅಂತ್ಯವಾಗಿದೆ.
ಇದನ್ನೂ ಓದಿ: 40 ವರ್ಷ ಕಾದ್ರೂ ಸಿಕ್ಕಿಲ್ಲ ರೈಟ್ ಪರ್ಸನ್! – ತನ್ನನ್ನು ತಾನೇ ಮದುವೆಯಾದ ಮಹಿಳೆ
ಮಾಜಿ ವಿಶ್ವಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್ ಅವರು ಮೃತಪಟ್ಟಿದ್ದಾರೆ. ಗರ್ಭ ಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶೆರಿಕಾ ಅ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಚೆಲುವೆ ಶೆರಿಕಾ ಅವರು ಅಕ್ಟೋಬರ್ 13ರಂದು ಮೃತಪಟ್ಟಿದ್ದಾರೆ. ಶೆರಿಕಾ ಅವರು ಗರ್ಭಕಂಠದ ಕ್ಯಾನ್ಸರ್ ಕಾರಣದಿಂದ ಕಿಮಿಯೋ ಥೆರಪಿ ಹಾಗೂ ರೇಡಿಯೋ ಥೆರಪಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಉರುಗ್ವೆ ಮಾತ್ರವಲ್ಲದೆ ವಿಶ್ವವೇ ಶೆರಿಕಾ ಸಾವಿನಿಂದ ಶಾಕ್ ಆಗಿದೆ. ‘ಯಾವಾಗಲೂ, ಎಂದೆಂದಿಗೂ ಮೇಲಕ್ಕೆ ಹಾರು ನನ್ನ ಪುಟ್ಟ ತಂಗಿ’ ಎಂದು ಶೆರಿಕಾ ಅವರ ಸಹೋದರ ಮೈಕ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನನ್ನ ಜೀವನದಲ್ಲಿ ಭೇಟಿಯಾದ ಅತ್ಯಂತ ಸುಂದರವಾದ ಮಹಿಳೆ ಎಂದೂ ಅವರು ಬರೆದಿದ್ದಾರೆ.
ಕಳೆದ 2 ವರ್ಷಗಳಿಂದ ಶೆರಿಕಾ ಅವರು ಕ್ಯಾನರ್ ನಿಂದ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ಹಲವು ಬಾರಿ ಚಿಕಿತ್ಸೆಗೆ ಒಳಗಾದರೂ ಯಾವುದೇ ಪ್ರಯೋಜನವಾಗಿಲ್ಲ. ಮಿಸ್ ಉರುಗ್ವೆ, ಕಾರ್ಲಾ ರೊಮೆರೊ ಅವರು ನನ್ನ ಜೀವನದಲ್ಲಿ ನಾನು ಭೇಟಿಯಾದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು ಎಂದು ಶೋಕ ವ್ಯಕ್ತಪಡಿಸಿದ್ದಾರೆ.