ಕಾಂಗ್ರೆಸ್ ವೈಟ್‌ವಾಶ್‌ಗೆ ರಾಜಣ್ಣ ಶಪಥ! – ಒತ್ತಡವೋ, ಬಿಜೆಪಿಗೋ?

ಕಾಂಗ್ರೆಸ್ ವೈಟ್‌ವಾಶ್‌ಗೆ ರಾಜಣ್ಣ ಶಪಥ! – ಒತ್ತಡವೋ, ಬಿಜೆಪಿಗೋ?

ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ನಡೆಯುತ್ತೆ.. ಸಿಎಂ ಬದಲಾವಣೆ ಆಗುತ್ತೆ ಅನ್ನೋ ಸುದ್ದಿ ಸೈಲೆಂಟ್  ಆಗ್ತಾ ಇದ್ದಂತೆ ಕೆ ಎನ್‌ ರಾಜಣ್ಣ ಆಡಿರೋ ಮಾತಿನ ಈಗ ಬಗ್ಗೆ ಚರ್ಚೆ ಆಗ್ತಿದೆ.. ರಾಹುಲ್ ಗಾಂಧಿ ಬಗ್ಗೆ ಮಾತನಾಡಿ ಸಚಿವ ಸ್ಥಾನ ಕಳೆದುಕೊಂಡಿರೋ ರಾಜಣ್ಣ ಈಗ ಕಾಂಗ್ರೆಸ್ ಬಿಡೋ ಮಾತುಗಳನ್ನ ಆಡ್ತಾ ಇದ್ದಾರೆ.. ಕಾಂಗ್ರೆಸ್ಗೆ ಕೈ ಕೊಟ್ಟು ಬಿಜೆಪಿನೋ  ಅಥವಾ ಬೇರೆ ಪಕ್ಷದ ಬಾವುಟ ಹಿಡಿಯೋ ಹಿಂಟ್ ಕೊಟ್ಟಿದ್ದಾರೆ.

ಮಧುಗಿರಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ರಾಜಣ್ಣ 2004ರಲ್ಲಿ ನನಗೆ ಕಾಂಗ್ರೆಸ್ ಪಾರ್ಟಿಯಲ್ಲಿ ಸರಿಯಾಗಿ ಗೌರವ ಕೊಟ್ಟಿಲ್ಲ ಅಂತ ನಾನು  ಜೆಡಿಎಸ್ ಸೇರಿದಾಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವೈಟ್ ವಾಶ್ ಮಾಡಿದ್ವಿ.. ಮತ್ತೆ ಅಂತಹ ಸಂದರ್ಭ ಬಂದರೂ ಬರಬಹುದು..  ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದ ಮೇಲೆ ಅಂತಹ ಪರಿಸ್ಥಿತಿ ಬರಲಿಕ್ಕಿಲ್ಲ ಎಂದು ಅಂದುಕೊಳ್ಳೋಣ ಅಂತ ಹೇಳಿದ್ದಾರೆ.   ಹಾಗೇ.. ನಾನು ಮಧುಗಿರಿ ಕ್ಷೇತ್ರಕ್ಕೆ ಬಂದಾಗ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು ರ್ಯಾಲಿ ಮಾಡುತ್ತಿದ್ದರು. ಆದರೆ ಇಂದಿನ ರ್ಯಾಲಿಯಲ್ಲಿ ಯಾರೂ ಕಾಂಗ್ರೆಸ್ ಬಾವುಟ ಹಿಡಿದಿಲ್ಲ, ಎಲ್ಲಿಯೂ ಕಾಣಿಸುತ್ತಿಲ್ಲ. ಬಹುಶಃ ಅವರೆಲ್ಲರಿಗೂ ಕಾಂಗ್ರೆಸ್ ಮೇಲೆ ಬೇಸರ ಬಂದಿರಬೇಕು. ನಾನು ಯಾವ ಪಕ್ಷದ ಬಾವುಟ ಹಿಡಿಯಬೇಕು ಎಂದು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇನೆ  ಎಂದಿದ್ದಾರೆ. ರಾಜಣ್ಣ ಅವರ ಈ ಕೊನೆಯ ಮಾತು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಮೇಕೆದಾಟು  ಪರವಾಗಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು – ತಮಿಳುನಾಡು  ಸಲ್ಲಿಸಿದ್ದ ಅರ್ಜಿ ವಜಾ

ನಿಮ್ಗೆ ಈ ರಾಜಣ್ಣನ  ಮಾತು ಕೇಳಿದಾಗ ನಿಜಕ್ಕೂ ಅಶ್ಚರಿ ಆಗುತ್ತೆ.. ಯಾಕಂದ್ರೆ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಒಬ್ಬ ನಾಯಕ ಪಕ್ಷದ ವಿರುದ್ಧವೇ ಮಾತನಾಡಿದ್ದಾರೆ. ಹಾಗೇ ಮತ್ತೆ ಕಾಂಗ್ರೆಸ್ ಗೌರವ ಕೊಟ್ಟಿಲ್ಲ ಅಂದ್ರೆ ಬೇರೆ ಪಕ್ಷ ಸೇರುತ್ತೇನೆ ಅಂತ ಹೇಳಿದ್ದಾರೆ. ಆದ್ರೆ ಇಲ್ಲಿ  ರಾಜಣ್ಣ ಮತ್ತೆ ಜೆಡಿಎಸ್ ಸೇರುವುದು ಡೌಟ್‌.. ಹಾಗೇ ತನ್ನ ಸಿದ್ಧಾಂತಕ್ಕೆ ಅವರು ಬದ್ಧವಾಗಿದ್ರೆ ಬಿಜೆಪಿಗೆ ಕೂಡ ಹೋಗಲ್ಲ..ಒಂದೇ ಕಾಂಗ್ರೆಸನಲ್ಲಿ ಇರಬೇಕು, ಇಲ್ಲ  ಪಕ್ಷೇತರವಾಗಿ ನಿಲ್ಲಬೇಕು.. ಇಲ್ಲಿ ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡಿದ್ದೇ ರಾಹುಲ್ ಗಾಂಧಿ ವಿಷ್ಯದಲ್ಲಿ.. ರಾಹುಲ್ ಗಾಂಧಿಯವರ ವೋಟ್ ಚೋರಿ ಆರೋಪಕ್ಕೆ ನನ್ನ ಬೆಂಬಲವೂ ಇಲ್ಲ, ಊಹಪೋಹಗಳಿಗೆ ಯಾರೂ ಮಾನ್ಯತೆ ಕೊಡಬಾರದು ಅಂತ ರಾಜಣ್ಣ ಹೇಳಿದ್ರು. ನಂತ್ರ ಇವರು ಸಚಿವ ಸ್ಥಾನ ಕಳೆದುಕೊಂಡ್ರು. ಸಿದ್ದರಾಮಯ್ಯ ಆಪ್ತರಾಗಿದ್ರು ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಕ್ಕೆ ರಾಜಣ್ಣ ತಲೆದಂಡ ಆಗಿತ್ತು.. ಹೀಗಾಗಿ ರಾಜಣ್ಣ ಬಿಜೆಪಿಗೆ ಹೋದ್ರೂ ಹೋಗಬಹುದು.. ಬಿಜೆಪಿಯವರು ಇದ್ದನ್ನ ಇಟ್ಟುಕೊಂಡು ತಮ್ಮ ಪಕ್ಷಕ್ಕೆ ರಾಜಣ್ಣನನ್ನ ಸೇರಿಸಿಕೊಳ್ಳಬಹುದು. ರಾಹುಲ್ ಗಾಂಧಿ ಸುಳ್ಳ ಆರೋಪದ ಬಗ್ಗೆ ಧ್ವನಿದ್ದಾರೆ ಅವರನ್ನ ಬಿಜೆಪಿಗೆ ಸೇರಿಸಿಕೊಂಡ್ರೆ ತಪ್ಪೇನು ಇಲ್ಲ ಅಂತ  ಬಿಜೆಪಿಯ ಬಗ್ಗೆ ರಾಜಣ್ಣ ಮಾತನಾಡಿದ್ದನ್ನ ಮರೆತು ಪಕ್ಷಕ್ಕೆ ಸೇರಿಸಿಕೊಳ್ಳಬಹುದು. ಹಾಗೇ ರಾಜಣ್ಣ ಕೂಡ ಬೇರೆ ಪಕ್ಷಕ್ಕೆ  ಹೋಗುತ್ತೇನೆ ಅಂತ ಹೇಳಿ  ಸಿದ್ದರಾಮಯ್ಯ ಮೂಲಕ ಕಳೆದುಕೊಂಡಿರೋ ಸಚಿವ ಸ್ಥಾನವನ್ನ  ಪಡೆಯ ಪಯತ್ನ ಮಾಡುತ್ತಿರಬಹುದು.. ರಾಜಣ್ಣನನ್ನ ಕಳೆದುಕೊಳ್ಳವುದ್ದಕ್ಕೆ ಸಿದ್ದರಾಮಯ್ಯ ರೆಡಿ ಇಲ್ಲ.. ಹೀಗಾಗಿ ಹೈ ಕಾಮಾಂಡ್ ಒಪ್ಪಿಸಿ ಸಚಿವ ಸ್ಥಾನ ನೀಡಿದ್ರು ಅಚ್ಚರಿಯಿಲ್ಲ.. ಆದ್ರೆ ರಾಜಣ್ಣ ಅವರ ಓಪನ್ ಸ್ಟೇಟ್‌ಮೆಂಟ್ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡುತ್ತಿರುವುದಂತು ಸತ್ಯ..

ಹಾಗೇ ರಾಜಣ್ಣ ಹೈಕಮಾಂಡ್‌ಗೂ ಕೂಡ ಪತ್ರ ಬರೆದಿದ್ದಾರಂತೆ. ರಾಜಣ್ಣನೇ ಹೇಳಿದ್ದಂತೆ ನಾನು ಹಿಂದೆ ನಡೆದ ಘಟನೆ ಬಗ್ಗೆ ಸಂಪೂರ್ಣವಾದ ವಿವರವುಳ್ಳ ಪತ್ರವನ್ನು ಕಳಿಸಿದ್ದೇನೆ. ನಾನು ಅವರನ್ನ ಭೇಟಿ ಮಾಡೋದ್ದಕ್ಕೆ ಸಮಯ ಕೇಳಿದ್ದೇನೆ. ನಾನು ಯಾವುದೇ ಮಂತ್ರಿ ಸ್ಥಾನ ಕೊಡಿ ಅಂತ ಕೇಳಿಲ್ಲ. ಹೈಕಮಾಂಡ್‌ನಲ್ಲಿ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಿದೆ ಅದನ್ನ ಕ್ಲಿಯರ್ ಮಾಡಲು ಸಮಯ ಕೇಳಿದ್ದೇನೆ ಎಂದ ರಾಜಣ್ಣ ಹೇಳಿದ್ದಾರೆ. ಆದ್ರೆ ರಾಜಣ್ಣ ಬರೆದ ಪತ್ರವನ್ನ ಹೈಕಮಾಂಡ್ ನೋಡಿದ್ಯೋ ಇಲ್ವೋ ಗೊತ್ತಿಲ್ಲವಂತೆ. ಯಾಕಂದ್ರೆ ಅವ್ರ ಕಡೆಯಿಂದ ಯಾವುದೇ ರೆಸ್ಪಾನ್ಸ್ ಕೂಡ ಬಂದಿಲ್ಲ. ಒಂದು ವೇಳೆ ಹೈಕಮಾಂಡ್ ನಿಂದ ರಾಜಣ್ಣ ಪತ್ರಕ್ಕೆ ಯಾವುದೇ ರೆಸ್ಪಾನ್ಸ್ ಬಂದಿಲ್ಲ ಅಂದ್ರೆ  ಬಿಜೆಪಿನೋ, JDS ಅಥವಾ ಪಕ್ಷೇತರವಾಗಿ ನಿಂತು  ಕಾಂಗ್ರೆಸ್‌ನ ವೈಟ್ ವಾಶ್ ಮಾಡೋದಂತು ಪಕ್ಕಾ.. ಯಾಕಂದ್ರೆ ಅವರೇ ಹೇಳಿದ್ದಾರೆ ಮರ್ಯಾದೆ ಇಲ್ಲದ ಜಾಗದಲ್ಲಿ  ನಾನು ಇರಲ್ಲ ಅನ್ನೋದ್ದನ್ನ .. ಹಿಂದೆ ಕಾಂಗ್ರೆಸ್ ಬಿಟ್ಟು JDS  ಸೇರಿದ್ದನ್ನೂ ಮತ್ತೆ ನೆನಪಿಸಿದ್ದಾರೆ. ಹೀಗಾಗಿ ರಾಜಣ್ಣನ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.

Kishor KV