ಚುನಾವಣಾ ಆಯೋಗದ ನೂತನ ಆಯಕ್ತರಾಗಿ ಅರುಣ್ ಗೋಯೆಲ್ ಅಧಿಕಾರ ಸ್ವೀಕಾರ

ಚುನಾವಣಾ ಆಯೋಗದ ನೂತನ ಆಯಕ್ತರಾಗಿ ಅರುಣ್ ಗೋಯೆಲ್ ಅಧಿಕಾರ ಸ್ವೀಕಾರ

ನವದೆಹಲಿ: ನೂತನ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಇಂದು (ಸೋಮವಾರ) ಚುನಾವಣಾ ಆಯುಕ್ತರಾಗಿ  ಅಧಿಕಾರ ಸ್ವೀಕರಿಸಿದ್ದಾರೆ ಎಂದು ಚುನಾವಣಾ ಸಮಿತಿ ತಿಳಿಸಿದೆ.

ಪಂಜಾಬ್ ಕೇಡರ್‌ನ 1985 ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಅರುಣ್ ಗೋಯೆಲ್ ಕಾರ್ಯನಿರ್ವಹಿಸಿದ್ದರು.  ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಅರುಣ್‌ ಗೋಯಲ್‌ ಇದೇ ವರ್ಷ ಡಿಸೆಂಬರ್ 31ಕ್ಕೆ ಅವರು ನಿವೃತ್ತಿಯಾಗಬೇಕಿತ್ತು. ಆದರೆ ನ. 18ರಂದು ಕಾರ್ಯದರ್ಶಿ ಸ್ಥಾನದಿಂದ ಸ್ವಯಂ ನಿವೃತ್ತಿ ಪಡೆದಿದ್ದರು.  ಶನಿವಾರ ಕೇಂದ್ರ ಸರ್ಕಾರ ನೂತನ ಆಯುಕ್ತರನ್ನಾಗಿ ನೇಮಕ ಮಾಡಿ ಅಧಿಕೃತ ಪ್ರಕಟಣೆ ಹೊರಡಿಸಿತ್ತು.

ಇದನ್ನೂ ಓದಿ: ಬೆಂಬಲಿಗರಿಂದ 1 ರೂ. ನಾಣ್ಯಗಳ ಸಂಗ್ರಹ- 10 ಸಾವಿರ ಠೇವಣಿ ಮಾಡಿದ  ಪಕ್ಷೇತರ ಅಭ್ಯರ್ಥಿ

ಗೋಯೆಲ್ ಅವರು ಡಿಸೆಂಬರ್ 2027 ರವರೆಗೆ ಅಧಿಕಾರದಲ್ಲಿರುತ್ತಾರೆ. ಗುಜರಾತ್  ಚುನಾವಣೆಗೆ ಕೆಲವು ದಿನಗಳಿರುವಂತೆಯೇ ಗೋಯೆಲ್ ಅವರ ನೇಮಕವಾಗಿದೆ. ಮುಂಬರುವ ತಿಂಗಳುಗಳಲ್ಲಿ ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳಿವೆ. 2024ರ ಲೋಕಸಭಾ ಚುನಾವಣೆಯನ್ನು ನಡೆಸುವ ಜವಾಬ್ದಾರಿ ಕೂಡ ಗೋಯಲ್‌ ಹೆಗಲೇರಿದೆ.

ಗುಜರಾತ್‌ ಚುನಾವಣೆಗೆ ಹಿಮಾಚಲ ಪ್ರದೇಶದ ಚುನಾವಣೆಯ ದಿನಾಂಕ ಘೋಷಣೆ ವೇಳೆಯೇ ವೇಳಾಪಟ್ಟಿ ಪ್ರಕಟಿಸದ ಕಾರಣಕ್ಕೆ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಎಂಬ ಆರೋಪ ಎದುರಾಗಿತ್ತು. ಆದರೆ ಇಂತಹ ಆರೋಪಗಳನ್ನು ಮೀರಿ ಗೋಯಲ್‌ ಹೇಗೆ ಕಾರ್ಯನಿರ್ವಹಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.

 

suddiyaana