ಭಾರತದ ಸೋಲಿಗೆ ಮಾಜಿ ಕ್ರಿಕೆಟಿಗರ ಅಸಮಾಧಾನ – ಮಾಡಿದ ತಪ್ಪನ್ನ ಮಾಡುತ್ತಾ ಹೋದರೆ ಹೇಗೆ ಎಂದು ಪ್ರಶ್ನಿಸಿದ ಮಾಜಿ ಆಟಗಾರರು
ನಾಲ್ಕನೇ ಟೆಸ್ಟ್ ಸೋತ ಟೀಮ್ ಇಂಡಿಯಾದ ವಿರುದ್ಧ ಟೀಕೆಗಳ ಪ್ರವಾಹವೇ ಹರಿದುಬರುತ್ತಿದೆ. ಭಾರತದ ಕ್ರಿಕೆಟ್ ದಿಗ್ಗಜರು ಕೂಡಾ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಬೇಸರ ಹೊರಹಾಕಿದ್ದಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಪಿಲ್ಲರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ಮುಂದುವರೆಯುತ್ತಿರುವಾಗ್ಲೆ, ರಿಷಭ್ ಪಂತ್ ಜವಾಬ್ದಾರಿ ಮರೆತು ಆಡೋದು ಸರಿನಾ ಎಂಬ ಪ್ರಶ್ನೆಯನ್ನ ಸುನಿಲ್ ಗವಾಸ್ಕರ್ ಎತ್ತಿದ್ದಾರೆ. ಪಂಥ್ ಔಟಾಗ್ತಿದ್ದಂತೆ ಸ್ಡುಪಿಡ್ ಅಂತಾ ಸಿಟ್ಟಲ್ಲೇ ಗವಾಸ್ಕರ್ ಬೈದಿದ್ದಾರೆ. ಇದರ ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡಾ ಪಂಥ್ ಬ್ಯಾಟಿಂಗ್ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಪಂಥ್ ಸಹಾಯಕ್ಕೆ ಬಂದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ರೋಹಿತ್, ಕೊಹ್ಲಿ ತಂಡದಲ್ಲಿ ಬೇಕಾ? – ಆಸಿಸ್ ಅಬ್ಬರಿಸಿದಲ್ಲ.. ಭಾರತ ಎಡವಿದ್ದು!
ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ತೀರ್ಪಿಗೆ ಔಟಾಗಿರೋ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾದರೆ. ಈ ಬಗ್ಗೆ ಮಾತಾಡಿರುವ ಮಾಜಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ಮೂರನೇ ಅಂಪೈರ್ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸ್ನಿಕೋಮೀಟರ್‌ನಲ್ಲಿ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಈ ನಿರ್ಧಾರವು ಸಂಪೂರ್ಣ ತಪ್ಪು ಎಂದಿದ್ದಾರೆ. ಇನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ರವಿ ಶಾಸ್ತ್ರಿ, ಸ್ನಿಕೋ ಆಸ್ಟ್ರೇಲಿಯಾದ ಆರನೇ ಬೌಲರ್ ಎಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ರೋಹಿತ್ ಶರ್ಮಾ ನಾಯಕ ಆನ್ನೋ ಕಾರಣಕ್ಕೆ ಮಾತ್ರ ತಂಡದಲ್ಲಿದ್ದಾರೆ. ಇಲ್ಲಾಂದ್ರೆ, ಪ್ಲೆಯಿಂಗ್ ಲೆವೆನ್‌ನಲ್ಲಿ ಸ್ಥಾನ ಪಡೆಯುತ್ತಿರಲಿಲ್ಲ ಎಂದು ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್ ಹೇಳಿದ್ದಾರೆ. ರೋಹಿತ್ ಪಡುತ್ತಿರುವ ಕಷ್ಟವನ್ನು ನೋಡಿದರೆ ಅವರ ಫಾರ್ಮ್ ಅವರಿಗೆ ಬೆಂಬಲ ನೀಡುತ್ತಿಲ್ಲ. ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ನಾಯಕ.. ಅವರು ನಾಯಕನಾಗಿ ಇರದಿದ್ದರೆ ಆಡಲು ಚಾನ್ಸ್ ಸಿಗುತ್ತಿರಲಿಲ್ಲ ಎಂದು ಪಠಾಣ್ ಹೇಳಿದ್ದಾರೆ.
ಮತ್ತೊಂದೆಡೆ ಟೀಮ್ ಇಂಡಿಯಾದ ಈ ಸೋಲು, ಜೊತೆಗೆ ಸ್ಟಾರ್ ಬ್ಯಾಟರ್‌ಗಳ ವೈಫಲ್ಯಕ್ಕೆ ಮಾಜಿ ಕ್ರಿಕೆಟರ್ ಮೊಹಮ್ಮದ್ ಅಜುರುದ್ದೀನ್ ಬೇಸರ ಹೊರಹಾಕಿದ್ದಾರೆ. ಪದೆ ಪದೇ ಮಾಡಿದ ತಪ್ಪುಗಳನ್ನೇ ಮಾಡಿ ಔಟ್ ಆಗುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ತಾನು ಮಾಡಿದ ತಪ್ಪುಗಳಿಂದ ಪಾಠ ಕಲಿಯದೇ ಇದ್ದರೆ, ಸರಣಿಯನ್ನು ಕೈ ಚೆಲ್ಲಬೇಕಾಗುತ್ತದೆ ಎಂದು ಅಜರುದ್ದೀನ್ ಬೇಸರ ವ್ಯಕ್ತ ಪಡಿಸಿದ್ದಾರೆ.