ನಿನ್ನ ಪಾದಗಳು ಯಾವಾಗಲೂ ನೆಲದ ಮೇಲೆಯೇ ಭದ್ರವಾಗಿರಲಿ – ಪ್ರತಿಭೆಯಿಂದ ನೀನು ಆಕಾಶವನ್ನು ಮುಟ್ಟುವಂತಾಗಲಿ
ಮಗನ ಯಶಸ್ಸಿಗೆ ಹೆಮ್ಮೆ ಪಟ್ಟ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್

ನಿನ್ನ ಪಾದಗಳು ಯಾವಾಗಲೂ ನೆಲದ ಮೇಲೆಯೇ ಭದ್ರವಾಗಿರಲಿ – ಪ್ರತಿಭೆಯಿಂದ ನೀನು ಆಕಾಶವನ್ನು ಮುಟ್ಟುವಂತಾಗಲಿಮಗನ ಯಶಸ್ಸಿಗೆ ಹೆಮ್ಮೆ ಪಟ್ಟ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್

ಕ್ರಿಕೆಟ್ ಅಂಗಳದಲ್ಲಿ ಅದೆಷ್ಟೇ ಸಿಡಿಲಬ್ಬರ ತೋರಿಸಿದರೂ ಹೆತ್ತವರ ಮುಂದೆ ಮಕ್ಕಳು ಎಂದೆಂದಿಗೂ ಪುಟ್ಟ ಮಗುವೇ. ಇದಕ್ಕೆ ಮತ್ತೊಂದು ಸಾಕ್ಷಿ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪುತ್ರ. ಆರ್ಯವೀರ್ ಸೆಹ್ವಾಗ್  ಪಾಕಿಸ್ತಾನ ತಂಡದ ಎದುರು ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ನೆರವಾಗಿದ್ದರು. ಭಾರತ ಗೆಲ್ಲುತ್ತಿದ್ದಂತೆ ಮೊದಲು ಕಾಲ್ ಮಾಡಿದ್ದು ತನ್ನ ಮುದ್ದಿನ ಅಪ್ಪನಿಗೆ. ಅಪ್ಪ ಮಗನ ಹೃದಯಸ್ಪರ್ಶಿ ಮಾತುಕತೆ ಅಭಿಮಾನಿಗಳ ಮನಗೆದ್ದಿದೆ.

ಇದನ್ನೂ ಓದಿ:T-20I, ODI ಆಯ್ತು ಈಗ ಟೆಸ್ಟ್ ಟಾಸ್ಕ್ – WTC ರೇಸ್ ನಲ್ಲಿ ಉಳಿಯುತ್ತಾ ಭಾರತ?

ಪಾಕಿಸ್ತಾನದ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ವಿಜಯಪತಾಕೆ ಹಾರಿಸಿದ ಆರ್ಯವೀರ್ ಸೆಹ್ವಾಗ್‌ ತನ್ನ ತಂದೆ ವೀರೇಂದ್ರ ಸೆಹ್ವಾಗ್ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತಾಡಿದ ರೀತಿ ಅಭಿಮಾನಿಗಳ ಮನಗೆದ್ದಿದೆ. ಭಾರತದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪುತ್ರ ಆರ್ಯವೀರ್ ಸೆಹ್ವಾಗ್ ನಡುವಿನ ಅಪ್ಪ-ಮಗನ ಬಾಂಧವ್ಯ ಕೂಡಾ ಹೃದಯಸ್ಪರ್ಶಿಯಾಗಿದೆ.

2026ರ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಚಾಂಪಿಯನ್ ಆದ ಬೆನ್ನಲ್ಲೇ, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಮಗನಿಗೆ ಸೆಹ್ವಾಗ್ ನೀಡಿರುವ ಸಂದೇಶ ನಿಜಕ್ಕೂ ಹೆಮ್ಮೆ ಪಡುವಂತಿದೆ. ತಮ್ಮ ಪುತ್ರ ಆರ್ಯವೀರ್ ಜೊತೆಗಿನ ವಿಡಿಯೋ ಕರೆಯ ಸಂಭಾಷಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ವೀರೇಂದ್ರ ಸೆಹ್ವಾಗ್ ಹಂಚಿಕೊಂಡಿದ್ದಾರೆ. ಗೆಲುವಿನ ಸಂಭ್ರಮದಲ್ಲಿದ್ದ ಆರ್ಯವೀರ್, ತಕ್ಷಣವೇ ತಂದೆಗೆ ವಿಡಿಯೋ ಕಾಲ್ ಮಾಡಿದ್ದರು. ಅಪ್ಪಾ, ಕೊನೆಯಲ್ಲಿ ನನಗೆ ತುಂಬಾನೇ ನರ್ವಸ್ ಆಗಿತ್ತು. ಗೆಲ್ಲುವವರೆಗೂ ನಾನು ಮನಸ್ಸಿನಲ್ಲೇ ‘ಸೀತಾ ರಾಮ್, ಸೀತಾ ರಾಮ್’ ಎಂದು ಜಪಿಸುತ್ತಿದ್ದೆ ಎಂದು ಆರ್ಯವೀರ್ ಹೇಳಿದ್ದಾರೆ. ಮೈದಾನದಲ್ಲಿದ್ದ ಅಭಿಮಾನಿಗಳು ಕೂಡ ಸೆಹ್ವಾಗ್, ಸೆಹ್ವಾಗ್ ಎಂದು ಸಪೋರ್ಟ್ ಮಾಡಿದ್ದನ್ನು ಕೂಡಾ ತಂದೆಗೆ ತಿಳಿಸಿದರು. ಆಗ ತಂದೆ ಮಗನಿಗೆ ಪ್ರೀತಿಯಿಂದಲೇ ಜೀವನದ ಪಾಠ ಮಾಡುತ್ತಲೇ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ. “ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಯದಿಂದ ಇರಬೇಕು ಮತ್ತು ಕಠಿಣ ಪರಿಶ್ರಮ ಮುಂದುವರಿಸಬೇಕು”  ಎಂದು ವೀರೇಂದ್ರ ಸೆಹ್ವಾಗ್ ಆರ್ಯವೀರ್​ಗೆ ಕಿವಿಮಾತು ಹೇಳಿದ್ದಾರೆ.

ಇನ್ನು ವೀರೇಂದ್ರ ಸೆಹ್ವಾಗ್ ಹಂಚಿಕೊಂಡ ಬರಹ ಕೂಡಾ ಅಭಿಮಾನಿಗಳ ಮನಗೆದ್ದಿದೆ. ಕೆಲವು ಕ್ಷಣಗಳು ಪ್ರಶಸ್ತಿಗಳು, ರನ್‌ಗಳು ಮತ್ತು ಟ್ರೋಫಿಗಳಿಗಿಂತಲೂ ದೊಡ್ಡದಾಗಿರುತ್ತವೆ. ಇವು ಒಬ್ಬ ತಂದೆ ತನ್ನ ಜೀವನಪರ್ಯಂತ ನೆನಪಿಟ್ಟುಕೊಳ್ಳುವ ಸುಂದರ ನೆನಪುಗಳು. ನಿನ್ನ ಪಾದಗಳು ಯಾವಾಗಲೂ ನೆಲದ ಮೇಲೆಯೇ ಭದ್ರವಾಗಿರಲಿ ಮತ್ತು ನಿನ್ನ ಕಠಿಣ ಪರಿಶ್ರಮ ಹಾಗೂ ಪ್ರತಿಭೆಯಿಂದ ನೀನು ಆಕಾಶವನ್ನು ಮುಟ್ಟುವಂತಾಗಲಿ. ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸೆಹ್ವಾಗ್ ಅವರ ಕಿವಿಮಾತು, ಮಗನಿಗೆ ತುಂಬಿದ ಕ್ರೀಡಾ ಸ್ಪೂರ್ತಿ, ಮಗನ ಜೊತೆ ವಿನಯತೆಯೇ ಮುಖ್ಯ ಎಂದು ಹೇಳಿರುವ ಜೀವನದ ಪಾಠ ಅಪ್ಪ ಮಗನ ಬಾಂಧವ್ಯ ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿದೆ. ಜೊತೆಗೆ ಈ ಮಾತು ಅನೇಕ ಯುವ ಕ್ರೀಡಾಪಟುಗಳಿಗೆ ನೀಡಿದ ಉತ್ತಮ ಸಂದೇಶ ಎಂದು ಹೇಳಿದರೆ ತಪ್ಪಾಗಲಾರದು.

Sulekha

Leave a Reply

Your email address will not be published. Required fields are marked *