ಮಾಜಿ ಸಿಎಂ ಯಡಿಯೂರಪ್ಪಗೆ ಜೀವಬೆದರಿಗೆ – ಕೇಂದ್ರ ಗೃಹ ಇಲಾಖೆಯಿಂದ ಝಡ್ ಕೆಟಗರಿ ಭದ್ರತೆ
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಕೆಲವು ಸಮಾಜಘಾತುಕ ಶಕ್ತಿಗಳಿಂದ ಜೀವಬೆದರಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ವೈಗೆ ಕೇಂದ್ರ ಗೃಹ ಇಲಾಖೆ ಝಡ್ ಕೆಟಗರಿ ಭದ್ರತೆ ನೀಡಿದೆ.
ಕೇಂದ್ರ ಗುಪ್ತಚರ ಇಲಾಖೆಯು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಕೆಲವು ದುಷ್ಕರ್ಮಿಗಳಿಂದ ಪ್ರಾಣ ಬೆದರಿಕೆ ಇದೆ ಮಾಹಿತಿ ನೀಡಿತ್ತು ಯಡಿಯೂರಪ್ಪ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿಈ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ಕೈಗೊಂಡಿದೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲಭೂತ ಗುಂಪುಗಳಿಂದ ಸಂಭಾವ್ಯ ಬೆದರಿಕೆಗಳಿವೆ ಎಂದು ತಿಳಿದುಬಂದಿದೆ. ಗೃಹ ಸಚಿವಾಲಯ ನಿರ್ದೇಶನದಂತೆ ಯಡಿಯೂರಪ್ಪ ಅವರಿಗೆ ಭದ್ರತೆ ಹೆಚ್ಚಿಸಲಾಗಿದ್ದು, ಕೇಂದ್ರ ಮೀಸಲು ಪೊಲೀಸ್ ಪಡೆ ಕಮಾಂಡೋಗಳು ಒದಗಿಸುತ್ತಾರೆ.
ಯಡಿಯೂರಪ್ಪ ಅವರ ಭದ್ರತೆಗೆ ಒಟ್ಟು 33 ಝಡ್ ಕೆಟಗರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡ್‌ಗಳನ್ನು ಅವರ ನಿವಾಸದಲ್ಲಿ ಇರಿಸಲಾಗುವುದು, ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಹಗಲು-ರಾತ್ರಿ ದಿನದ 24 ಗಂಟೆ ಕಾಯುತ್ತಿರುತ್ತಾರೆ. ಸಂಭಾವ್ಯ ಬೆದರಿಕೆಗಳ ವಿರುದ್ಧ ನಿರಂತರ ಜಾಗ್ರತೆ ವಹಿಸಲು 12 ಸಶಸ್ತ್ರ ಬೆಂಗಾವಲು ಕಮಾಂಡೋಗಳನ್ನು ಮೂರು ಪಾಳಿಗಳಲ್ಲಿ ನಿಯೋಜಿಸಲಾಗುವುದು. ನಿರಂತರ ಕಣ್ಗಾವಲು ಕಾಯ್ದುಕೊಳ್ಳಲು, ಇಬ್ಬರು ವೀಕ್ಷಕರನ್ನು ಶಿಫ್ಟ್‌ಗಳಲ್ಲಿ ನಿಯೋಜಿಸಲಾಗುವುದು, ಒಟ್ಟಾರೆ ಭದ್ರತಾ ಚೌಕಟ್ಟನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ. ಯಡಿಯೂರಪ್ಪನವರು ಮೂರು ತರಬೇತಿ ಪಡೆದ ಚಾಲಕರನ್ನು ಹೊಂದಿರುತ್ತಾರೆ.