ಮಂಡ್ಯದ ಗಂಡು ಕುಮಾರಣ್ಣ – ಮಗನ ಸೋಲಿಗೆ ಅಪ್ಪನ ಪ್ರತೀಕಾರ -ಸುಮಕ್ಕನ ದಾಖಲೆ ಮುರಿದ HDK

ಮಂಡ್ಯದ ಗಂಡು ಕುಮಾರಣ್ಣ  – ಮಗನ ಸೋಲಿಗೆ ಅಪ್ಪನ ಪ್ರತೀಕಾರ -ಸುಮಕ್ಕನ ದಾಖಲೆ ಮುರಿದ HDK

ಫೈನಲಿ ಜೆಡಿಎಸ್​ನ ಭದ್ರಕೋಟೆ ಮಂಡ್ಯವನ್ನ ವಶಪಡಿಸಿಕೊಳ್ಳುವಲ್ಲಿ ಹೆಚ್.ಡಿ ಕುಮಾರಸ್ವಾಮಿ ಸಕ್ಸಸ್ ಆಗಿದ್ದಾರೆ. ಮಗ ಸೋತ ನೆಲದಲ್ಲಿ ಗೆದ್ದು ಬೀಗುವ ಮೂಲಕ ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಟಾರ್ ಚಂದ್ರು ವಿರುದ್ಧ 2 ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಈ ಸಲ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಬಳಿಕ ಮಂಡ್ಯ ಕ್ಷೇತ್ರಕ್ಕಾಗಿ ಕೊನೇ ಕ್ಷಣದವರೆಗೂ ಪೈಪೋಟಿ ನಡೆದಿತ್ತು. ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಅಭ್ಯರ್ಥಿಯಾಗಲು ಇನ್ನಿಲ್ಲದಂತೆ ಪ್ರಯತ್ನಿಸಿದ್ದರು. ಆದರೆ ಅವರ ಪ್ರಬಲ ಲಾಭಿಯ ನಡುವೆಯೂ ಕುಮಾರಸ್ವಾಮಿ ಕ್ಷೇತ್ರವನ್ನು ಜೆಡಿಎಸ್ ಗೆ ಉಳಿಸಿಕೊಂಡು ತಾವೇ ಕಣಕ್ಕಿಳಿದಿದ್ದರು. ಕುಮಾರಸ್ವಾಮಿ ಅಖಾಡಾದಲ್ಲಿ ಇದ್ದುದರಿಂದ ಹಾಗೂ ಅವರ ಎದುರು ಪ್ರಖ್ಯಾತ ಉದ್ಯಮಿ ವೆಂಕಟರಮಣೇ ಗೌಡ ಕಾಂಗ್ರೆಸ್ ಹುರಿಯಾಳಾಗಿ ತೀವ್ರ ಪೈಪೋಟಿ ನೀಡಿದ್ರು. ಮಂಡ್ಯ ಅಂದ್ರೆ ಇಂಡಿಯಾವರೆಗೂ ಸದ್ದು ಮಾಡಿದ್ದ ಕ್ಷೇತ್ರ. ಅದ್ರಲ್ಲೂ ಈ ಬಾರಿ ಮಾಜಿ ಮುಖ್ಯಮಂತ್ರಿ ಜೆಡಿಎಸ್‌ ನಾಯಕ ಹೆಚ್.ಡಿ ಕುಮಾರಸ್ವಾಮಿಯವ್ರೇ ಸ್ಪರ್ಧೆ ಮಾಡಿದ್ರಿಂದ ಕ್ಷೇತ್ರ ಪ್ರತಿಷ್ಠೆಯ ಅಖಾಡವಾಗಿ ಮಾರ್ಪಟ್ಟಿತ್ತು. ಮತ್ತೊಂದೆಡೆ ಕಾಂಗ್ರೆಸ್​ನಿಂದ ವೆಂಕಟರಾಮೇಗೌಡ ಅಲಿಯಾಸ್ ಸ್ಟಾರ್ ಚಂದ್ರುರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.

ಕಾಂಗ್ರೆಸ್​ ಅಭ್ಯರ್ಥಿ ಪರವಾಗಿ ಕೈ ನಾಯಕ ರಾಹುಲ್​ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಆದಿಯಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಹಾಗೇ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹೆಚ್​ಡಿಕೆ ಪರವಾಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಆದಿಯಾಗಿ ಹಲವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಇದರಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ರಾಜ್ಯದ ಸಿರಿವಂತ ಅಭ್ಯರ್ಥಿಗಳಾದ ಸ್ಟಾರ್‌ ಚಂದ್ರು ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಕುಮಾರಸ್ವಾಮಿ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಮೊದಲ ಚುನಾವಣೆಯಲ್ಲಿ ಸ್ಟಾರ್‌ ಚಂದ್ರು ಗೆಲುವಿನ ಪಣ ತೊಟ್ಟಿದ್ದರು. ಹೇಳಿ ಕೇಳಿ ಮಂಡ್ಯ ಲೋಕಸಭಾ ಕ್ಷೇತ್ರ ದಳಪತಿಗಳಿಗೆ ಭದ್ರಕೋಟೆಯಾಗಿದ್ದು, 2019 ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್‌ ಕುಮಾರಸ್ವಾಮಿ ಅವರು ಹೀನಾಯವಾಗಿ ಸೋಲು ಅನುಭವಿಸಿದ್ದರು.

2019 ರ ಲೋಕಸಭಾ ಚುಣಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್‌ ಅವರು ಭರ್ಜರಿ ಜಯಗಳಿಸಿದ್ದರು. ಆದರೆ ಈ ಬಾರಿ ಸುಮಲತಾ ಅವರು ಸ್ಪರ್ಧೆಯಿಂದ ಕೆಳಗಿಳಿದಿದ್ದು ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಹೀಗಾಗಿ ಕಳೆದು ಕೊಂಡ ಕ್ಷೇತ್ರವನ್ನ ಮರಳಿ ಪಡೆಯುವ ನಿಟ್ಟಿನಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಕಣಕ್ಕಿಳಿದಿದ್ರು. ಕುಮಾರಸ್ವಾಮಿಯನ್ನ ಸೋಲಿಸ್ಬೇಕು ಅಂತಾ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಒಂದಾಗಿದ್ರು. ಆದ್ರೆ ಕೊನೆಗೂ ಕುಮಾರಣ್ಣನೇ ಜಯಭೇರಿ ಬಾರಿಸಿದ್ದಾರೆ. ಇನ್ನು ಕುಮಾರಸ್ವಾಮಿ ಲೀಡ್‌ನಲ್ಲಿಯೂ ದಾಖಲೆ ಬರೆದಿದ್ದಾರೆ. ಮತಎಣಿಕೆಯ ಸಂದರ್ಭದಲ್ಲಿ ಹಿಂದಿನ ಚುನಾವಣೆಯಲ್ಲಿ ಸುಮಲತಾ ಪಡೆದಿರುವ ಲೀಡ್ ನಂಬರ್‌ನ್ನು ಕುಮಾರಸ್ವಾಮಿ ಮೀರಿಸಿದ್ದಾರೆ. ಕಳೆದ ಬಾರಿ ಸುಮಲತಾ  ಪಡೆದ ಲೀಡ್‌ಗಿಂತ ಹೆಚ್ಚು ಹೆಚ್ಚು ಅಂತರದ ಲೀಡ್ ಪಡೆಯುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

suddiyaana