ಭ್ರಷ್ಟಾಚಾರ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ

ಭ್ರಷ್ಟಾಚಾರ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ

ಆಂಧ್ರಪ್ರದೇಶದಲ್ಲಿ ರೋಚಕ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿಯನ್ನ ಬಂಧಿಸಲಾಗಿದೆ. ರಾತ್ರಿ 12 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ನಾಟಕೀಯ ಸನ್ನಿವೇಶಗಳು ನಡೆದವು. ಅಂತಿಮವಾಗಿ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ವಶಕ್ಕೆ ಪಡೆಯುವಲ್ಲಿ ಸಫಲರಾದ ಸಿಐಡಿ ಅಧಿಕಾರಿಗಳು ಟಿಡಿಪಿ ಮುಖ್ಯಸ್ಥನ ಕಾರಲ್ಲೇ ತಮ್ಮ ಕಚೇರಿಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ : ಹಿಟ್ & ರನ್ ಕೇಸ್ ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್ – ತಪ್ಪು ಮಾಡಿದ್ದು ನಾನೇ ಎಂದ ಗಿಚ್ಚಿ ಗಿಲಿಗಿಲಿ ನಟ ಚಂದ್ರಪ್ರಭ

ನೆರೆರಾಜ್ಯ ಆಂಧ್ರ ಪ್ರದೇಶದಲ್ಲಿ ಸಿಐಡಿ ಪೊಲೀಸ್ ಅಧಿಕಾರಿಗಳು (CID sleuths) ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶ ಪಕ್ಷದ (TDP) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರನ್ನು ಬಂಧಿಸಿದ್ದಾರೆ. ರಾಜ್ಯ ಪೊಲೀಸ್ ಶುಕ್ರವಾರ ಹೊರಡಿಸಿರುವ ಪ್ರಕಟಣೆಯೊಂದರ ಪ್ರಕಾರ ನಾಯ್ಡು ಅವರನ್ನು ಭ್ರಷ್ಟಾಚಾರದ ಅರೋಪವೊಂದರಲ್ಲಿ ಅರೆಸ್ಟ್ ಮಾಡಲಾಗಿದೆ. ಶುಕ್ರವಾರ ರಾತ್ರಿ ಸಿಐಡಿ ಅಧಿಕಾರಿಗಳು ನಾಯ್ಡುರನ್ನು ವಶಕ್ಕೆ ಪಡೆಯಲು ಹೋದಾಗ ಅವರು ನಂದ್ಯಾಲದ ಜ್ಞಾನಪುರಂನಲ್ಲಿರುವ ಆರ್ ಕೆ ಫಂಕ್ಷನ್ ಹಾಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ. ಅವರನ್ನು ಬಂಧಿಸಲು ಹೋದ ಅಧಿಕಾರಿಗಳು ಟಿಡಿಪಿ ಕಾರ್ಯಕರ್ತರ ತೀವ್ರ ಪ್ರತಿರೋದ ಎದುರಿಸಬೇಕಾಯಿತು. ಹಾಲ್ ನಲ್ಲಿ ರಾತ್ರಿ 12 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ನಾಟಕೀಯ ಸನ್ನಿವೇಶಗಳು ನಡೆದವು. ಅಂತಿಮವಾಗಿ ನಾಯ್ಡುರನ್ನು ವಶಕ್ಕೆ ಪಡೆಯುವಲ್ಲಿ ಸಫಲರಾದ ಸಿಐಡಿ ಅಧಿಕಾರಿಗಳು ಟಿಡಿಪಿ ಮುಖ್ಯಸ್ಥನ ಕಾರಲ್ಲೇ ಹಾಲ್ ನಿಂದ ತಮ್ಮ ಕಚೇರಿಗೆ ಕರೆದೊಯ್ದರು.

ಚಂದ್ರಬಾಬು ನಾಯ್ಡು ಅವರ ಬಂಧನವಾದ ಆರ್.ಕೆ. ಫಂಕ್ಷನ್ ಹಾಲ್ ನಲ್ಲಿ ಸೆ. 9ರ ಬೆಳಗಿನ ಜಾವ ಭಾರೀ ಹೈಡ್ರಾಮಾ ನಡೆದವು. ನಾಯ್ಡು ಹಾಗೂ ಅವರ ಬೆಂಬಲಿಗರು ಅಲ್ಲಿ ಆ ಫಂಕ್ಷನ್ ಹಾಲ್ ನಲ್ಲಿರುವುದನ್ನು ತಿಳಿದೇ ಅವರನ್ನು ಅಲ್ಲಿಯೇ ವಶಕ್ಕೆ ಪಡೆಯಲು ನೇರವಾಗಿ ಅಲ್ಲಿಗೇ ಪೊಲೀಸರು ಧಾವಿಸಿದ್ದರು. ನಾಯ್ಡು ಅವರ ಬೆಂಬಲಿಗರು ಜೊತೆಗಿರುವಾಗ ನಾಯ್ಡು ಅವರನ್ನು ಬಂಧಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಅರಿತಿದ್ದ ಪೊಲೀಸರು, ನಂಧ್ಯಾಲ ವಲಯದ ಡಿಐಜಿ ರಘುರಾಮಿ ರೆಡ್ಡಿ ಹಾಗೂ ಸಿಐಡಿ ನಿರ್ದೇಶಕರ ನೇತೃತ್ವದಲ್ಲಿ ಪೊಲೀಸರ ದೊಡ್ಡ ಪಡೆಯನ್ನೇ ರಚಿಸಲಾಗಿತ್ತು.

 

suddiyaana