ಸೀರೆ ಉಟ್ಟು ಕಬಡ್ಡಿ ಆಡಿದ ಖ್ಯಾತ ನಟಿ –  ರೋಜಾ ಟ್ಯಾಲೆಂಟ್‌ ಫುಲ್‌ ವೈರಲ್‌!

ಸೀರೆ ಉಟ್ಟು ಕಬಡ್ಡಿ ಆಡಿದ ಖ್ಯಾತ ನಟಿ –  ರೋಜಾ ಟ್ಯಾಲೆಂಟ್‌ ಫುಲ್‌ ವೈರಲ್‌!

ನಟಿ ರೋಜಾ ಸೆಲ್ವಮಣಿ ಯಾರಿಗೆ ಗೊತ್ತಿಲ್ಲ ಹೇಳಿ. ರಾಜಕಾರಣಿ, ನಟಿ, ರಿಯಾಲಿಟಿ ಶೋ ಜಡ್ಜ್ ಹೀಗೆ ಬಹುಮುಖ ಪ್ರತಿಭೆ. ರೀಲ್ ಲೈಫ್ ನಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹಲವು ರೋಲ್ ನಿಭಾಯಿಸುತ್ತಿರುವ ನಟಿ ರಾಜಕೀಯದಲ್ಲಿ ಫೈರ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ನಟಿಯಾಗಿ ತಮಿಳು, ತೆಲಗು ಮಾತ್ರವಲ್ಲದೇ ಕನ್ನಡ ಸಿನಿಮಾಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ರೋಜಾ ಅವರು ಫುಲ್‌ ಟೈಮ್‌ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ನಿತ್ಯ ಒಂದಲ್ಲ ಒಂದು ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿ, ಜನರು ಜೊತೆ ಬೆರೆಯಿತ್ತಿದ್ದಾರೆ. ಇದೀಗ ರೋಜಾ ಸೀರೆ ಉಟ್ಟು ಕಬ್ಬಡ್ಡಿ ಆಡಿದ್ದಾರೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಹೌದು, ನಟಿ ರೋಜಾ ಈಗ ಆಂಧ್ರ ಪ್ರದೇಶದಲ್ಲಿ ಸಚಿವೆ ಹುದ್ದೆಯಲ್ಲಿದ್ದಾರೆ. ರೋಜಾ ಕಾಕಿನಾಡ ಆದಿತ್ಯ ವಿದ್ಯಾ ಕ್ಯಾಂಪಸ್‌ನಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ದಾಖಲೆ ಬರೆಯುತ್ತಿರುವ ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ – ನ್ಯೂಝಿಲೆಂಡ್ ಆಟಗಾರನಿಗೆ ಬೆಂಗಳೂರಿನಲ್ಲಿ ಅಜ್ಜಿಯ ಮಮಕಾರ

ವಿಶೇಷ ಏನೆಂದರೆ, ರೋಜಾ ಅವರಿಗೆ ಮೈದಾನ ಹೊಸದಲ್ಲ, ಕಬಡ್ಡಿಯೂ ಹೊಸದೇನಲ್ಲ. ಆದ್ರೆ ಈ ಬಾರಿ ಅವರು ಸೀರೆಯಲ್ಲೇ ಮೈದಾನಕ್ಕೆ ಇಳಿದು ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡಿ ಆಟಗಾರರನ್ನು ಹುರಿದುಂಬಿಸಿದರು. ಸದ್ಯ ಅವರು ವಿದ್ಯಾರ್ಥಿಗಳೊಂದಿಗೆ ಆಡುತ್ತಿರುವ ಫೋಟೋ ವಿಡಿಯೋಗಳು ಭಾರಿ ವೈರಲ್‌ ಆಗುತ್ತಿವೆ.

ಈ ವೇಳೆ ಮಾತನಾಡಿದ ರೋಜಾ ಅವರು, ‘ಶಾಲಾ ದಿನಗಳಿಂದಲೂ ನನಗೆ ಕಬಡ್ಡಿ ಎಂದರೆ ತುಂಬ ಇಷ್ಟ. ಆದರೆ ಅಂದು ಮೈದಾನದಲ್ಲಿ ಆಡಿದರೆ ಈಗ ರಾಜಕೀಯದಲ್ಲಿ ಆಡುತ್ತಿದ್ದೇನೆ’ ಎಂದು ಹೇಳಿ ನಗು ಚೆಲ್ಲಿದ್ದಾರೆ.

Shwetha M